ಪಡಿತರ ತಂದು ಹೇಗೋ ಬದುಕೋಣ ಎಂದರೇ ರೇಶನ್‌ ಕಾರ್ಡ್‌ ಸಹ ಇಲ್ಲ| ನಮಗೆ ಯಾರಾದರೂ ಸಹಾಯ ಮಾಡಿ| ರೇಶನ್‌ ಕಾರ್ಡ್‌ ಇಲ್ಲ, ನಮ್ಮ ಖಾತೆಗೂ ಯಾವುದೇ ಹಣ ಬಂದಿಲ್ಲ|ಕೂಲಿ ಮಾಡಲು ಏನು ಇಲ್ಲದಂತೆ ಆಗಿದೆ|  

ಕೊಪ್ಪಳ(ಏ.11): ಊರ ಹೊರಗೆ ಗುಡ್ಡದಲ್ಲಿದ್ದೇವೆ ಸರ್‌, ನಮಗೆ ಕೂಲಿ ಕೆಲಸವೂ ಇಲ್ಲದೆ ಮನೆಯಲ್ಲಿ ತಿನ್ನಲು ಅಕ್ಕಿಯೂ ಇಲ್ಲದಂತೆ ಆಗಿದ್ದು, ಉಪವಾಸ ಇರುವಂತಾಗಿದೆ. ಇದು, ಗಂಗಾವತಿ ತಾಲೂಕಿನ ಸಂಗಾಪುರ ಗ್ರಾಮದ ಯಶೋಧಮ್ಮ ಎನ್ನುವ ಮಹಿಳೆಯ ರೋಧನ.

ಪತಿ, ನಾಲ್ವರು ಮಕ್ಕಳು ಸೇರಿದಂತೆ ಆರು ಜನರು ಇದ್ದಾರೆ. ಊರಾಚೆ ಇರುವ ಇವರ ಬಡತನದ ಬೇಗೆಯಲ್ಲಿ ಬೇಯುತ್ತಿದ್ದಾರೆ. ಈಗ ಲಾಕ್‌ಡೌನ್‌ ಪರಿಣಾಮ ಕೂಲಿ ಕೆಲಸವೂ ಇಲ್ಲದಂತೆ ಆಗಿರುವುದರಿಂದ ತೀವ್ರ ಸಮಸ್ಯೆಯಾಗಿದೆ.

ಕೊರೋನಾ ಭೀತಿ, ಆನ್‌ಲೈನ್‌ನಲ್ಲೇ ಪಾಠ, ವಿದ್ಯಾರ್ಥಿಗಳ ಮನಗೆದ್ದ ಅತಿಥಿ ಉಪನ್ಯಾಸಕ!

ಡಿತರ ತಂದು ಹೇಗೋ ಬದುಕೋಣ ಎಂದರೇ ರೇಶನ್‌ ಕಾರ್ಡ್‌ ಸಹ ಇಲ್ಲ. ಕಾರ್ಮಿಕರ ಇಲಾಖೆಯ ಸಹಾಯವಾಣಿಗೆ ಕರೆ ಮಾಡಿದರೂ ಪ್ರಯೋಜನವಾಗಿಲ್ಲ. ಇಂದು ಬರುತ್ತೇವೆ, ನಾಳೆ ಬರುತ್ತೇವೆ ಎಂದು ವಾರವಾದರೂ ಯಾರೂ ಬಂದಿಲ್ಲ ಎಂದು ಯಶೋಧಮ್ಮ ತನ್ನ ಅಳಲು ತೋಡಿಕೊಂಡಿದ್ದಾರೆ.

ಡಿಸಿ ಗಮನಕ್ಕೆ: ಜಿಲ್ಲಾಧಿಕಾರಿ ಪಿ. ಸುನೀಲ್‌ಕುಮಾರ ಅವರೇ ಈ ಮಹಿಳೆಯ ಕುಟುಂಬದ ಸಂಕಷ್ಟಕ್ಕೆ ಸ್ಪಂದಿಸಿ, ರೇಶನ್‌ ಕಾರ್ಡ್‌ ಇಲ್ಲದಿದ್ದರೂ ಸರ್ಕಾರ ಪಡಿತರ ವಿತರಣೆ ಮಾಡುವಂತೆ ಸೂಚಿಸಿದ್ದು, ಸಂಬಂಧಪಟ್ಟ ಅಧಿಕಾರಿಗಳ ಮೂಲಕ ಪಡಿತರ ತಲುಪಿಸುವಂತೆ ಮಾಡಿ ಎನ್ನುವುದು ಕನ್ನಡಪ್ರಭ, ಸುವರ್ಣ ನ್ಯೂಸ್ ಕಳಕಳಿ.