ಆ್ಯಂಬುಲೆನ್ಸ್‌ ಸಿಗದೇ ಮನೆಯಲ್ಲೇ ಹೆರಿಗೆ

ಸಕಾಲದಲ್ಲಿ ಆ್ಯಂಬುಲೆನ್ಸ್‌ ಸಿಗದೇ ಗರ್ಭಿಣಿ ಮಹಿಳೆಗೆ ಮನೆಯಲ್ಲಿಯೇ ಹೆರಿಗೆ ಆಗಿರುವ ಘಟನೆ ಮೂಡಿಗೆರೆ ತಾಲೂಕಿನ ಮತ್ತಿಕಟ್ಟೆಗ್ರಾಮದಲ್ಲಿ ಬುಧವಾರ ನಡೆದಿದೆ.

 

Woman delivered baby in house as family fails to get ambulance

ಚಿಕ್ಕಮಗಳೂರು(ಏ.23): ಸಕಾಲದಲ್ಲಿ ಆ್ಯಂಬುಲೆನ್ಸ್‌ ಸಿಗದೇ ಗರ್ಭಿಣಿ ಮಹಿಳೆಗೆ ಮನೆಯಲ್ಲಿಯೇ ಹೆರಿಗೆ ಆಗಿರುವ ಘಟನೆ ಮೂಡಿಗೆರೆ ತಾಲೂಕಿನ ಮತ್ತಿಕಟ್ಟೆಗ್ರಾಮದಲ್ಲಿ ಬುಧವಾರ ನಡೆದಿದೆ.

ಲಾಕ್‌ ಡೌನ್‌ ಹಿನ್ನೆಲೆಯಲ್ಲಿ ಆ್ಯಂಬುಲೆನ್ಸ್‌ ಸಕಾಲದಲ್ಲಿ ಸಿಗದೇ ಇದ್ದರಿಂದ ಮತ್ತಿಕಟ್ಟೆಗ್ರಾಮದ ರೂಪ ಅವರು ಉಣ್ಣಕ್ಕಿಯ ಕಾಫಿತೋಟದ ಲೈನ್‌ ಮನೆಯಲ್ಲಿ ಹೆಣ್ಣುಮಗುವಿಗೆ ಜನ್ಮ ನೀಡಿದ್ದಾರೆ.

ಮಹಾಮಾರಿ ಕೊರೋನಾದಿಂದ ಗುಣಮುಖ: ಬಳ್ಳಾರಿಯಲ್ಲಿ ಮೂವರು ಡಿಸ್ಚಾರ್ಜ್‌

ವಿಷಯ ತಿಳಿಯುತ್ತಿದ್ದಂತೆ ಆರೀಫ್‌ ಅವರು ಗ್ರಾಮಕ್ಕೆ ಆಗಮಿಸಿ ತನ್ನ ಆ್ಯಂಬುಲೆನ್ಸ್‌ನಲ್ಲಿ ರೂಪ ಹಾಗೂ ಮಗುವನ್ನು ಕರೆದುಕೊಂಡು ಹೋಗಿ ಮೂಡಿಗೆರೆಯ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ಸೇರಿಸಿ ಮಾನವೀಯತೆ ಮೆರೆದಿದ್ದಾರೆ.

Latest Videos
Follow Us:
Download App:
  • android
  • ios