ನಡುರಸ್ತೆಯಲ್ಲೇ ಗರ್ಭಿಣಿಗೆ ಹೆರಿಗೆ: ಮುದ್ದಾದ ಹೆಣ್ಣು ಮಗುವಿಗೆ ಜನ್ಮ ನೀಡಿದ ತಾಯಿ!
ಮಾರ್ಗಮಧ್ಯೆ ಸ್ಥಳೀಯ ಮಹಿಳೆಯರಿಂದಲೇ ಗರ್ಭಿಣಿಗೆ ಹೆರಿಗೆ| ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ಸೈದಾಪೂರ ಗ್ರಾಮದಲ್ಲಿ ನಡೆದ ಘಟನೆ| ಮಗುವಿನೊಂದಿಗೆ ತಾಯಿಯೂ ಕೂಡ ಆರೋಗ್ಯಯುತವಾಗಿದ್ದಾರೆ|
ಬಾಗಲಕೋಟೆ(ಏ.06): ನಡುರಸ್ತೆಯಲ್ಲೇ ಗರ್ಭಿಣಿಗೆ ಹೆರಿಗೆಯಾದ ಘಟನೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ಸೈದಾಪೂರ ಗ್ರಾಮದ ಮುಧೋಳ- ನಿಪ್ಪಾಣಿ ರಾಜ್ಯ ಹೆದ್ದಾರಿಯಲ್ಲಿ ನಡೆದಿದೆ.
ಹೊಲದಲ್ಲಿದ್ದ ಮಹಿಳೆಗೆ ಏಕಾಏಕಿ ಹೆರಿಗೆ ನೋವು ಕಾಣಿಸಿಕೊಂಡಿದ್ದರಿಂದ ತಕ್ಷಣ ಬೈಕ್ ಮೇಲೆ ಗರ್ಭಿಣಿಯನ್ನು ಆಸ್ಪತ್ರೆಗೆ ಕರೆದೊಯ್ಯುತ್ಯಿದ್ದರು. ಈ ವೇಳೆ ಮಹಿಳೆಗೆ ಹೆರಿಗೆ ನೋವು ಹೆಚ್ಚಾಗಿದ್ದರಿಂದ ಸ್ಥಳೀಯ ಮಹಿಳೆಯರ ಸಹಾಯದಿಂದ ಸುರಕ್ಷಿತ ಹೆರಿಗೆಯಾಗಿದೆ. ಮುದ್ದಾದ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾಳೆ ಮಹಿಳೆ.
ಕೊರೋನಾ ಭೀತಿ: ಕ್ವಾರಂಟೈನ್‌ನಲ್ಲಿ ಪೊಲೀಸ್ ಪೇದೆ!
ತತ್‌ಕ್ಷಣ ಸ್ಥಳೀಯರು ಅಂಬುಲೆನ್ಸ್‌ಗೆ ಕರೆ ಮಾಡಿ ಮಾಹಿತಿ ನೀಡಿದ್ದರು. ಬಳಿಕ ಆಂಬ್ಯುಲೆನ್ಸ್ ಮೂಲಕ ಮಹಾಲಿಂಗಪೂರದ ಆಸ್ಪತ್ರೆಗೆ ಮಹಿಳೆಯನ್ನ ದಾಖಲಿಸಲಾಗಿದೆ. ಸದ್ಯ ಮಗುವಿನೊಂದಿಗೆ ತಾಯಿಯೂ ಕೂಡ ಆರೋಗ್ಯಯುತವಾಗಿದ್ದಾರೆ.