ಕೊಲ್ಹಾರ ಪಟ್ಟಣಕ್ಕೆ ಬರುತ್ತಿದ್ದ ಸಾರಿಗೆ ಸಂಸ್ಥೆಯ ಬಸ್‌ನಲ್ಲಿ ಚಿಲ್ಲರೆ ಹಣ ನೀಡುವ ವಿಷಯವಾಗಿ ಮಹಿಳಾ ಕಂಡಕ್ಟರ್‌ಹಾಗೂ ಪ್ರಯಾಣಿಕನ ಮಧ್ಯ ಜಗಳ ನಡೆದಿದ್ದು, ಪ್ರಯಾಣಿಕ ಮಹಿಳಾ ಕಂಡಕ್ಟರ್‌ಗೆ ಅವಾಚ್ಯ ಶಬ್ದದಿಂದ ನಿಂದಿಸಿದ್ದಾನೆ. ಮಹಿಳಾ ಕಂಡಕ್ಟರ್‌ನಿಂದನೆ ಮಾಡಿದ ಪ್ರಯಾಣಿಕನಿಗೆ ಸಾರ್ವಜನಿಕವಾಗಿಯೇ ಚಪ್ಪಲಿಯಿಂದ ಹೊಡೆದಿರುವ ವಿಡಿಯೋ ವೈರಲ್ ಆಗಿದೆ.

ವಿಜಯಪುರ(ಜ.31): ಕೊಲ್ಹಾರ ಪಟ್ಟಣದ ಬಸ್ ನಿಲ್ದಾಣದಲ್ಲಿ ಪ್ರಯಾಣಿಕನೊಬ್ಬ ಅಚಾಚ್ಯ ಶಬ್ದದಿಂದ ನಿಂದನೆ ಮಾಡಿದ್ದರಿಂದ ಮಹಿಳಾ ಕಂಡಕ್ಟರ್‌ ನಿಂದಕನಿಗೆ ಚಪ್ಪಲಿಯಿಂದ ಹೊಡೆದಿರುವ ಘಟನೆ ಮಂಗಳವಾರ ನಡೆದಿದೆ.

ಕೊಲ್ಹಾರ ಪಟ್ಟಣಕ್ಕೆ ಬರುತ್ತಿದ್ದ ಸಾರಿಗೆ ಸಂಸ್ಥೆಯ ಬಸ್‌ನಲ್ಲಿ ಚಿಲ್ಲರೆ ಹಣ ನೀಡುವ ವಿಷಯವಾಗಿ ಮಹಿಳಾ ಕಂಡಕ್ಟರ್‌ಹಾಗೂ ಪ್ರಯಾಣಿಕನ ಮಧ್ಯ ಜಗಳ ನಡೆದಿದ್ದು, ಪ್ರಯಾಣಿಕ ಮಹಿಳಾ ಕಂಡಕ್ಟರ್‌ಗೆ ಅವಾಚ್ಯ ಶಬ್ದದಿಂದ ನಿಂದಿಸಿದ್ದಾನೆ. ಮಹಿಳಾ ಕಂಡಕ್ಟರ್‌ ನಿಂದನೆ ಮಾಡಿದ ಪ್ರಯಾಣಿಕನಿಗೆ ಸಾರ್ವಜನಿಕವಾಗಿಯೇ ಚಪ್ಪಲಿಯಿಂದ ಹೊಡೆದಿರುವ ವಿಡಿಯೋ ವೈರಲ್ ಆಗಿದೆ.

ಜಗದೀಶ್‌ ಶೆಟ್ಟರ್‌ ಪಕ್ಷ ಬಿಟ್ಟಿದ್ದರಿಂದ ಕಾಂಗ್ರೆಸ್‌ ಶುದ್ಧವಾಯ್ತು: ಸಚಿವ ಎಂ.ಬಿ.ಪಾಟೀಲ್‌

ಬಸ್ ಇಳಿದು ಬೈಕ್ ಮೇಲೆ ಹೊರಟ ಪ್ರಯಾಣಿಕನನ್ನು ಬಸ್ ಚಾಲಕ ತಡೆದು, ತನ್ನ ಸಹೋದ್ಯೋಗಿಗೆ ಅವಾಚ್ಯ ಶಬ್ದದಿಂದ ನಿಂದನೆ ಮಾಡಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿ, ಪೊಲೀಸ್‌ ಠಾಣೆಗೆ ಬರುವಂತೆ ಪಟ್ಟು ಹಿಡಿದಿದ್ದಾರೆ. ಈ ಹಂತದಲ್ಲಿ ಪರಿಸ್ಥಿತಿ ವಿಕೋಪಕ್ಕೆ ಹೋಗುವುದನ್ನು ಅರಿತ ಪ್ರಯಾಣಿಕ, ತನ್ನಿಂದ ತಪ್ಪಾಯ್ತು ಬಿಟ್ಟುಬಿಡಿ ಎಂದು ಅಂಗಲಾಚಿದ್ದಾನೆ. ಇಷ್ಟಾದರೂ ಸಿಟ್ಟು ತಣಿಯದ ಲೇಡಿ ಕಂಡಕ್ಟರ್‌ ತಾನೂ ಅವಾಚ್ಯ ಶಬ್ದಗಳಿಂದ ನಿಂದಿಸಿ, ಚಪ್ಪಲಿಯಿಂದ ಹಲ್ಲೆ ಮಾಡಿದ್ದಾಳೆ.