ಅನಾರೋಗ್ಯದಿಂದ ಆಸ್ಪತ್ರೆಗೆ ಹೋಗುವುದಾಗಿ ತೆರಳಿದ್ದ ತಾಯಿ ಮಗು ನಾಪತ್ತೆಯಾಗಿದ್ದಾರೆ. 

ದಾಬಸ್‌ಪೇಟೆ (ಸೆ.25): ತನಗೂ ಹಾಗೂ ಮಗುವಿಗೂ ಇಬ್ಬರಿಗೂ ಹುಷಾರಿಲ್ಲ ಆಸ್ಪತ್ರೆಗೆ ಹೋಗಿ ತೋರಿಸಿಕೊಂಡು ಬರುತ್ತೇನೆಂದು ಹೇಳಿ ಮಹಿಳೆಯೊಬ್ಬಳು ತನ್ನ ಮಗುವಿನೊಂದಿಗೆ ಮನೆ ಬಿಟ್ಟು ಕಾಣೆಯಾಗಿರುವ ಘಟನೆ ದಾಬಸ್‌ಪೇಟೆ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ನರಸೀಪುರ ಗ್ರಾಮದ ರಾಮಕ್ಕ ಎಂಬುವವರ ಮಗಳು ಜಯಲಕ್ಷ್ಮೇ (25) ಹಾಗೂ ಮೊಮ್ಮಗಳು ಕುಶಿ (3) ಕಾಣೆಯಾದವರು.

ಉದ್ಯಮಿ ಪುತ್ರನ ಅಪಹರಣ: ಪೊಲೀಸರ ಮೇಲೆ ಹಲ್ಲೆ, ಆರೋಪಿಗೆ ಶೂಟ್‌ ..

ಜಯಲಕ್ಷ್ಮೇ ತನ್ನ ತಾಯಿಯ ಬಳಿ ನನಗೆ ಹೊಟ್ಟೆನೋವು ಬರುತ್ತಿದೆ ಹಾಗೂ ನನ್ನ ಮಗಳಿಗೂ ಹುಷಾರಿಲ್ಲ ಆಸ್ಪತ್ರೆಗೆ ಹೋಗಿ ಡಾಕ್ಟರ್‌ ಹತ್ತಿರ ತೋರಿಸಿಕೊಂಡು ಬರುತ್ತೇನೆಂದು ಹೇಳಿ ಹೋದವಳು ವಾಪಸು ಮನೆಗೆ ಬಾರದೆ ನಾಪತ್ತೆಯಾಗಿದ್ದಾಳೆ.

ರಾತ್ರಿಯಾದರೂ ಬಾರದ ಹಿನ್ನೆಲೆಯಲ್ಲಿ ಕುಟುಂಬದವರು ಅಕ್ಕಪಕ್ಕದ ಮನೆ, ನೆಂಟರ, ಸ್ನೇಹಿತರ ಮನೆಯಲ್ಲಿ ಹುಡುಕಾಟ ನಡೆಸಿದರೂ ಪತ್ತೆಯಾಗಿಲ್ಲ. ಹಾಗಾಗಿ ಗೃಹಿಣಿಯ ತಾಯೊ ದಾಬಸ್‌ಪೇಟೆ ಪೊಲೀಸ್‌ ಠಾಣೆಗೆ ಹುಡುಕಿಕೊಡುವಂತೆ ದೂರು ನೀಡಿದ್ದಾರೆ.