ಹಾಸನದಲ್ಲಿ ನಿಲ್ಲದ ಕಾಡಾನೆಗಳ ಉಪಟಳ: ಕಾಫಿ ತೋಟದಲ್ಲಿ ಗಜಪಡೆ ಪರೇಡ್..!

ಮೂರು ಮರಿಯಾನೆಗಳ ಜೊತೆ ಊರಿಂದ‌ ಊರಿಗೆ ಅಲೆಯುತ್ತಿರುವ ಗಜಪಡೆ. ಆನೆ ಹಿಂಡಿನಿಂದ ಯಾವುದೇ ಪ್ರಾಣ ಹಾನಿಯಾಗದಂತೆ ಆನೆ ಗುಂಪನ್ನು ಹಿಂಬಾಲಿಸುತ್ತಿರುವ ಎಲಿಫೆಂಟ್ ಟಾಸ್ಕ್ ಫೋರ್ಸ್ ಟೀಂ. 

Wild Elephants Team Came to Coffee Estate in Hassan grg

ಹಾಸನ(ಜ.26):  ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಹಳೆಕೆರೆ ಗ್ರಾಮದ ಕಾಫಿ ತೋಟದಲ್ಲಿ 20 ಕ್ಕೂ ಹೆಚ್ಚು ಕಾಡಾನೆಗಳ ಹಿಂಡು ಲಗ್ಗೆ ಇಟ್ಟಿದೆ.  ಮೂರು ಮರಿಯಾನೆಗಳ ಜೊತೆ ಗಜಪಡೆ ಊರಿಂದ‌ ಊರಿಗೆ ಅಲೆಯುತ್ತಿವೆ. ಆನೆ ಹಿಂಡಿನಿಂದ ಯಾವುದೇ ಪ್ರಾಣ ಹಾನಿಯಾಗದಂತೆ ಆನೆ ಗುಂಪನ್ನು ಎಲಿಫೆಂಟ್ ಟಾಸ್ಕ್ ಫೋರ್ಸ್ ಟೀಂ ಹಿಂಬಾಲಿಸುತ್ತಿದೆ. 

ಆನೆಗಳಿರುವ ಬಗ್ಗೆ ನಿರಂತರವಾಗಿ ಅರಣ್ಯ ಇಲಾಖೆ ಸಿಬ್ಬಂದಿ ಮಾಹಿತಿ ನೀಡುತ್ತಿದೆ. ಕಾಫಿ ಕೊಯ್ಲಿನ ಸಮಯದಲ್ಲಿ ಕಾಡಾನೆಗಳ ಹಿಂಡು ಜನರಲ್ಲಿ ಜೀವ ಭಯ ಸೃಷ್ಟಿಸಿದೆ. 

JDS TICKET: ಭವಾನಿ ರೇವಣ್ಣ ಶಾಸಕಿಯಾಗುವ ಆಸೆಗೆ ತಣ್ಣೀರು: ಟಿಕೆಟ್‌ ಕೊಡುವುದಿಲ್ಲವೆಂದ ಕುಮಾರಸ್ವಾಮಿ

ಕಾಡಾನೆ ಹಾವಳಿ ನಿಯಂತ್ರಣ ಮಾಡದ ಅರಣ್ಯ ಇಲಾಖೆ ವಿರುದ್ಧ ಸ್ಥಳೀಯರು ಆಕ್ರೋಶವನ್ನ ಹೊರಹಾಕಿದ್ದಾರೆ. ಜನರಲ್ಲಿ ಜೀವ ಭಯ ಸೃಷ್ಟಿಮಾಡುತ್ತಿರುವ ಗಜಪಡೆ ಸ್ಥಳಾಂತರಕ್ಕೆ ಸ್ಥಳೀಯರು ಆಗ್ರಹಿಸಿದ್ದಾರೆ. 

Latest Videos
Follow Us:
Download App:
  • android
  • ios