ಮೂಲ್ಕಿ(ಜು.27): ಕಿನ್ನಿಗೋಳಿ ಗ್ರಾ.ಪಂ. ವ್ಯಾಪ್ತಿಯ ಎಳತ್ತೂರು ಗ್ರಾಮದ ನೆಲಗುಡ್ಡೆ ಎಂಬಲ್ಲಿ ಭಾನುವಾರ ಮಧ್ಯಾಹ್ನ ಬಿರುಸಿನ ಮಳೆ ಸಂದರ್ಭ, ಸ್ನಾನದ ಕೋಣೆಯ ಗೋಡೆ ಕುಸಿದು ಮಹಿಳೆಯೊಬ್ಬರು ಮೃತಪಟ್ಟ ಘಟನೆ ನಡೆದಿದೆ. 

ಉಡುಪಿ ಜಿಲ್ಲೆಯ ಉಚ್ಚಿಲ ನಿವಾಸಿ ಜಾನಕಿ ಆಚಾರ್ಯ (70) ಮೃತ ಮಹಿಳೆ. ಮಹಿಳೆ ತಿಂಗಳ ಹಿಂದೆ ನೆಲಗುಡ್ದೆಯ ಮಗಳ ಮನೆಗೆ ಬಂದಿದ್ದು, ಭಾನುವಾರ ಮಧ್ಯಾಹ್ನ ಸ್ನಾನ ಮಾಡಲೆಂದು ಬಚ್ಚಲು ಕೋಣೆಗೆ ಹೋದಾಗ ಆಕಸ್ಮಿಕವಾಗಿ ಬಚ್ಚಲು ಕೋಣೆಯ ಗೋಡೆ ಕುಸಿದು ಮಹಿಳೆಯ ಮೇಲೆ ಬಿದ್ದಿದೆ.

ದಕ್ಷಿಣ ಕನ್ನಡದ​ದಲ್ಲಿ ಕೊರೋನಾ ಅಬ್ಬ​ರದ ನಡು​ವೆಯೂ ತಗ್ಗಿದ ಸಾವಿನ ಪ್ರಮಾ​ಣ! 

ಈ ಸಂದರ್ಭ ಮಹಿಳೆ ಗಂಭೀರ ಗಾಯಗೊಂಡಿದ್ದು, ಆಸ್ಪತ್ರೆಗೆ ಸಾಗಿಸುವಾಗ ಮೃತಪಟ್ಟಿದ್ದಾರೆ. ಮೂಲ್ಕಿ ಪೋಲಿಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.