ಮಾನ್ವಿ(ಆ.13): ಅಡುಗೆ ಮಾಡುತ್ತಿದ್ದ ಸಮಯದಲ್ಲಿ ಮನೆ ಛಾವಣಿ ಕುಸಿದು ಮಹಿಳೆಯೊಬ್ಬರು ಸಾವನ್ನಪ್ಪಿರುವ ಘಟನೆ ರಾಯಚೂರು ಜಿಲ್ಲೆಯ ಮಾನ್ವಿ ಪಟ್ಟಣದ ವಾರ್ಡ್‌ ನಂ. 15 ಸಣ್ಣ ಬಜಾರ್‌ನಲ್ಲಿ ಬುಧವಾರ ನಡೆದಿದೆ.

ದುರ್ಘಟನೆಯಲ್ಲಿ ಗೃಹಿಣಿ ಮರಿಯೂಮ್‌ ಬೇಗಂ (46) ಮೃತಪಟ್ಟ ಮಹಿಳೆಯಾಗಿದ್ದಾರೆ. ನಿತ್ಯದಂತೆ ಮನೆಯಲ್ಲಿ ಅಡುಗೆ ಮಾಡುತ್ತಿದ್ದ ಮರಿಯೂಮ್‌ ಬೇಗಂ ಅವರ ಮೇಲೆ ಮಣ್ಣಿನ ಛಾವಣಿಯು ಬಿದಿದ್ದು, ಇದರಿಂದಾಗಿ ಮಹಿಳೆ ತೀವ್ರವಾಗಿ ಗಾಯಗೊಂಡಿದ್ದರು. 

 ರಾಯಚೂರು: ತುಂಬಿ ಹರಿಯುತ್ತಿರುವ ಕೃಷ್ಣೆ , ತೆಪ್ಪದಲ್ಲಿ ಜೀವದ ಹಂಗು ತೊರೆದು ಸಂಚಾರ..!

ಕೂಡಲೇ ಸ್ಥಳೀಯರು ಆಸ್ಪತ್ರೆಗೆ ಸಾಗಿಸುತ್ತಿದ್ದ ಸಮಯದಲ್ಲಿ ಮಾರ್ಗಮದ್ಯದಲ್ಲಿ ಆಕೆ ಸಾವನ್ನಪ್ಪಿದ್ದಾಳೆ ಎಂದು ತಿಳಿದು ಬಂದಿದೆ. ಈ ಸಂಬಂಧ ಮಾನ್ವಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.