ಮೈಸೂರು ತಾಳಗುಪ್ಪ ರೈಲಿಗೆ ಸಿಲುಕಿ ಮಹಿಳೆ ಸಾವು ಶಿವಮೊಗ್ಗ ನಗರದ ಪಶು ವೈದ್ಯಕೀಯ ಕಾಲೇಜಿನ ಬಳಿ ರೈಲು ಹಳಿ ದಾಟುವಾಗ ದುರ್ಘಟನೆ

ಶಿವಮೊಗ್ಗ(ಸೆ.19):  ಮೈಸೂರು ತಾಳಗುಪ್ಪ ರೈಲಿಗೆ ಸಿಲುಕಿ ಮಹಿಳೆ ಸಾವೀಗೀಡಾದ ಘಟನೆ ಇಂದು ಶಿವಮೊಗ್ಗದಲ್ಲಿ ನಡೆದಿದೆ. 

ಶಿವಮೊಗ್ಗ ನಗರದ ಪಶು ವೈದ್ಯಕೀಯ ಕಾಲೇಜಿನ ಬಳಿ ರೈಲು ಹಳಿ ದಾಟುವಾಗ ನಾಗರತ್ನ ಬಾಯಿ ( 46 ) ಎಂಬಾಕೆ ಸಾವಿಗೀಡಾಗಿದ್ದಾರೆ. 

ಹಳಿ ದಾಟುವಾಗ ಚಲಿಸುತ್ತಿರುವ ರೈಲು ಹೊಡೆದು ರೈಲಿನ ವೇಗಕ್ಕೆ ಮಹಿಳೆ ಸಿಲುಕಿ ಮಹಿಳೆ ಸಾವನ್ನಪ್ಪಿದ್ದಾರೆ. 

ಎನ್ಕೌಂಟರ್ ಬೆದರಿಕೆ, 2 ದಿನದ ಬಳಿಕ ರೈಲು ಹಳಿಯಲ್ಲಿ ಅತ್ಯಾಚಾರ, ಕೊಲೆ ಆರೋಪಿಯ ಶವ ಪತ್ತೆ!

 ನಾಗರತ್ನ ಬಾಯಿ ಖಾಸಗಿ ಆಸ್ಪತ್ರೆಯಲ್ಲಿ ಆಯ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದರು.

 ಶಾಮನಾಯ್ಕ ಎಂಬುವರೊಂದಿಗೆ ವಿವಾಹವಾಗಿದ್ದ ನಾಗರತ್ನ ಬಾಯಿ ಒಂದು ವರ್ಷದಿಂದ ಗಂಡನಿಂದ ದೂರವಾಗಿದ್ದರು. 

ಶಿವಮೊಗ್ಗ ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.