ಸಿಂಧನೂರು(ಮೇ.16): ಆರು ತಿಂಗಳ ಬಾಣಂತಿಯೊಬ್ಬಳು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ರಾಯಚೂರು ಜಿಲ್ಲೆ ಸಿಂಧನೂರು ತಾಲೂಕಿನ ತುರ್ವಿಹಾಳ ಗ್ರಾಮದಲ್ಲಿ ಗುರುವಾರ ರಾತ್ರಿ ನಡೆದಿದೆ. 

ಮಲ್ಲಮ್ಮ ಅಲಿಯಾಸ್ ಅಯ್ಯಮ್ಮ (20) ನೇಣಿಗೆ ಶರಣಾದ ದುರ್ದೈವಿಯಾಗಿದ್ದಾಳೆ. ತುರ್ವಿಹಾಳ ಗ್ರಾಮದ ಮಾರುತಿ ನಗರದಲ್ಲಿ ವಾಸವಾಗಿದ್ದ ಅಯ್ಯಮ್ಮ ಹೆರಿಗೆಯಾಗಿ 6 ತಿಂಗಳಾಗಿದ್ದು, ಮಾನಸಿಕವಾಗಿ ಅಸ್ವಸ್ಥಗೊಂಡಿದ್ದರಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ. 

ನಕಲಿ ಫೇಸ್‌ಬುಕ್ ಖಾತೆಯಲ್ಲಿ ಫೋಟೋ ಹರಿಯಬಿಟ್ಟ ಯುವಕರು: ನಿಶ್ಚಿತಾರ್ಥವಾದ ಯುವತಿ ಆತ್ಮಹತ್ಯೆ ಯತ್ನ

ಈಕೆ ಈ ಹಿಂದೆ ಎರಡು ಬಾರಿ ಆತ್ಮಹತ್ಯೆಗೆ ಪ್ರಯತ್ನಿಸಿದ್ದಳು ಎಂದು ತಿಳಿದು ಬಂದಿದೆ. ಈ ಕುರಿತು ತುರ್ವಿಹಾಳ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಪಿಎಸ್‌ಐ ಎರಿಯಪ್ಪ ಅವರು ತಿಳಿಸಿದ್ದಾರೆ.