ದೇವನಹಳ್ಳಿ[ಜೂ.19] : ಭೋಗ್ಯಕ್ಕೆ ಮನೆ ನೀಡಿದ ಮಾಲೀಕ ಮತ್ತು ಅವರ ಕುಟುಂಬದವರು ಮನೆ ಖಾಲಿ ಮಾಡಿಸಲು ಒತ್ತಾಯಿಸಿ ದೈಹಿಕ ಮತ್ತು ಮಾನಸಿಕ ಹಿಂಸೆ ನೀಡುತ್ತಿದ್ದಾರೆ ಎಂದು ಆರೋಪಿಸಿ ಮಹಿಳೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡುವ ಘಟನೆ ದೇವನಹಳ್ಳಿ ತಾಲೂಕಿನ
ಮಂಜುನಾಥ ನಗರದಲ್ಲಿ ಮಂಗಳವಾರ ನಡೆದಿದೆ. 

ದೇವನಹಳ್ಳಿ ಬೈಚಾಪುರ ರಸ್ತೆಯ ಮಂಜುನಾಥನಗರದ ಬೀಡ ಸೋಮಶೇಖರ್ ಎಂಬುವರ ಮನೆಯಲ್ಲಿ ವಾಸವಾಗಿದ್ದ ಸುಬ್ರಮಣಿ ಎಂಬುವರ ಪತ್ನಿ ವಿ. ಮಂಜುಳ(32) ಆತ್ಮಹತ್ಯೆ ಮಾಡಿಕೊಂಡವರು. 

ಬೀಡ ಸೋಮಶೇಖರ್ ಮನೆಯಲ್ಲಿಯೇ ಕಾರು ಚಾಲಕನಾಗಿ ಕೆಲಸ ಮಾಡುತ್ತಿದ್ದ ಸುಬ್ರಮಣಿ ಅವರು ಪತ್ನಿ ಹಾಗೂ ಇಬ್ಬರು ಮಕ್ಕಳ ಜೊತೆ ವಾಸವಾಗಿದ್ದರು.