ಹಾಸನ [ಜ.07]: ತನಗಿರುವ ಚರ್ಮರೋಗಕ್ಕೆ ಬೇಸತ್ತು ಮಹಿಳೆಯೋರ್ವರು ಮನೆ ಬಿಟ್ಟು ಹೋಗಿರುವ ಘಟನೆ ಹಾಸನ ಜಿಲ್ಲೆಯಲ್ಲಿ ನಡೆದಿದೆ. 

ಹಾಸನ ಜಿಲ್ಲೆಯ ಅರಕಲಗೂರು ತಾಲೂಕಿನ ದಾಸನಪುರದ ಅನುಶ್ರೀ [30] ಎಂಬ ಮಹಿಳೆ ತನಗಿರುವ ಕಾಯಿಲೆ ತನ್ನ ಮಕ್ಕಳಿಗೂ ಹರಡುತ್ತದೆ ಎನ್ನುವ ಆತಂಕದಿಂದ ಮನೆ ಬಿಟ್ಟು ತೆರಳಿದ್ದಾರೆ. 

2019ರ ಅಕ್ಟೋಬರ್ 17 ರಂದು ರಾತ್ರಿಯಿಂದಲೇ ಮಹಿಳೆ ನಾಪತ್ತೆಯಾಗಿದ್ದು ಈಗ ಪ್ರಕರಣ ಬೆಳಕಿಗೆ ಬಂದಿದ್ದು ಅಂದಿನಿಂದಲೂ ಮಹಿಳೆಯ ಪತ್ತೆ ಕಾರ್ಯ ನಡೆಸಲಾಗುತ್ತಿದೆ. 

ಧಾರೆ ಸೀರೆ ವಿಚಾರಕ್ಕೆ ಮುರಿದುಬಿತ್ತು ಲವ್ ಮ್ಯಾರೇಜ್, ವರ ಎಸ್ಕೇಪ್...

ಇಬ್ಬರು ಮಕ್ಕಳೊಂದಿಗೆ ಇದೀಗ ಮಹಿಳೆಯ ಪತಿಯು ಪತ್ನಿಗಾಗಿ ಹುಡುಕಾಟ ನಡೆಸಿದ್ದಾರೆ. ಎಲ್ಲೆಡೆ ಕಾಣೆಯಾಗಿರುವುದಾಗಿ ಪೋಸ್ಟರ್ ಅಂಟಿಸಿ ಪತ್ನಿ ಹುಡುಕಾಟಕ್ಕೆ ಇಳಿದಿದ್ದಾರೆ. 

ಹಾಸನ, ದಾವಣಗೆರೆ, ಶಿವಮೊಗ್ಗದಲ್ಲಿಯೂ ಪತ್ನಿಗಾಗಿ ಹುಡುಕಾಟ ನಡೆಸಿದ್ದು, ಅರಕಲಗೂಡು ಠಾಣೆಯಲ್ಲಿ ನಾಪತ್ತೆ ಪ್ರಕರಣವನ್ನೂ ದಾಖಲಿಸಲಾಗಿದೆ.