ಬಳ್ಳಾರಿ (ಡಿ.20) : ಆಂಬುಲೈನ್ಸ್ ನಲ್ಲೇ ಆಸ್ಪತ್ರೆಗೆ ತೆರಳುವ ಮಾರ್ಗಮಧ್ಯೆ ಮಹಿಳೆಗೆ ಹೆರಿಗೆ ಮಾಡಿಸಲಾಗಿದೆ. 

ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಮ್ಯಾಸರಟ್ಟಿ ಗ್ರಾಮದ ರೂಪ ಹುರುಳಿಹಾಳ್ ಎಂಬ ಮಹಿಳೆಗೆ ಆರೋಗ್ಯ ಸಿಬ್ಬಂದಿ  ಹೆರಿಗೆ ಮಾಡಿಸಿದ್ದಾರೆ. ಆಂಬುಲೆನ್ಸ್ನಲ್ಲೇ ಮಹಿಳೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.  

ಅಜ್ಜನಾದ ನಂ.1 ಶ್ರೀಮಂಂತ ಮುಕೇಶ್ ಅಂಬಾನಿ : ಮೊಮ್ಮಗು ಜನನ ...

ಮ್ಯಾಸರಟ್ಟಿ ಗ್ರಾಮದಿಂದ ಚಿಕ್ಕಜೋಗಿ ಹಳ್ಳಿ ಆಸ್ಪತ್ರೆಗೆ ಮಹಿಳೆಯನ್ನು ಕರೆತರಲಾಗುತಿತ್ತು. ಈ ವೇಳೆ ಜಗಳೂರು ತಾಲೂಕು ಆಸ್ಪತ್ರೆಗೆ ಕೊಂಡೋಯ್ಯೋ ಮಾರ್ಗ ಮದ್ಯೆ ಹೆರಿಗೆ ಆಗಿದೆ.

ಸಿಬ್ಬಂದಿ, ಜ್ಯೋತಿ ಮತ್ತು ಚಾಲಕ ಖಾಜಾಸಾಬ್ ಸಮಯ ಪ್ರಜ್ಞೆಯಿಂದ ಸುರಕ್ಷಿತವಾಗಿ ಮಹಿಳೆಗೆ ಹೆರಿಗೆಯಾಗಿದೆ. ಚಿಕ್ಕಜೋಗಿಹಳ್ಳಿ ಸರ್ಕಾರಿ ಆಸ್ಪತ್ರೆಯಲ್ಲಿ ತಾಯಿ, ಮಗುವಿಗೆ ಚಿಕಿತ್ಸೆ ನೀಡಲಾಗುತ್ತಿದೆ.