ಬೆಂಗಳೂರು: ಸ್ಯಾನಿಟರಿ ನ್ಯಾಪ್‌ಕಿನ್‌ನಲ್ಲಿ ಮಾದಕ ದ್ರವ್ಯವನ್ನು ಇಟ್ಟುಕೊಂಡು ಬೆಂಗಳೂರಿನಿಂದ ದೋಹಾ ದೇಶಕ್ಕೆ ಕಳ್ಳ ಸಾಗಣೆ ಮಾಡಲು ಯತ್ನಿಸುತ್ತಿದ್ದ ಮಹಿಳೆ ಸೇರಿ ನಾಲ್ವರು ಆರೋಪಿಗಳನ್ನು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ವಾಹನ ನಿಲ್ದಾಣ ನಿಲುಗಡೆ ಪ್ರದೇಶದಲ್ಲಿ ಕೇಂದ್ರ ಮಾದಕ ನಿಯಂತ್ರಣ ದಳದ ಅಧಿಕಾರಿಗಳು ಬಂಧಿಸಿದ್ದಾರೆ.

ಖುಷ್ಬೋ ಶರ್ಮಾ, ಅಬು ತಾಹೀರ್, ಮೊಹಮದ್ ಆಫ್ಜಲ್, ಮೊಹಮದ್ ಆಸೀಫ್ ಬಂಧಿತರು. ಆರೋಪಿಗಳಿಂದ 3 ಕೋಟಿ ಮೌಲ್ಯದ ಆಶಿಷ್, ಮೆಂಥಾಪೆಟಾ ಮೈನ್ ಜಪ್ತಿ ಮಾಡಲಾಗಿದೆ ಎಂದು ಎನ್ ಸಿಬಿ ಅಧಿಕಾರಿಗಳು ಹೇಳಿದ್ದಾರೆ. 

ಮಾದಕ ದ್ರವ್ಯ ಸಾಗಾಟ ದಂಧೆಕೋರರ ಜಾಲ ಬೆಂಗಳೂರಿನಿಂದ ಗೋವಾ, ಕೇರಳ, ಮುಂಬೈ ಹಾಗೂ ವಿದೇಶಕ್ಕೆ ಮಾದಕ ದ್ರವ್ಯ ಸಾಗಾಟ ಮಾಡುವ ಜಾಲ ರೂಪಿಸಿಕೊಂಡಿತ್ತು. ದಂಧೆಕೋರರು ಮಾದಕ ದ್ರವ್ಯ ಸಾಗಿಸಲು ಮಹಿಳೆಯರನ್ನು ನೇಮಿಸಿಕೊಂಡಿದ್ದರು. ಒಂದು ವಾರದಿಂದ ದಂಧೆಕೋರರ ಹಿಂದೆ ಬಿದ್ದಿದ್ದ ಎನ್‌ಸಿಬಿ ತಂಡಕ್ಕೆ ಮಹಿಳೆಯೊಬ್ಬಳು ಮಾದಕ ದ್ರವ್ಯದೊಂದಿಗೆ ದೋಹಾಕ್ಕೆ ಹೋಗಲು ಯತ್ನಿಸಿರುವ ವಿಷಯ ತಿಳಿದಿದೆ. ಎನ್‌ಸಿಬಿ ತಂಡ ಸೋಮವಾರ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಪ್ರವೇಶ ಮಾಡುವ ಮುನ್ನವೇ ವಾಹನಗಳ ನಿಲುಗಡೆ ಪ್ರದೇಶದಲ್ಲಿ ಖುಷ್ಬೋ ಶರ್ಮಾಳನ್ನು ಬಂಧಿಸಿದ್ದಾರೆ. 

ಬ್ಯಾಗ್ ಪರಿ ಶೀಲಿಸಿದಾಗ ಸ್ಯಾನಿಟರಿ ನ್ಯಾಪ್‌ಕಿನ್‌ಲ್ಲಿ 510 ಗ್ರಾಂ ತೂಕದ ಮೆಂಥಾಪೆಟಾಮೈನ್,  572 ಮಾದಕ ಮಾತ್ರೆ ಇರುವುದು ಪತ್ತೆಯಾಗಿದೆ. ಬಳಿ ಆಸ್ಟಿನ್‌ಟೌನ್ ಮನೆಯೊಂದರಲ್ಲಿ 2.8 ಕೆ.ಜಿ ಆಶಿಷ್ ಜಪ್ತಿ ಮಾಡಿದೆ.