ಮೆಟ್ರೋ ರೈಲಿನಲ್ಲಿ ಇನ್ನೊಂದು ಪ್ರತ್ಯೇಕ ಬೋಗಿಗೆ ಮಹಿಳಾ ಪ್ರಯಾಣಿಕರ ಬೇಡಿಕೆ!
ಪ್ರಯಾಣಿಕರ ದಟ್ಟಣೆ ಹೆಚ್ಚಾಗಿರುವ ಸಮಯದಲ್ಲಿ (ಪೀಕ್ ಅವರ್) ಇನ್ನೊಂದು ಬೋಗಿ ಮೀಸಲಿಡುವಂತೆ ಮಹಿಳಾ ಪ್ರಯಾಣಿಕರು ಮನವಿ ಮಾಡಿದ್ದು, ಬಗ್ಗೆ ಸರ್ಕಾರಕ್ಕೆ ಪತ್ರ ಬರೆಯಲಾಗುವುದು ಎಂದು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮಿ ಚೌಧರಿ ಹೇಳಿದರು.
ಬೆಂಗಳೂರು (ಜೂ.12): ಮೆಟ್ರೋ ರೈಲಿನಲ್ಲಿ ಈಗ ಒಂದು ಬೋಗಿಯನ್ನು ಮಹಿಳೆಯರಿಗೆ ಮೀಸಲಿಡಲಾಗಿದೆ. ಆದರೆ ಪ್ರಯಾಣಿಕರ ದಟ್ಟಣೆ ಹೆಚ್ಚಾಗಿರುವ ಸಮಯದಲ್ಲಿ (ಪೀಕ್ ಅವರ್) ಇನ್ನೊಂದು ಬೋಗಿ ಮೀಸಲಿಡುವಂತೆ ಮಹಿಳಾ ಪ್ರಯಾಣಿಕರು ಮನವಿ ಮಾಡಿದ್ದು, ಬಗ್ಗೆ ಸರ್ಕಾರಕ್ಕೆ ಪತ್ರ ಬರೆಯಲಾಗುವುದು ಎಂದು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮಿ ಚೌಧರಿ ಹೇಳಿದರು. ಮೆಟ್ರೋದಲ್ಲಿ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ದೂರುಗಳು ಇತ್ತೀಚೆಗೆ ದಾಖಲಾಗಿದ್ದ ಹಿನ್ನೆಲೆಯಲ್ಲಿ ವಿಜಯನಗರ ನಿಲ್ದಾಣದಿಂದ ಮೆಟ್ರೋದಲ್ಲಿ ಹಲವೆಡೆ ಸಂಚರಿಸಿ ಮಹಿಳೆಯರಿಂದ ಮನವಿ ಸ್ವೀಕರಿಸಿದ ಬಳಿಕ ಅವರು ಮಾತನಾಡಿದರು.
ಮೆಟ್ರೋದಲ್ಲಿ ಮಹಿಳೆಯರಿಗೆ ಲೈಂಗಿಕ ಕಿರುಕುಳ ನೀಡಿದ ಬಗ್ಗೆ ಇತ್ತೀಚೆಗೆ ದೂರು ಬಂದಿತ್ತು. ಪೀಕ್ ಅವರ್‌ನಲ್ಲಿ ಈ ರೀತಿ ಸಮಸ್ಯೆ ಆಗುತ್ತದೆ. ಆದ್ದರಿಂದ ಈ ಅವಧಿಯಲ್ಲೇ ಮೆಟ್ರೋದಲ್ಲಿ ಪ್ರಯಾಣಿಸಿ ಮಹಿಳಾ ಪ್ರಯಾಣಿಕರನ್ನು ಮಾತನಾಡಿಸಿದಾಗ ತೊಂದರೆಯಾಗುವುದರಿಂದ ಇನ್ನೊಂದು ಪ್ರತ್ಯೇಕ ಬೋಗಿ ಒದಗಿಸಲು ಮನವಿ ಮಾಡಿದ್ದಾರೆ. ಈ ಬಗ್ಗೆ ಸರ್ಕಾರಕ್ಕೆ ಪತ್ರ ಬರೆಯುತ್ತೇನೆ ಎಂದು ವಿವರಿಸಿದರು.
ಬೆಂಗಳೂರಿನ ಕೊಳವೆಬಾವಿ, ನೀರಿನ ಘಟಕದಲ್ಲಿ ಬ್ಯಾಕ್ಟೀರಿಯಾ ಪತ್ತೆ!
ಇದಕ್ಕೂ ಮುನ್ನ ವಿಜಯನಗರ ಮೆಟ್ರೋ ನಿಲ್ದಾಣಕ್ಕೆ ಭೇಟಿ ನೀಡಿದ ನಾಗಲಕ್ಷ್ಮಿ ಚೌಧರಿ ಅವರು, ಮಹಿಳಾ ಉದ್ಯೋಗಿಗಳಿಗೆ ಬಿಎಂಆರ್‌ಸಿಎಲ್ ಒದಗಿಸಿರುವ ಸೌಲಭ್ಯ ಮತ್ತು ಕಲ್ಯಾಣ ಕ್ರಮಗಳ ಬಗ್ಗೆ ಅಧಿಕಾರಿಗಳು ಹಾಗೂ ಮಹಿಳಾ ಉದ್ಯೋಗಿಗಳೊಂದಿಗೆ ಚರ್ಚಿಸಿ ವಿವರಗಳನ್ನು ಪಡೆದರು. ನಂತರ ಅವರು ನಿಲ್ದಾಣ ಹಾಗೂ ರೈಲಿನೊಳಗಿದ್ದ ಮಹಿಳಾ ಪ್ರಯಾಣಿಕರೊಂದಿಗೆ ಸುರಕ್ಷತೆ ಮತ್ತು ಸೌಕರ್ಯಗಳ ಬಗ್ಗೆ ಸಂವಾದ ನಡೆಸಿ ಕೃಷ್ಣರಾಜಪುರ ಮೆಟ್ರೋ ನಿಲ್ದಾಣದವರೆಗೂ ಪ್ರಯಾಣಿಸಿದರು.