ವಿಜಯಪುರ ಜಿಲ್ಲಾಸ್ಪತ್ರೆ ವೈದ್ಯ ಸಿಬ್ಬಂದಿ ಯಡವಟ್ಟು, ನರಳಿ ನರಳಿ ಪ್ರಾಣಬಿಟ್ಟ ಬಾಣಂತಿ: ಅವಳಿ ಮಕ್ಕಳು ಅನಾಥ..!
ಬ್ಲಡ್ ಹಾಕುವಾಗ ನಡೆದ ಯಡವಟ್ಟಿನಿಂದ ಗಂಭೀರ ಸ್ಥಿತಿ ತಲುಪಿದ್ದ ಬಾಣಂತಿಗೆ ಬಿಎಲ್ಡಿಯಲ್ಲಿ ನಿರಂತರ ಒಂದು ತಿಂಗಳ ಕಾಲ ಚಿಕಿತ್ಸೆ ನೀಡಲಾಗಿತ್ತು. ಬ್ಲಡ್ ಹಾಕುವಾಗ ಉಂಟಾದ ಯಡವಟ್ಟಿನಿಂದ ಕಿಡ್ನಿಗೆ ಬಾರಿ ಪ್ರಮಾಣದಲ್ಲಿ ಹಾನಿ ಉಂಟಾಗಿತ್ತು. ಕಿಡ್ನಿ ಸರಿಪಡಿಸಲು ಬಿಎಲ್ಡಿಯ ತಜ್ಞವೈದ್ಯರು ನಿರಂತರ ಪ್ರಯತ್ನ ಮಾಡಿದ್ರು. ಆದ್ರೆ ಬಾಣಂತಿ ಚಿಕಿತ್ಸೆ ಫಲಿಸಲದೆ ಸಾವನ್ನಪ್ಪಿದ್ದಾಳೆ.
ಷಡಕ್ಷರಿ ಕಂಪೂನವರ್ ಏಷ್ಯಾನೆಟ್ ಸುವರ್ಣ ನ್ಯೂಸ್
ವಿಜಯಪುರ(ಮಾ.20): ವೈದ್ಯರನ್ನ ನಾರಾಯಣನಿಗೆ ಹೋಲಿಸಲಾಗುತ್ತೆ. ರೋಗಿಗಳು ಜೀವ ಕಳೆದುಕೊಳ್ಳುವ ಸ್ಥಿತಿಯಲ್ಲಿದ್ದಾಗ ಅವರಿಗೆ ಪ್ರಾಣದಾನ ನೀಡುವವರೆ ವೈದ್ಯರು. ಆದ್ರೆ ವಿಜಯಪುರ ಜಿಲ್ಲಾಸ್ಪತ್ರೆಯ ವೈದ್ಯ ಸಿಬ್ಬಂದಿಯ ಯಡವಟ್ಟಿಗೆ ನಡೆಯವಾರದ ಘಟನೆಯೊಂದು ನಡೆದಿದೆ. ಅವಳಿ ಜವಳಿ ಮಕ್ಕಳಿಗೆ ಜನ್ಮ ನೀಡಿದ್ದ ಬಾಣಂತಿ ತಿಂಗಳು ಗಟ್ಟಲೇ ನರಳಿ ಸಾವನ್ನಪ್ಪಿದ್ದಾಳೆ. ಅಷ್ಟಕ್ಕು ಆಗಿದ್ದೇನು ಅನ್ನೋದನ್ನ ನೀವು ತಿಳಿದ್ರೆ ಶಾಕ್ ಆಗ್ತೀರಿ. ಜಿಲ್ಲಾಸ್ಪತ್ರೆಯ ವೈದ್ಯರ ನಿರ್ಲಕ್ಷ್ಯಕ್ಕೆ ಆಕ್ರೋಶ ಹೊರಹಾಕ್ತೀರಿ..
ಬಾಣಂತಿಗೆ ಎ ಪಾಜಿಟಿವ್ ಬದಲಿಗೆ ಬಿ ಪಾಜಿಟಿವ್ ಬ್ಲಡ್ ಪುರೈಕೆ..!
ಹೌದು, ವಿಜಯಪುರ ಜಿಲ್ಲಾಸ್ಪತ್ರೆಯಲ್ಲಿ ಕಳೆದ ತಿಂಗಳು 28 ರಂದು ಹೆರಿಗೆಗೆ ದಾಖಲಾಗಿದ್ದ ಬಬಲೇಶ್ವರ ತಾಲೂಕಿನ ಶಾರದಾ ಎನ್ನುವ ಮಹಿಳೆ ಅವಳಿ ಜವಳಿ ಮಕ್ಕಳಿಗೆ ಜನ್ಮ ನೀಡಿದ್ದಳು. ಆದ್ರೆ ಬಳಿಕ ಬಾಣಂತಿಗೆ ರಕ್ತಹೀನತೆ ಕಾಡಿತ್ತು. ಆಕೆಗೆ ರಕ್ತ ನೀಡುವಂತೆ ಚಿಕಿತ್ಸೆ ನೀಡ್ತಿದ್ದ ತಜ್ಞ ವೈದ್ಯರು ಸೂಚನೆ ನೀಡಿದ್ದರು. ಅದ್ರಂತೆ ಆಕೆಯ ಬ್ಲಡ್ ಗ್ರುಪ್ ಆಧರಿಸಿ ಎ ಪಾಜಿಟಿವ್ ಬ್ಲಡ್ ನೀಡಬೇಕಿತ್ತು. ಆದ್ರೆ ದುರಂತ ಅಂದ್ರೆ ಬ್ಲಡ್ ಬ್ಯಾಂಕ್ ಸಿಬ್ಬಂದಿ ಎ ಪಾಜಿಟಿವ್ ಬದಲಿಗೆ ಬಿ ಪಾಜಿಟಿವ್ ಬ್ಲಡ್ ನೀಡಿದ್ದಾರೆ. ಬಳಿಕ ಒಂದು ಬಾರಿ ಅದನ್ನ ಕ್ರಾಸ್ ಚೆಕ್ ಮಾಡಬೇಕಿದ್ದ ಜಿಲ್ಲಾಸ್ಪತ್ರೆಯ ವೈದ್ಯ ಸಿಬ್ಬಂದಿ, ನಿರ್ಲಕ್ಷ ಮಾಡಿ ಬಿ ಪಾಜಿಟಿವ್ ಬ್ಲಡ್ ನನ್ನ ಬಾಣಂತಿಗೆ ಹಾಕಿದ್ದಾರೆ. ಇದರಿಂದ ರಿಯಾಕ್ಷನ್ ಉಂಟಾಗಿ ಬೆಡ್ ಮೇಲೆ ಬಾಣಂತಿ ನರಳಾಡಿದ್ದಾಳೆ. ಉಸಿರಾಟ ತೊಂದರೆ ಸೇರಿದಂತೆ ಕಿಡ್ನಿ, ಲೀವರ್ ಗಳ ಮೇಲೆ ಪರಿಣಾಮ ಉಂಟು ಮಾಡಿದೆ. ಪರಿಸ್ಥಿತಿ ಬಿಗಡಾಯಿಸುತ್ತಿದ್ದಂತೆ ಬಾಣಂತಿಯನ್ನ ನಗರದ ಬಿಎಲ್ಡಿ ಆಸ್ಪತ್ರೆಗೆ ದಾಖಲಿಸಿ ತೀವ್ರ ನಿಗಾಘಟಕದಲ್ಲಿ ಚಿಕಿತ್ಸೆ ನೀಡಲಾಗ್ತಿತ್ತು.
ಭೀಮಾ ನದಿ ನೀರಿಗೆ ಮಹಾರಾಷ್ಟ್ರ ಕನ್ನ, ಉತ್ತರ ಕರ್ನಾಟಕದ ಹಲವು ಜಿಲ್ಲೆಗಳು ತತ್ತರ!
ಚಿಕಿತ್ಸೆ ನಡೆಯುತ್ತಿರುವಾಗಲೇ ಬಾಣಂತಿ ಸಾವು..!
ಇನ್ನೂ ಬ್ಲಡ್ ಹಾಕುವಾಗ ನಡೆದ ಯಡವಟ್ಟಿನಿಂದ ಗಂಭೀರ ಸ್ಥಿತಿ ತಲುಪಿದ್ದ ಬಾಣಂತಿಗೆ ಬಿಎಲ್ಡಿಯಲ್ಲಿ ನಿರಂತರ ಒಂದು ತಿಂಗಳ ಕಾಲ ಚಿಕಿತ್ಸೆ ನೀಡಲಾಗಿತ್ತು. ಬ್ಲಡ್ ಹಾಕುವಾಗ ಉಂಟಾದ ಯಡವಟ್ಟಿನಿಂದ ಕಿಡ್ನಿಗೆ ಬಾರಿ ಪ್ರಮಾಣದಲ್ಲಿ ಹಾನಿ ಉಂಟಾಗಿತ್ತು. ಕಿಡ್ನಿ ಸರಿಪಡಿಸಲು ಬಿಎಲ್ಡಿಯ ತಜ್ಞವೈದ್ಯರು ನಿರಂತರ ಪ್ರಯತ್ನ ಮಾಡಿದ್ರು. ಆದ್ರೆ ಬಾಣಂತಿ ಚಿಕಿತ್ಸೆ ಫಲಿಸಲದೆ ಸಾವನ್ನಪ್ಪಿದ್ದಾಳೆ.
ವಿಜಯಪುರ: ಗ್ಯಾಸ್ ಸಿಲಿಂಡರ್ ಸೋರಿಕೆಯಾಗಿ ನಾಲ್ವರು ಗಂಭೀರ ಗಾಯ!
ಯಡವಟ್ಟು ಮಾಡಿದವರ ಅಮಾನತ್ತು..!
ಇನ್ನು ಬಾಣಂತಿಗೆ ಎ ಪಾಜಿಟಿವ್ ಬದಲಿಗೆ ಬಿ ಪಾಜಿಟಿವ್ ಬ್ಲಡ್ ನೀಡಿ ಯಡವಟ್ಟು ಮಾಡಿದ್ದ ವೈದ್ಯ ಸಿಬ್ಬಂದಿಯ ವಿರುದ್ಧ ಜಿಲ್ಲಾಸ್ಪತ್ರೆ ಸರ್ಜನ್ ಕ್ರಮ ಜರುಗಿಸಿದ್ದಾರೆ. ಬದಲಿ ಬ್ಲಡ್ ನೀಡಿ ಯಡವಟ್ಟು ಮಾಡಿದ್ದ ಬ್ಲಡ್ ಬ್ಯಾಂಕ್ ಸಿಬ್ಬಂದಿ ಸೇರಿ ರಕ್ತ ಹಾಕಿದ್ದ ಜಿಲ್ಲಾಸ್ಪತ್ರೆಯ ಮೂರು ಸಿಬ್ಬಂದಿ ವೈದ್ಯರನ್ನ ಅಮಾನತ್ತುಗೊಳಿಸಲಾಗಿದೆ. ಆದ್ರೆ ಘಟನೆ ಗಮನಕ್ಕೆ ಬಂದಾಗ ಯಡವಟ್ಟು ಮಾಡಿದ್ದ ಸಿಬ್ಬಂದಿ ವಿರುದ್ಧ ಪ್ರಕರಣವು ದಾಖಲಾಗಿಲ್ಲ. ಕೇವಲ ಅಮಾನತ್ತು ಮಾಡಿ ಕೈಬಿಡಲಾಗಿದೆ. ಈಗ ಅವರ ಮೇಲೆ ಪ್ರಕರಣ ಸಹ ದಾಖಲಿಸುವಂತೆ ಆಗ್ರಹ ಕೇಳಿ ಬಂದಿದೆ.
ತಾಯಿಯಿಂದ ಅಗಲಿದ ಅವಳಿ ಮಕ್ಕಳು ಅನಾಥ..!
ಹೆರಿಗೆಯಾದಾಗ ಅವಳಿ ಜವಳಿ ಮಕ್ಕಳನ್ನ ಬಾಣಂತಿ ತಾಯಿ ಅಗಲಿದ್ದಳು. 28ದಿನಗಳ ಕಾಲ ನಿರಂತರವಾಗಿ ಬಿಎಲ್ಡಿಯಲ್ಲಿ ಚಿಕಿತ್ಸೆ ನೀಡಲಾಗಿತ್ತಾದರು ಬಾಣಂತಿ ಬದುಕುಳಿಯಲಿಲ್ಲ. ಮಕ್ಕಳನ್ನ ಹೆತ್ತ ತಾಯಿ ಒಂದು ದಿನವು ತನ್ನ ಮಕ್ಕಳನ್ನ ನೋಡಲಾಗಲೇ ಇಲ್ಲ ಅನ್ನೋದು ದುರಾದೃಷ್ಟಕರ.