ಬೆಂಗಳೂರು (ಮಾ.13):  ನಿದ್ರೆಗೆ ಜಾರಿದ್ದ ಮಹಿಳಾ ಪ್ರಯಾಣಿಕರೊಬ್ಬರಿಗೆ ಉಬರ್‌ ಕ್ಯಾಬ್‌ ಚಾಲಕ ಲೈಂಗಿಕ ಕಿರುಕುಳ ನೀಡಿರುವ ಪ್ರಕರಣ ಬೆಳಕಿಗೆ ಬಂದಿದೆ.

ಸರ್ಜಾಪುರ ನಿವಾಸಿ 25 ವರ್ಷದ ಸಂತ್ರಸ್ತ ಯುವತಿ ಕೊಟ್ಟದೂರಿನ ಮೇರೆಗೆ ಆರೋಪಿ ಕ್ಯಾಬ್‌ ಚಾಲಕ ನಾಗರಾಜ್‌ ಎಂಬಾತನನ್ನು ಬಂಧಿಸಲಾಗಿದೆ.

ಖಾಸಗಿ ಕಂಪನಿ ಉದ್ಯೋಗಿಯಾಗಿರುವ ಸಂತ್ರಸ್ತ ಯುವತಿ ಸರ್ಜಾಪುರ ರಸ್ತೆಯಲ್ಲಿರುವ ಅಪಾರ್ಟ್‌ಮೆಂಟ್‌ವೊಂದರಲ್ಲಿ ನೆಲೆಸಿದ್ದರು. ಹೊಸೂರು ರಸ್ತೆಯಲ್ಲಿನ ಸ್ನೇಹಿತರನ್ನು ಭೇಟಿಯಾಗಿ ಫೆ.7ರಂದು ಮಧ್ಯಾಹ್ನ 12 ಗಂಟೆ ಸುಮಾರಿಗೆ ತಮ್ಮ ಫ್ಯಾಲಟ್‌ಗೆ ಹೋಗಲು ಉಬರ್‌ ಕ್ಯಾಬ್‌ ಬುಕ್‌ ಮಾಡಿದ್ದರು.

ಹೊಸೂರು ರಸ್ತೆಯಲ್ಲಿ ಸಂತ್ರಸ್ತೆ ಕ್ಯಾಬ್‌ ಹತ್ತಿ ಹಿಂಬದಿ ಸೀಟಿನಲ್ಲಿ ನಿದ್ರೆಗೆ ಜಾರಿದ್ದರು. ಆರೋಪಿ ಕ್ಯಾಬ್‌ ಚಾಲಕ ಕಾರನ್ನು ಚಲಾಯಿಸಿಕೊಂಡು ಎಇಟಿ ಕಾಲೇಜು ಜಂಕ್ಷನ್‌ ಸಮೀಪದಲ್ಲಿ ಕಾರು ನಿಲ್ಲಿಸಿದ್ದ. ಬಳಿಕ ಹಿಂದಿನ ಸೀಟಿನಲ್ಲಿ ಕುಳಿತಿದ್ದ ಸೀಟ್‌ಗೆ ಬಂದು ನಿದ್ರೆಗೆ ಜಾರಿದ್ದ ಸಂತ್ರಸ್ತೆಯ ಬಟ್ಟೆಒಳಗೆ ಕೈಹಾಕಿ ಆಕೆಯ ಅಂಗಾಂಗ ಮುಟ್ಟಿ, ಲೈಂಗಿಕ ಕಿರುಕುಳ ನೀಡಿದ್ದಾನೆ. 

ಐನಾತಿ ರೌಡಿಶೀಟರ್ ಸ್ಲಂ ಭರತನನ್ನ ಎಸ್ಕೇಪ್ ಮಾಡಿಸಿದ್ದ ಆರೋಪಿಗಳು ಲಾಕ್.

ಎಚ್ಚರಗೊಂಡ ಯುವತಿ ಜೋರಾಗಿ ಚೀರಾಡಿದ್ದು, ಆರೋಪಿ ಕೂಡಲೇ ತನ್ನ ಡ್ರೈವರ್‌ ಸೀಟಿಗೆ ತೆರಳಿ ವೇಗವಾಗಿ ಕಾರು ಚಲಾಯಿಸಿದ್ದಾನೆ. ನಂತರ ಸಂತ್ರಸ್ತೆ ಇಳಿಯಬೇಕಿದ್ದ ಅಪಾರ್ಟ್‌ಮೆಂಟ್‌ನಿಂದ 100 ಮೀಟರ್‌ ದೂರದಲ್ಲಿ ಕಾರನ್ನು ನಿಲ್ಲಿಸಿದ್ದು, ಯುವತಿ ಕಾರು ಇಳಿದು ಹೋಗಿದ್ದಾರೆ. ಈ ಸಂಬಂಧ ಯುವತಿ ಕೊಟ್ಟದೂರಿನ ಮೇರೆಗೆ ದೂರು ದಾಖಲಿಸಿಕೊಳ್ಳಲಾಗಿತ್ತು.