ವಿಜಯಪುರದಲ್ಲಿ ತಗ್ಗದ ಶಕ್ತಿ ಅಬ್ಬರ: ಬಸ್‌ಗಳು ಮಹಿಳೆಯರಿಂದ ಫುಲ್‌ ರಶ್‌!

ವಿಶ್ವ ವಿಖ್ಯಾತ ಗೋಳ ಗುಮ್ಮಟ ವೀಕ್ಷಣೆಗೆ ಮಹಿಳೆಯರ ದಂಡು ದಿನೇ ದಿನೇ ಹೆಚ್ಚುತ್ತಿದೆ. ವೀಕೆಂಡ್‌ಗಳಲ್ಲಿ ಮಹಿಳೆಯರ ಸಂಖ್ಯೆಯಲ್ಲಿ ಭಾರಿ ಏರಿಕೆಯಾಗುತ್ತಿದೆ. ಗೋಳಗುಮ್ಮಟದ ಆವರಣದಲ್ಲಿ ಮಹಿಳೆಯರು ಜಾತ್ರೆಗೆ ಬಂದಿದ್ದಾರೆ ಏನೋ ಎಂಬ ಭಾವನೆ ಬರುತ್ತಿದೆ

Women Rush To Travel on KSRTC Buses in Vijayapura grg

ವಿಜಯಪುರ(ಜೂ26):  ರಾಜ್ಯದಲ್ಲಿ ಶಕ್ತಿ ಯೋಜನೆ ಜಾರಿಯಾಗಿ 15 ದಿನಗಳು ಗತಿಸಿದರೂ ಬಸ್ಸಿನಲ್ಲಿ ಮಹಿಳಾ ಪ್ರಯಾಣಿಕರ ಸಂಖ್ಯೆ ಕಡಿಮೆಯಾಗುವ ಲಕ್ಷಣಗಳು ಕಾಣಿಸುತ್ತಿಲ್ಲ. ಜಿಲ್ಲೆಯ ಬಸ್‌ನಿಲ್ದಾಣ, ಧಾರ್ಮಿಕ ಸ್ಥಳ, ಪುಣ್ಯ ಕ್ಷೇತ್ರ, ಪ್ರವಾಸಿ ತಾಣಗಳಲ್ಲಿ ಮಹಿಳೆಯರ ಸಂಖ್ಯೆಯೇ ಜಾಸ್ತಿಯಾಗಿರುವುದು ಭಾನುವಾರ ಕಂಡುಬಂತು

ಗೋಳಗುಮ್ಮಟ ವೀಕ್ಷಣೆಗೂ ಮಹಿಳೆಯರ ಲಗ್ಗೆ

ವಿಶ್ವ ವಿಖ್ಯಾತ ಗೋಳ ಗುಮ್ಮಟ ವೀಕ್ಷಣೆಗೆ ಮಹಿಳೆಯರ ದಂಡು ದಿನೇ ದಿನೇ ಹೆಚ್ಚುತ್ತಿದೆ. ವೀಕೆಂಡ್‌ಗಳಲ್ಲಿ ಮಹಿಳೆಯರ ಸಂಖ್ಯೆಯಲ್ಲಿ ಭಾರಿ ಏರಿಕೆಯಾಗುತ್ತಿದೆ. ಗೋಳಗುಮ್ಮಟದ ಆವರಣದಲ್ಲಿ ಮಹಿಳೆಯರು ಜಾತ್ರೆಗೆ ಬಂದಿದ್ದಾರೆ ಏನೋ ಎಂಬ ಭಾವನೆ ಬರುತ್ತಿದೆ. ಅಷ್ಟೊಂದು ಮಹಿಳೆಯರು ಗೋಳಗುಮ್ಮಟದಲ್ಲಿ ಭಾನುವಾರ ಕೇವಲ ವಿಜಯಪುರ ಜಿಲ್ಲೆಯ ಮಹಿಳೆಯರಷ್ಟೇ ಅಲ್ಲ. ರಾಜ್ಯದ ಮೈಸೂರು, ಬೆಂಗಳೂರು, ದಾವಣಗೆರೆ, ಹುಬ್ಬಳ್ಳಿ, ಕಲಬುರಗಿ ಮುಂತಾದ ಜಿಲ್ಲೆಗಳಿಂದ ಮಹಿಳೆಯರು ವಿಜಯಪುರ ಗೋಳಗುಮ್ಮಟ ವೀಕ್ಷಣೆಗೆ ಆಗಮಿಸಿದ್ದರು.

ವಿಜಯಪುರ: ಶಕ್ತಿ ಯೋಜನೆಯಿಂದ ಆಟೋ, ಟ್ಯಾಕ್ಸಿ ಚಾಲಕರ ಆದಾಯ ಇಳಿಕೆ!

ಗೋಳಗುಮ್ಮಟ ಆವರಣದಲ್ಲಿ ಎಲ್ಲಿ ನೋಡಿದರು ಮಹಿಳೆಯರೇ ಗೋಚರಿಸುತ್ತಿದ್ದರು. ವಿಜಯಪುರ ಗೋಳಗುಮ್ಮಟ ಆವರಣದಲ್ಲಿ ಮಹಿಳೆಯರು ತಂಡೋಪತಂಡವಾಗಿ ಆಗಮಿಸಿ ಎಲ್ಲರ ಗಮನಸೆಳೆದರು.
ಸಿದ್ದರಾಮಯ್ಯ ಸರ್ಕಾರದ ಬಸ್ಸಿನಲ್ಲಿ ಉಚಿತ ಪ್ರಯಾಣ ಒದಗಿಸುವ ಶಕ್ತಿ ಯೋಜನೆ ಭಾಗ್ಯ ಇನ್ನು ರಶ್‌ ಆಗಿಯೇ ಇರುವ ಸಾಧ್ಯತೆ ಹೆಚ್ಚಿದೆ. ಏಕೆಂದರೆ ಮಹಿಳೆಯರ ಬಸ್‌ ಸಂಚಾರ ಕಡಮೆ ಆಗುತ್ತಿಲ್ಲ. ಎಲ್ಲ ರಸ್ತೆ ಸಾರಿಗೆ ಬಸ್‌ಗಳು ಫುಲ್‌ ಆಗಿ ಓಡಾಡುತ್ತಿವೆ.

ಪುರಾತತ್ವ ಹಾಗೂ ಪ್ರಾಚ್ಯವಸ್ತು ಇಲಾಖೆ ಮೂಲಗಳ ಪ್ರಕಾರ ಶಕ್ತಿ ಯೋಜನೆ ಜಾರಿಯಾದ ನಂತರ ಮಹಿಳಾ ಪ್ರವಾಸಿಗರ ಸಂಖ್ಯೆ ಶೇ 20ರಷ್ಟುಹೆಚ್ಚಾಗಿದೆ. ವೀಕೆಂಡ್‌ಗಳಲ್ಲಿ ಮಹಿಳೆಯರ ಸಂಖ್ಯೆ ಇನ್ನೂ ಹೆಚ್ಚಾಗಿದೆ. ಗೋಳಗುಮ್ಮಟ ವೀಕ್ಷಣೆಯ ಆದಾಯದಲ್ಲಿಯೂ ಗಣನೀಯ ಪ್ರಮಾಣದಲ್ಲಿ ಏರಿಕೆ ಕಂಡುಬಂದಿದೆ.

Latest Videos
Follow Us:
Download App:
  • android
  • ios