ರಾಯಚೂರು (ಏ.08): ಮಸ್ಕಿ ವಿಧಾನಸಭಾ ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಪ್ರತಾಪ ಗೌಡ ಪಾಟೀಲ ಪರ ಪ್ರಚಾರಕ್ಕಾಗಿ ಗ್ರಾಮಕ್ಕೆ ಆಗಮಿಸಿದ್ದ ಹೊನ್ನಾಳಿ ಶಾಸಕ ಎಂ.ಪಿ.ರೇಣುಕಾಚಾರ್ಯ ಅವರಿಗೆ ಆರತಿ ಎತ್ತಿ ಸ್ವಾಗತಿಸುತ್ತಿದ್ದ ವೇಳೆ ಮಹಿಳೆಯೊಬ್ಬರ ಜಡೆಗೆ ಬೆಂಕಿ ತಾಗಿದ ಘಟನೆ ಬುಧವಾರ ನಡೆಯಿತು. 

ಕಣ್ಣೂರು ಗ್ರಾಮಕ್ಕೆ ಆಗಮಿಸಿದ್ದ ರೇಣುಕಾಚಾರ್ಯ ಅವರಿಗೆ ಭರ್ಜರಿ ಸ್ವಾಗತ ನೀಡಲು ಗ್ರಾಮದ ಮಹಿಳೆಯರು, ಯುವಕರು ಮುಂದಾದರು. ಈ ವೇಳೆ ಕಳಸ ಹಿಡಿದು ಆರತಿ ಬೆಳಗಲು ಮುಂದಾದ ಮಹಿಳೆಯೊಬ್ಬರ ಜಡೆಗೆ ಹಿಂದೆ ನಿಂತಿದ್ದ ಮತ್ತೊಬ್ಬ ಮಹಿಳೆಯ ಕೈಯಲ್ಲಿದ್ದ ಕಳಸದ ದೀಪದಿಂದ ಬೆಂಕಿ ಹೊತ್ತಿದೆ. 

'ಯಾರೂ ರಾಜೀನಾಮೆ ಕೊಡಲ್ಲ, ನಾವೆಲ್ಲ ಒಂದಾಗಿ ಹೊರಟಿದ್ದೇವೆ' ..

ತಕ್ಷಣ ಅಲ್ಲಿ ನೆರೆದಿದ್ದ ಜನ ಕೈಯಿಂದ ಜಡೆಗೆ ಹತ್ತಿದ್ದ ಬೆಂಕಿ ನಂದಿಸಿದರು. ಅಲ್ಲಿ ಸೇರಿದ್ದ ಜನರ ಸಮಯಪ್ರಜ್ಞೆಯಿಂದ ಬೆಂಕಿ ಇಡೀ ಜಡೆಯನ್ನು ಆಹುತಿಪಡೆಯುವುದು ತಪ್ಪಿದಂತಾಯಿತು. ಆ ನಂತರ ಕಳಸದೊಂದಿಗೆ ಡೊಳ್ಳು ಬಾರಿಸುತ್ತಾ, ಪಟಾಕಿ ಸಿಡಿಸುತ್ತಾ ರೇಣುಕಾಚಾರ್ಯರನ್ನು ಗ್ರಾಮಸ್ಥರು ಸ್ವಾಗತ ಕೋರಿದರು.