ಸೋಮವಾರದಿಂದ ಕಾಣೆಯಾಗಿದ್ದ ಮಹಿಳೆ ಶವ ಪತ್ತೆಯಾಗಿದ್ದು, ಕೊರೋನಾಕ್ಕೆ ಹೆದರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ದೂರು ದಾಖಲಾಗಿದೆ.

ಉಡುಪಿ, (ಜುಲೈ.28): ಕೊರೋನಾಕ್ಕೆ ಹೆದರಿ ಮಹಿಳೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೋಟದ ಬಿಲ್ಲಾಡಿ ಗ್ರಾಮದ ಬೂದಾಡಿ ಎಂಬಲ್ಲಿ ನಡೆದಿದೆ.

ಬೇಬಿ ಶೆಟ್ಟಿ (55) ಆತ್ಮಹತ್ಯೆ ಮಾಡಿಕೊಂಡಿರುವ ಮಹಿಳೆ. ಸೋಮವಾರದಿಂದ ಕಾಣೆಯಾಗಿದ್ದು, ಮಂಗಳವಾರ ಹತ್ತಿರದ ತೋಟದ ಬಾವಿಯಲ್ಲಿ ಅವರ ಶವ ಪತ್ತೆಯಾಗಿದೆ. 

ಆಗಸ್ಟ್‌ನಲ್ಲಿ ಏರಿಕೆಯಾಗಲಿದೆ ಕೋವಿಡ್ ಸೋಂಕಿತರ ಸಂಖ್ಯೆ: ಟಾಸ್ಕ್ ಫೋರ್ಸ್

ಬೇಬಿ ಶೆಟ್ಟಿ ಅವರ ಅಣ್ಣ ಬೆಂಗಳೂರಿನಿಂದ ಬಂದಿದ್ದು, ಅವರಿಗೆ ಕೊರೋನಾ ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ ಅವರ ಮನೆಯನ್ನು ಸೀಲ್ ಡೌನ್ ಮಾಡಲಾಗಿದೆ. 

ಇದರಿಂದ ಮಾನಸಿಕ ಅಸ್ವಸ್ಥೆಯಾಗಿರುವ ಬೇಬಿ ಶೆಟ್ಟಿ ಕೊರೋನಾ ಬಗ್ಗೆ ಭಯಭೀತರಾಗಿ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 

ಮಂಗಳವಾರ ಹತ್ತಿರದ ತೋಟದ ಬಾವಿಯಲ್ಲಿ ಅವರ ಶವ ಪತ್ತೆಯಾಗಿದ್ದು, ಕೊರೋನಾಕ್ಕೆ ಹೆದರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಕೋಟ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.