ರಾಯಚೂರು(ಡಿ.27): ನಗರದ ಜಿಲ್ಲಾಧಿಕಾರಿ ಕಚೇರಿ ಗೇಟಿನ ಮುಂಭಾಗದಲ್ಲಿರುವ ರಸ್ತೆಯಲ್ಲಿ ವಾಮಾಚಾರ ಮಾಡಿರುವವ ಘಟನೆ ಗುರುವಾರ ನಡೆದಿದೆ. 

ಹೌದು, ಎಳ್ಳು ಅಮವಾಸ್ಯೆ, ಕಂಕಣ ಸೂರ್ಯ ಗ್ರಹಣ ಹಿನ್ನೆಲೆಯಲ್ಲಿ ಮೂರು ಹಾದಿಯ ಮಾರ್ಗದಲ್ಲಿ ಬುಧವಾರ ರಾತ್ರಿ ಅಪರಿಚಿತರು ವಾಮಾಚಾರದ ವಸ್ತುಗಳನ್ನು ಇಟ್ಟಿದ್ದಾರೆ. ಡಿಸಿ ಕಚೇರಿ ಗೇಟಿನ ಮುಂಭಾಗದ ಮೂರು ಹಾದಿಯ ರಸ್ತೆ ಮೇಲೆ ಎರಡು ಕಪ್ಪು ಪ್ಲಾಸ್ಟಿಕ್‌ನಲ್ಲಿ ನಿಂಬೆ ಹಣ್ಣು, ಮೊಟ್ಟೆ, ಅರಿಷಿಣ, ಕುಂಕುಮವನ್ನು ಇಟ್ಟಿದ್ದಾರೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಬೇರೆ ಕಡೆ ಮಾಟಮಂತ್ರ ಮಾಡಿಸಿ ಈ ಪ್ರದೇಶದಲ್ಲಿ ತಂದು ಹಾಕಿರಬಹುದು ಎಂದು ಸಾರ್ವಜನಿಕರು ಶಂಕೆ ವ್ಯಕ್ತಪಡಿಸಿದ್ದಾರೆ. ಮುಖ್ಯ ರಸ್ತೆಯಲ್ಲಿಯೇ ವಾಮಾಚಾರದ ವಸ್ತುಗಳನ್ನು ಕಂಡು ವಾಹನ ಸವಾರರು, ಸಾರ್ವಜನಿಕರು ಆತಂಕದಲ್ಲಿ ರಸ್ತೆ ಮೇಲೆ ಸಂಚರಿಸಿದರು.