ಪಂಚರತ್ನ ಯೋಜನೆಗಳ ಜಾರಿಗೆ ಜೆಡಿಎಸ್‌ ಗೆಲ್ಲಿಸಿ : ಎಂ.ಶ್ರೀನಿವಾಸ್‌

ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ ಮಹತ್ವಾಕಾಂಕ್ಷೆಯ ಪಂಚರತ್ನ ಯೋಜನೆಗಳ ಜಾರಿಗೆ ಜನರು ಬಹುಮತದೊಂದಿಗೆ ಜೆಡಿಎಸ್‌ ಸರ್ಕಾರವನ್ನು ಅಧಿಕಾರಕ್ಕೆ ತರಬೇಕು ಎಂದು ಶಾಸಕ ಎಂ.ಶ್ರೀನಿವಾಸ್‌ ಹೇಳಿದ್ದಾರೆ.

Win JDS for the implementation of Pancharatna schemes M Srinivas snr

  ಮಂಡ್ಯ :   ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ ಮಹತ್ವಾಕಾಂಕ್ಷೆಯ ಪಂಚರತ್ನ ಯೋಜನೆಗಳ ಜಾರಿಗೆ ಜನರು ಬಹುಮತದೊಂದಿಗೆ ಜೆಡಿಎಸ್‌ ಸರ್ಕಾರವನ್ನು ಅಧಿಕಾರಕ್ಕೆ ತರಬೇಕು ಎಂದು ಶಾಸಕ ಎಂ.ಶ್ರೀನಿವಾಸ್‌ ಹೇಳಿದ್ದಾರೆ.

ಉಚಿತ ಶಿಕ್ಷಣ, ಆರೋಗ್ಯ, ರೈತರ ಬದುಕಿನ ರಕ್ಷಣೆ, ಯುವಕರಿಗೆ ಉದ್ಯೋಗ, ಮಹಿಳೆಯರ ಸ್ವಾವಲಂಬನೆ ಧ್ಯೇಯವನ್ನಿಟ್ಟುಕೊಂಡು ಕುಮಾರಸ್ವಾಮಿ ಅವರು ಪಂಚರತ್ನ ಯೋಜನೆ ರೂಪಿಸಿದ್ದಾರೆ. ಸರ್ವಜನಾಂಗದವರ ಶ್ರೇಯೋಭಿವೃದ್ಧಿಯನ್ನು ಗುರಿಯಾಗಿಸಿಕೊಂಡು ರೂಪಿಸಿರುವ ಈ ಯೋಜನೆಗಳಿಂದ ಸಾಮಾನ್ಯ ಜನರು, ರೈತರು, ಮಹಿಳೆಯರ ಬದುಕು ಹಸನಾಗಲಿದೆ. ಈ ಯೋಜನೆಗಳ ಜಾರಿಯಿಂದ ಕರ್ನಾಟಕ ಹಿಂದೆಂದೂ ಕಾಣದ ರೀತಿ ಅಭಿವೃದ್ಧಿಯಲ್ಲಿ ಹೊಸ ಬದಲಾವಣೆಯನ್ನು ಕಾಣಬಹುದು ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಜನಪರ ಹಾಗೂ ರೈತ ಪರವಾದ ಸರ್ಕಾರ ರಚನೆ ಪ್ರಾದೇಶಿಕ ಪಕ್ಷದಿಂದ ಮಾತ್ರ ಸಾಧ್ಯ. ರೈತರ ಸಮಸ್ಯೆಗಳಿಗೆ ಪರಿಹಾರ ದೊರಕಬೇಕಾದರೆ ಕುಮಾರಸ್ವಾಮಿ ಅವರು ಮತ್ತೆ ಮುಖ್ಯಮಂತ್ರಿಯಾಗಬೇಕು. ಬಹುಮತದೊಂದಿಗೆ ಜೆಡಿಎಸ್‌ ಪಕ್ಷವನ್ನು ಅಧಿಕಾರಕ್ಕೆ ತಂದರೆ ಜನರ ನಿರೀಕ್ಷೆಗೆ ತಕ್ಕಂತೆ ಆಡಳಿತ ನಡೆಸಲು ಸಾಧ್ಯವಾಗಲಿದೆ ಎಂದಿದ್ದಾರೆ. ಮಾ.26ರಂದು ಮೈಸೂರಿನಲ್ಲಿ ನಡೆಯಲಿರುವ ಪಂಚರತ್ನ ರಥಯಾತ್ರೆ ಸಮಾರೋಪ ಸಮಾರಂಭಕ್ಕೆ ಜಿಲ್ಲೆಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಜನರು ಆಗಮಿಸಬೇಕು. ಕಳೆದ ಬಾರಿಯಂತೆ ಈ ಬಾರಿಯೂ ಜಿಲ್ಲೆಯಲ್ಲಿ ಏಳಕ್ಕೆ ಏಳು ಕ್ಷೇತ್ರಗಳಲ್ಲಿ ಪಕ್ಷವನ್ನು ಗೆಲ್ಲಿಸುವಂತೆ ಮನವಿ ಮಾಡಿದ್ದಾರೆ.

ಅನ್ನದಾತರಿಗೆ ಕುಮಾರಸ್ವಾಮಿ ಪತ್ರ

ಬೆಂಗಳೂರು (ಮಾ.24): ‘ಜೆಡಿಎಸ್‌ ಪಂಚರತ್ನ ಯೋಜನೆಗಳು ಜಾತಿಗಳನ್ನು ಮೀರಿದ ಭ್ರಾತೃತ್ವದ, ಸೌಹಾರ್ದತೆಯ ಶಾಶ್ವತ ಕಾರ್ಯಕ್ರಮಗಳು. ಜಾತಿ, ಮತ, ಪಕ್ಷ ಭೇದ ಮೀರಿ ನನಗೊಂದು ಅವಕಾಶ ಕೊಟ್ಟು, ಐದು ವರ್ಷಗಳ ಪರಿಪೂರ್ಣ ಸರ್ಕಾರ ನೀಡಿ. ನಿಮ್ಮ ಬದುಕನ್ನು ಕಟ್ಟುವುದರ ಜತೆಗೆ ಭಾರತ ಹೆಮ್ಮೆಯಿಂದ ನೋಡಬಲ್ಲ ಕರ್ನಾಟಕವನ್ನು ಕಟ್ಟುತ್ತೇನೆ’ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಮನವಿ ಮಾಡಿದ್ದಾರೆ.

‘ಅನ್ನದಾತರಿಗೆ ಕುಮಾರಣ್ಣ ಅವರ ಪತ್ರ’ ಎಂಬ ಹೆಸರಲ್ಲಿ ರೈತರಿಗೆ ಬರೆದ ಬಹಿರಂಗ ಪತ್ರದಲ್ಲಿ ಜೆಡಿಎಸ್‌ ಬೆಂಬಲಿಸುವಂತೆ ಕೋರಿದ್ದಾರೆ. ರೈತರ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಉಚಿತ. ಎಲ್‌ಕೆಜಿಯಿಂದ ದ್ವಿತೀಯ ಪಿಯುಸಿವರೆಗೆ ಕನ್ನಡ, ಇಂಗ್ಲೀಷ್‌ ಮಾಧ್ಯಮದಲ್ಲಿ ಉಚಿತ ಶಿಕ್ಷಣ. ಈ ಯೋಜನೆಯಿಂದ ರೈತರು ಮಕ್ಕಳ ಶಿಕ್ಷಣಕ್ಕಾಗಿ ಸಾಲಕ್ಕೆ ಸಿಲುಕುವುದು ತಪ್ಪುತ್ತದೆ. ಹಾಗೆಯೇ, ಆರೋಗ್ಯಕ್ಕಾಗಿ ಜನರು ಸಾಲದ ಸುಳಿಗೆ ಬೀಳದಂತೆ ನೋಡಿಕೊಳ್ಳಲಾಗುವುದು. ಕ್ಯಾನ್ಸರ್‌, ಹೃದ್ರೋಗ, ಬೋನ್‌ ಮ್ಯಾರೋ ಸೇರಿ ಯಾವುದೇ ಮಾರಣಾಂತಿಕ ಕಾಯಿಲೆ ಬಂದರೂ ಸರ್ಕಾರವೇ ವೆಚ್ಚ ಭರಿಸುವ ಯೋಜನೆಯೇ ಆರೋಗ್ಯ ಸಂಪತ್ತು. 

ಯಡಿಯೂರಪ್ಪರನ್ನು ಬಿಜೆಪಿ ಹೆದರಿಸುತ್ತಿದೆ: ಡಿ.ಕೆ.ಶಿವಕುಮಾರ್‌

ಐದು ಲಕ್ಷ ರು. ವೆಚ್ಚದಲ್ಲಿ ಮನೆ, ಹಳ್ಳಿಯ ಮಟ್ಟದಲ್ಲಿಯೇ ಆದಾಯಕ್ಕಾಗಿ ಮಹಿಳೆಯರು, ಯುವಕರಿಗೆ ಉದ್ಯೋಗ ಸೃಷ್ಟಿಮಾಡಲಾಗುವುದು ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ರೈತರು ಸಾಲಕ್ಕಾಗಿ ಯಾರಲ್ಲಿಯೂ ಕೈ ಚಾಚಬಾರದು. ಸ್ವಾಭಿಮಾನದಿಂದ ಬಾಳ್ವೆ ನಡೆಸಬೇಕು. ಅನ್ನ ಕೊಡುವ ರೈತ ಸಂತೋಷವಾಗಿ ಭೂಮಿ ತಾಯಿ ಸೇವೆ ಮಾಡಬೇಕು. ಅದಕ್ಕಾಗಿ ರಾಜ್ಯದ ರೈತ ಸಂಕುಲ ಶಾಶ್ವತವಾಗಿ ಸಾಲ ಮಾಡದಂತೆ ಪಂಚರತ್ನ ಯೋಜನೆಗಳಲ್ಲಿ ‘ರೈತ ಚೈತನ್ಯ’ ಎಂಬ ಕಾರ್ಯಕ್ರಮ ರೂಪಿಸಲಾಗಿದೆ ಎಂದು ತಿಳಿಸಿದ್ದಾರೆ.

ಡಿ-ನೋಟಿಫೈ ಕೇಸು, ವಿಚಾರಣೆಗೆ ಎಚ್‌ಡಿಕೆ ಗೈರು: ಹಲಗೇವಡೇರಹಳ್ಳಿ ಡಿ-ನೋಟಿಫಿಕೇಷನ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ಮುಂದೆ ಗೈರು ಹಾಜರಾದರು. ಮಂಗಳವಾರ ವಿಚಾರಣೆಗೆ ಹಾಜರಾಗಬೇಕಿದ್ದ ಕುಮಾರಸ್ವಾಮಿ ಅಧಿಕ ರಕ್ತದೊತ್ತಡ ಕಾರಣ ನೀಡಿ ವಿಚಾರಣೆಗೆ ಗೈರಾಗಿದರು. ಪ್ರಕರಣದ ಸಂಬಂಧ ಹಲವು ಬಾರಿ ಗೈರು ಹಾಜರಾಗಿದ್ದ ಕುಮಾರಸ್ವಾಮಿ ಅವರಿಗೆ ಖುದ್ದು ಹಾಜರಾಗುವಂತೆ ನ್ಯಾಯಾಲಯ ಸೂಚನೆ ನೀಡಿತ್ತು. ಆದರೂ, ಅನಾರೋಗ್ಯ ಕಾರಣ ಹೇಳಿ ಹಾಜರಾಗಿರಲಿಲ್ಲ. 

Latest Videos
Follow Us:
Download App:
  • android
  • ios