ಬೆಂಗಳೂರು (ಮಾ.02): ಟ್ರಾವೆಲ್‌ ವ್ಯವಹಾರದಲ್ಲಿ ಹಣ ಹೂಡಿಕೆ ಮಾಡಿ ಹೆಚ್ಚು ಲಾಭ ಸಂಪಾದಿಸಬಹುದೆಂದು ನಂಬಿಸಿ ಮಹಿಳೆಯೊಬ್ಬರಿಂದ 4.97 ಲಕ್ಷ ರು. ಹಣ ಪಡೆದು ಫೇಸ್‌ಬುಕ್‌ ಗೆಳೆಯ ವಂಚಿಸಿರುವ ಘಟನೆ ನಡೆದಿದೆ.

ಬೆಳ್ಳಂದೂರು ನಿವಾಸಿ ಅನಿತಾ ಹಣ ಕಳೆದುಕೊಂಡಿದ್ದು, ಈ ಬಗ್ಗೆ ವೈಟ್‌ಫೀಲ್ಡ್‌ ಸಿಇಎನ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

2020ರಲ್ಲಿ ಫೇಸ್‌ಬುಕ್‌ನಲ್ಲಿ ಅಪರಿಚಿತ ರವಿಕುಮಾರ್‌ ಅಲಿಯಾಸ್‌ ಬುಲೆಟ್‌ ರವಿ ಪರಿಚಯವಾಗಿತ್ತು. ತಾನು ಟ್ರಾವೆಲ್‌ ಬ್ಯುಸಿನೆಸ್‌ ಮಾಡುತ್ತಿರುವುದಾಗಿ ಹೇಳಿದ್ದ. 

ದಾಳಿಯಲ್ಲಿ ಸಾಹುಕಾರ ಬಚಾವಾಗಿದ್ದು ಹೇಗೆ? ಬುಲೆಟ್ ಪ್ರೂಫ್ ರಹಸ್ಯ

ಬಳಿಕ ಈ ವ್ಯವಹಾರದಲ್ಲಿ ನೀವು ಹಣ ಹೂಡಿಕೆ ಮಾಡಿದರೆ ಹೆಚ್ಚು ಲಾಭ ಸಂಪಾದಿಸಬಹುದೆಂದು ನಂಬಿಸಿದ. ಆತನ ಮಾತನ್ನು ನಂಬಿ ಎರಡು ಹಂತದಲ್ಲಿ 4.97 ಲಕ್ಷ ಹಣವನ್ನು ಆನ್‌ಲೈನ್‌ ಮೂಲಕ ಕಳುಹಿಸಿದೆ. ಆದರೆ ಹಣವನ್ನು ಹೂಡಿಕೆ ಮಾಡದೆ ಹಾಗೂ ಮರಳಿಸದೆ ವಂಚಿಸಿದ್ದಾನೆ ಎಂದು ಸಂತ್ರಸ್ತೆ ದೂರಿನಲ್ಲಿ ಆರೋಪಿಸಿದ್ದಾರೆ.