Asianet Suvarna News Asianet Suvarna News

ಹಿಟ್ ಅಂಡ್ ರನ್ ಕಾಯ್ದೆಯನ್ನು ಕೂಡಲೇ ಹಿಂಪಡೆಯಿರಿ: ನಾಸೀರ್ ಖಾನ್ ಒತ್ತಾಯ

ಹಿಟ್ ಅಂಡ್ ರನ್ ಪ್ರಕರಣದ ಚಾಲಕರಿಗೆ ಸೆಕ್ಷನ್ 106(1) ಮತ್ತು (2)ಕಾಯ್ದೆ ಅನ್ವಯ ೧೦ ವರ್ಷ ಜೈಲು ೭ ಲಕ್ಷ ರು. ದಂಡದ ಕಾನೂನನ್ನು ಕೇಂದ್ರ ಸರಕಾರ ವಾಪಸ್ಸು ಪಡೆಯಬೇಕು ಎಂದು ಶಿರಾ ತಾಲೂಕು ಲಾರಿ ಮತ್ತು ಟೆಂಪೋ ಚಾಲಕರು ಹಾಗೂ ಸಹಾಯಕರ ಸಂಘದ ನಾಸೀರ್ ಖಾನ್ ಒತ್ತಾಯಿಸಿದರು.

Withdraw Hit and Run Act immediately: Naseer Khan urges snr
Author
First Published Jan 19, 2024, 9:53 AM IST

  ಶಿರಾ :  ಹಿಟ್ ಅಂಡ್ ರನ್ ಪ್ರಕರಣದ ಚಾಲಕರಿಗೆ ಸೆಕ್ಷನ್ 106(1) ಮತ್ತು (2)ಕಾಯ್ದೆ ಅನ್ವಯ 10 ವರ್ಷ ಜೈಲು 7 ಲಕ್ಷ ರು. ದಂಡದ ಕಾನೂನನ್ನು ಕೇಂದ್ರ ಸರಕಾರ ವಾಪಸ್ಸು ಪಡೆಯಬೇಕು ಎಂದು ಶಿರಾ ತಾಲೂಕು ಲಾರಿ ಮತ್ತು ಟೆಂಪೋ ಚಾಲಕರು ಹಾಗೂ ಸಹಾಯಕರ ಸಂಘದ ನಾಸೀರ್ ಖಾನ್ ಒತ್ತಾಯಿಸಿದರು.

ಬುಧವಾರ ನಗರದ ದರ್ಗಾ ಸರ್ಕಲ್‌ನಲ್ಲಿ ಲಾರಿ ಮತ್ತು ಟೆಂಪೋ ಚಾಲಕರು ಹಾಗೂ ಸಹಾಯಕರ ಸಂಘದ ವತಿಯಿಂದ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದರು. ಯಾವ ಚಾಲಕರೂ ಬೇಕು ಎಂದು ಅಪಘಾತ ಮಾಡುವುದಿಲ್ಲ. ಅಪಘಾತಗಳು ಆಕಸ್ಮಿಕವಾಗಿ ಸಂಭವಿಸುತ್ತವೆ. ಇಂತಹ ಘಟನೆಗೆ ಚಾಲಕರಿಗೆ ಹತ್ತು ವರ್ಷಗಳ ಜೈಲು ಶಿಕ್ಷೆ ೭ ಲಕ್ಷ ರು. ದಂಡ ವಿಧಿಸುವ ಕಾನೂನು ಮಾಡಿದರೆ ಚಾಲಕರು ಏನು ಮಾಡಬೇಕು. ಈಗಾದರೇ ನಾವು ನಮ್ಮ ಕುಟುಂಬವನ್ನು ನಿರ್ವಹಣೆ ಮಾಡುವುದು ಹೇಗೆ ಎಂದ ಅವರು ಕೂಡಲೇ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಹಾಗೂ ಅಮಿತ್ ಶಾ ಅವರು ಹಿಟ್ ಅಂಡ್ ರನ್ ಕಾಯ್ದೆಯನ್ನು ವಾಪಸ್ಸು ಪಡೆಯಬೇಕು ಎಂದು ಒತ್ತಾಯಿಸಿದರು.

ಚಾರ್ಮಾಡಿ ಘಾಟಿಯ 2000 ಅಡಿ ಪ್ರಪಾತಕ್ಕೆ ಬಿದ್ದು ಟಿಪ್ಪರ್ ಲಾರಿ ಅಪ್ಪಚ್ಚಿ, ಪವಾಡ ಸದೃಶವಾಗಿ ಬದುಕಿದ ಚಾಲಕ

ಪ್ರತಿಭಟನೆಯಲ್ಲಿ ಲಾರಿ ಮತ್ತು ಟೆಂಪೋ ಚಾಲಕರು ಹಾಗೂ ಸಹಾಯಕರ ಸಂಘದ ರೆಹಮತ್ ಉಲ್ಲಾ ಖಾನ್, ಸಿಖಂದರ್ ಸಾಬ್, ಇದಾಯಿತ್ ಉಲ್ಲಾ ಖಾನ್, ಸೈಯದ್ ನೌಶಾದ್, ಅಬ್ದುಲ್ ರೆಹಮಾನ್ ಸೇರಿದಂತೆ ಹಲವರು ಭಾಗವಹಿಸಿದ್ದರು.

ಲಾರಿ ಚಾಲಕರಿಂದ ಅನಿರ್ಧಿಷ್ಟಾವದಿ ಮುಷ್ಕರ

 ತುಮಕೂರು :  ಹಿಟ್ ಅಂಡ್ ರನ್ ಕೇಸಿಗೆ ಸಂಬಂಧಿಸಿದಂತೆ ತಂದಿರುವ ತಿದ್ದುಪಡಿ ಅತ್ಯಂತ ಅವೈಜ್ಞಾನಿಕವಾಗಿದ್ದು, ಕೂಡಲೆ ಹಿಂಪಡೆಯವಂತೆ ಒತ್ತಾಯಿಸಿ ಜ.17 ರಿಂದ ರಾಜ್ಯದಾದ್ಯಂತ ಲಾರಿ ಚಾಲಕರು ಮತ್ತು ಮಾಲೀಕರು ಅನಿರ್ಧಿಷ್ಟಾವಧಿ ಮುಷ್ಕರ ಆರಂಭಿಸುತ್ತಿರುವುದಾಗಿ ತುಮಕೂರು ಜಿಲ್ಲಾ ಲಾರಿ ಚಾಲಕರ ಮತ್ತು ಸಹಾಯಕರ ಸಂಘ ನೇತೃತ್ವದಲ್ಲಿ ಲಾರಿ ಮಾಲೀಕರ ಸಂಘ ಹಾಗೂ ಇನ್ನಿತರ ಚಾಲಕರ ಸಂಘಗಳ ಪದಾಧಿಕಾರಿಗಳು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ತುಮಕೂರು ಜಿಲ್ಲಾ ಲಾರಿ ಚಾಲಕರ ಮತ್ತು ಸಹಾಯಕರ ಸಂಘದ ಅಧ್ಯಕ್ಷ ಚಂದ್ರಶೇಖರ್, ಪ್ರಧಾನ ಕಾರ್ಯದರ್ಶಿ ಸೈಯದ್ ಮೆಹಬೂಬ್ ಪಾಷ, ಲಾರಿ ಮಾಲೀಕರ ಸಂಘದ ಅಧ್ಯಕ್ಷ ಪ್ರಸನ್ನಕುಮಾರ್, ಕಾರ್ಯದರ್ಶಿ ಶೌಕತ್, ತುಮಕೂರು ತಾಲೂಕು ಲಾರಿ ಮಾಲೀಕರು ಮತ್ತು ಚಾಲಕರ ಸಂಘದ ಅಧ್ಯಕ್ಷ ಅಬ್ದುಲ್ ಖಾದರ್, ನಿರ್ದೇಶಕ ಟಿ.ಆರ್‌. ಸದಾ ಶಿವಯ್ಯ, ಸುರೇಶ್, ನಾಗಭೂಷಣ್ ಸೇರಿದಂತೆ ಹಲವರು, ಜಿಲ್ಲಾಧಿಕಾರಿಗಳನ್ನು ಭೇಟಿಯಾಗಿ ಮನವಿ ಸಲ್ಲಿಸಿದರು.

ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಹೊಸ ಕಾಯ್ದೆಯ ಪ್ರಕಾರ ಒಂದು ವೇಳೆ ಅಪಘಾತ ಜರುಗಿ, ಜನರು ನನ್ನ ಮೇಲೆ ಹಲ್ಲೆ ಮಾಡಬಹುದೆಂಬ ಭಯದಿಂದ ಚಾಲಕ ಲಾರಿ ಬಿಟ್ಟು ಓಡಿ ಹೋದರೆ, ಆತನಿಗೆ 7 ವರ್ಷ ಸಜೆ ಹಾಗೂ 10 ಲಕ್ಷ ರು. ದಂಡ ವಿಧಿಸಲು ಭಾರತೀಯ ನ್ಯಾಯ ಸಂಹಿತೆಯಲ್ಲಿ ಅವಕಾಶವಿದೆ. ಇದು ಅತ್ಯಂತ ಖಂಡನೀಯ ಮತ್ತು ಅವೈಜ್ಞಾನಿಕವಾಗಿದೆ. ಭಾರತೀಯ ದಂಡ ಸಂಹಿತೆ 1860 ರಲ್ಲಿ ಇಂತಹ ಪ್ರಕರಣಗಳಲ್ಲಿ ಮೊದಲು ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿ, ವಿಚಾರಣೆ ನಡೆದು ತಪಿತಸ್ಥ ಎಂದು ಕಂಡ ಬಂದ ನಂತರ ಶಿಕ್ಷೆ ಮತ್ತು ದಂಡ ವಿಧಿಸಲು ಅವಕಾಶವಿತ್ತು.

ಆದರೆ ಹೊಸ ಭಾರತೀಯ ನ್ಯಾಯ ಸಂಹಿತೆಯಲ್ಲಿ ಇದಕ್ಜೆ ಅವಕಾಶವೇ ಇಲ್ಲದಂತಾಗಿದೆ. ಹಾಗಾಗಿ ಇದೊಂದು ಅವೈಜ್ಞಾನಿಕ ಕಾಯ್ದೆಯಾಗಿದ್ದು, ಚಾಲಕರಿಗೆ ಮಾರಕವಾಗಿದೆ. ಇದು ಕೇವಲ ಬಾರಿ ವಾಹನಗಳಿಗೆ ಸಂಬಂಧಿಸಿದಲ್ಲ. ಲಘು ವಾಹನಗಳಿಗೂ ಅನ್ವಯವಾಗುವ ಕಾರಣ, ಜ.17 ರಿಂದ ಅನಿರ್ಧಿಷಾವಧಿ ಮುಷ್ಕರ ಆರಂಭಿಸುವುದಾಗಿ ಟಿ.ಆರ್‌. ಸದಾಶಿವಯ್ಯ ತಿಳಿಸಿದರು.

Latest Videos
Follow Us:
Download App:
  • android
  • ios