ಬೆಂ.ವಿವಿ ಕ್ಯಾಂಪಸ್‌ನ 34.4 ಎಕರೆ ಒತ್ತುವರಿ ಹಿಂಪಡೆಯಿರಿ: ಸಚಿವ ಎಂ.ಸಿ.ಸುಧಾಕರ್ ಸೂಚನೆ
ಬೆಂಗಳೂರು ವಿಶ್ವವಿದ್ಯಾಲಯ 1201 ಎಕರೆ ಜ್ಞಾನಭಾರತಿ ಕ್ಯಾಂಪಸ್‌ನಲ್ಲಿ ಒತ್ತವರಿಯಾಗಿರುವ 34.4 ಕೆರೆ ಜಾಗವನ್ನು ಸಂಪೂರ್ಣ ಸರ್ವೆ ನಡೆಸಿ, ಮೂಲ ದಾಖಲೆಗಳನ್ನು ಪರಿಶೀಲನೆ ನಡೆಸಿ ಕಾನೂನಾತ್ಮಕವಾಗಿ ಒತ್ತುವರಿ ತೆರವಿಗೆ ಕ್ರಮ ಕೈಗೊಳ್ಳುವಂತೆ ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ ಅವರು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
ಬೆಂಗಳೂರು (ಜ.06): ಬೆಂಗಳೂರು ವಿಶ್ವವಿದ್ಯಾಲಯ 1201 ಎಕರೆ ಜ್ಞಾನಭಾರತಿ ಕ್ಯಾಂಪಸ್‌ನಲ್ಲಿ ಒತ್ತವರಿಯಾಗಿರುವ 34.4 ಕೆರೆ ಜಾಗವನ್ನು ಸಂಪೂರ್ಣ ಸರ್ವೆ ನಡೆಸಿ, ಮೂಲ ದಾಖಲೆಗಳನ್ನು ಪರಿಶೀಲನೆ ನಡೆಸಿ ಕಾನೂನಾತ್ಮಕವಾಗಿ ಒತ್ತುವರಿ ತೆರವಿಗೆ ಕ್ರಮ ಕೈಗೊಳ್ಳುವಂತೆ ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ ಅವರು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
ರಾಜ್ಯ ಉನ್ನತ ಶಿಕ್ಷಣ ಪರಿಷತ್ತು ಆವರಣದಲ್ಲಿ ಶುಕ್ರವಾರ ಉನ್ನತ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಶ್ರೀಕರ್, ಭೂಮಾಪನ ಇಲಾಖೆಯ ಆಯುಕ್ತ ಮಂಜುನಾಥ್ ಮತ್ತು ಬೆಂ.ವಿವಿ ಅಕಾರಿಗಳೊಂದಿಗೆ ಸಭೆ ನಡೆಸಿದ ಸಚಿವರು, ಭೂಮಾಪನ ಇಲಾಖೆ ಹಾಗೂ ವಿವಿಯ ಅಧಿಕಾರಿಗಳು ಜಂಟಿಯಾಗಿ ಸರ್ವೆ ನಡೆಸಿ ಒತ್ತುವರಿಯಾಗಿರುವ ಕ್ಯಾಂಪಸ್ ಭೂಮಿಯನ್ನು ವಾಪಸ್ ವಿವಿ ಪಾಲಿಗೆ ಉಳಿಸಿಕೊಳ್ಳಬೇಕೆಂದು ಅಕಾರಿಗಳಿಗೆ ನಿರ್ದೇಶನ ನೀಡಿದರು.
ಒಟ್ಟು ವಿಸ್ತೀರ್ಣದ 1201 ಎಕರೆ ಭೂಮಿಯಲ್ಲಿ ಸರ್ವೆ ಮಾಡಿದಾಗ 1184.16 ಎಕರೆ ವಿಸ್ತೀರ್ಣ ದೊರೆಯುತ್ತಿದೆ. ಕ್ಯಾಂಪಸ್‌ನಲ್ಲಿ ಒಟ್ಟು 278 ಎಕರೆ ಭೂ ಪ್ರದೇಶವನ್ನು 26 ಶಿಕ್ಷಣ ಸಂಸ್ಥೆಗಳಿಗೆ ಗುತ್ತಿಗೆ ನೀಡಲಾಗಿದೆ. ಆದರೆ, ಈ ಗುತ್ತಿಗೆ ಶಿಕ್ಷಣ ಸಂಸ್ಥೆಗಳ ಜಾಗ 313 ಎಕರೆ ಇರುವುದು ಕಂಡುಬಂದಿದೆ. ಹಾಗೆಯೇ ದಾಖಲೆಯ ಪ್ರಕಾರ 34.4 ಎಕರೆ ಅತಿಕ್ರಮ ಪ್ರದೇಶವಾಗಿದ್ದು, ಒತ್ತವರಿದಾರರ ಸ್ವಾಧೀನದಲ್ಲಿರುವುದು ಕಂಡುಬಂದಿದೆ ಎಂದು ಸಚಿವರು ತಿಳಿಸಿದ್ದಾರೆ.
ಕೇಂದ್ರ ಸರ್ಕಾರದ ಯೋಜನೆಗಳನ್ನು ಜನರಿಗೆ ತಲುಪಿಸುವುದೆ ಬಿಜೆಪಿ ಗುರಿ: ಭಗವಂತ ಖೂಬಾ
ಈ ಪೈಕಿ 19 ಎಕರೆಗೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿ ದಾವೆ ಹೂಡಲಾಗಿದೆ. ಒತ್ತುವರಿ ಭೂಮಿಯ ಆರ್‌ಟಿಸಿ ಹೊಂದಿರುವ ಖಾಸಗಿ ವ್ಯಕ್ತಿಗಳ ಬಗ್ಗೆ ಸರ್ವೆ ನಡೆಸಿ. ಹಿಂದಿನ ಕೈಬರಹದ ದಾಖಲೆ ಹಾಗೂ ಈಗಿನ ಕಂಪ್ಯೂಟರ್ ದಾಖಲೆಗಳನ್ನು ಸಂಗ್ರಹಿಸಿ, ಮೂಲ ಟಿಪ್ಪಣಿ, ಎಡ ಬಲ ಆಕಾರಬಂದು, ಸೇರಿದಂತೆ ಎಲ್ಲಾ ದಾಖಲೆಗಳನ್ನು ಭೂಮಾಪನ ಇಲಾಖೆಯ ಸಹಕಾರದೊಂದಿಗೆ ಸಂಗ್ರಹಿಸಬೇಕು. ನ್ಯಾಯಾಲಯದಲ್ಲೂ ಇದರ ಸಂಬಂಧ ಸಮರ್ಥವಾಗಿ ವಕೀಲ ಮೂಲಕ ವಾದ ಮಂಡಿಸಿ ದಾಖಲೆಗಳನ್ನು ಸಲ್ಲಿಸಿ ಒತ್ತುವರಿ ಭೂಮಿಯನ್ನು ವಾಪಸ್ ಪಡೆಯಲು ಕ್ರಮ ವಹಿಸಬೇಕು ಎಂದು ಸೂಚಿಸಿದರು.