*  ಹಾಸನ ಜಿಲ್ಲೆಯ ಆಲೂರು ತಾಲೂಕಿನ ಹರಿಹಳ್ಳಿ ಗ್ರಾಮದಲ್ಲಿ ನಡೆದ ಘಟನೆ*  ಕೆಂಚಾಂಬ ದೇಗುಲದ ಒತ್ತುವರಿ ಜಮೀನು ತೆರವು ಕಾರ್ಯಾಚರಣೆ ವೇಳೆ ಕಾಡಾನೆಗಳ ದಾಳಿ*  ಕಾಡಾನೆಗಳು ಹಿಂಡು ಕಂಡು ಗಾಬರಿಯಾದ ಅಧಿಕಾರಿಗಳು 

ಕೆ.ಎಂ.ಹರೀಶ್, ಏಷ್ಯಾ ನೆಟ್ ಸುವರ್ಣ ನ್ಯೂಸ್

ಹಾಸನ(ಮಾ.20): ಕಾಡಾನೆ ದಾಳಿಯಿಂದ ತಹಶಿಲ್ದಾರ್‌ ಮತ್ತು ಅಧಿಕಾರಿಗಳು ಕೂದಲೆಳೆ ಅಂತರದಲ್ಲಿ ಪಾರಾದ ಘಟನೆ ಹಾಸನ(Hassan) ಜಿಲ್ಲೆಯ ಆಲೂರು(Alur) ತಾಲೂಕಿನ ಹರಿಹಳ್ಳಿ ಗ್ರಾಮದಲ್ಲಿ ಇಂದು(ಭಾನುವಾರ) ನಡೆದಿದೆ. ಹರಿಹಳ್ಳಿಯ ಕೆಂಚಾಂಬ ದೇಗುಲದ ಒತ್ತುವರಿ ಜಮೀನು ತೆರವು ಕಾರ್ಯಾಚರಣೆ ವೇಳೆ ಘಟನೆ ನಡೆದಿದೆ. ಜನರನ್ನ ನೋಡಿದ ಕಾಡಾನೆಗಳ ಹಿಂಡು ಘೀಳಿಟ್ಟು ಮುಂದೆ ಬಂದಿವೆ. ಕಾಡಾನೆಗಳು ಘೀಳಿಡುತ್ತಾ ಮುಂದೆ ಬರುವುದನ್ನು ಕಣ್ಣಾರೆ ಕಂಡು ಅಧಿಕಾರಿಗಳು ಗಾಬರಿಯಾಗಿದ್ದರು. 

ಕಾಡಾನೆಗಳಿಂದ ತಪ್ಪಿಸಿಕೊಳ್ಳಲು ಓಡಿಬರುವಾಗ ಬಿದ್ದು ತಹಶಿಲ್ದಾರ್‌(Tahashildar) ಶಿರೀನ್ ತಾಜ್ ಮತ್ತು ತಾಲೂಕು ಸರ್ವೆಯರ್ ಕುಮಾರ್‌ ಅವರು ಗಾಯಗೊಂಡಿದ್ದಾರೆ(Injured). ಸರ್ವೆ ಮಾಡುವ ಸಂದರ್ಭದಲ್ಲಿ 5 ಕಾಡಾನೆಗಳಿದ್ದ ಹಿಂಡು ಘೀಳಿಟ್ಟು ಓಡಿ ಬಂದಿವೆ. ಈ ವೇಳೆ ತಪ್ಪಿಸಿಕೊಳ್ಳಲು ಓಡಿಬರುವಾ ಆಲೂರು ‌ತಹಶಿಲ್ದಾರ್‌ ಶಿರೀನ್ ತಾಜ್ ಮತ್ತು ತಾಲೂಕು ‌ಸರ್ವೆಯರ್ ಕುಮಾರ್ ಅವರಿಗೆ ಗಾಯಗಳಾಗಿವೆ. ಕಾಡಾನೆಗಳು ಘೀಳಿಡುತ್ತ ಬಂದಿದ್ದರಿಂದ ಸ್ಥಳದಿಂದ ಓಡಿಬಂದು ಅಧಿಕಾರಿಗಳು ಪ್ರಾಣವನ್ನ ಉಳಿಸಿಕೊಂಡಿದ್ದಾರೆ.

ಕೊಡಗಲ್ಲಿ ಬೆಳ್ಳಂಬೆಳಗ್ಗೆ ಕಾಡಾನೆ ದಾಳಿ : ವ್ಯಕ್ತಿ ಸಾವು

ಇನ್ನು ಇದೇ ತಂಡದಲ್ಲಿದ್ದ ಡೆಪ್ಯುಟಿ ತಹಶಿಲ್ದಾರ್‌ ಮಧುಸೂದನ್, ರೆವಿನ್ಯೂ ಇನ್ಸ್‌ಪೆಕ್ಟರ್ ವಸಂತ್ ಸಹ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಘಟನೆಯಲ್ಲಿ ತಹಶಿಲ್ದಾರ್‌ ಶಿರೀನ್ ತಾಜ್ ಮತ್ತು ಸರ್ವೇಯರ್ ಕುಮಾರ್‌ ಅವರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ ಅಂತ ತಿಳಿದು ಬಂದಿದೆ. ರಾಯರಕೊಪ್ಪಲು ಸರ್ಕಾರಿ ಆಸ್ಪತ್ರೆಯಲ್ಲಿ ಅಧಿಕಾರಿಗಳು ಚಿಕಿತ್ಸೆ ಪಡೆದುಕೊಂಡು ಮನೆಗೆ ವಾಪಸ್ಸಾಗಿದ್ದಾರೆ ಅಂತ ಮಾಹಿತಿ ಲಭ್ಯವಾಗಿದೆ. 

ಅರಣ್ಯ ಸಿಬ್ಬಂದಿ ಜೀಪಿನ ಮೇಲೆ ಕಾಡಾನೆ ದಾಳಿ, ನಾಲ್ವರು ಪಾರು

ಗುಂಡ್ಲುಪೇಟೆ: ಕುರುಬರಹುಂಡಿ ಗ್ರಾಮದ ಬಳಿ ರೈತರ ಜಮೀನಿಗೆ ಕಾಡಾನೆಗಳು ಬರದಂತೆ ಕಾವಲು ಕಾಯುತ್ತಿದ್ದ ಅರಣ್ಯ ಇಲಾಖೆಯ ಸಿಬ್ಬಂದಿ ಇದ್ದ ಜೀಪಿನ ಮೇಲೆ ಬಂಡೀಪುರ ಹುಲಿ ಸಂರಕ್ಷಿತ ಅರಣ್ಯದ(Bandipur Tiger Reserve And National Park) ಓಂಕಾರ ವಲಯದಲ್ಲಿ ಸಲಗ(Elephant) ದಾಳಿ(Attack) ನಡೆಸಿದ ಘಟನೆ ಜ.08 ರಂದು ಮುಂಜಾನೆ ನಡೆದಿತ್ತು. ಅರಣ್ಯ ಇಲಾಖೆಗೆ(Forest Department) ಸೇರಿದ ಜೀಪನ್ನು ಕಂಡ ಕಾಡಾನೆ ರೊಚ್ಚಿಗೆದ್ದು ಜೀಪನ್ನು ಕೊಂಬಿನಿಂದ ಮೇಲೆತ್ತಿ ಉರುಳಿಸಿದೆ. ಜೀಪು ಉರುಳಿ ಸಂಪೂರ್ಣ ಜಖಂಗೊಂಡಿದೆ. ಅದೃಷ್ಟವಷಾತ್‌ ಜೀಪಲ್ಲಿದ್ದ ನಾಲ್ವರು ಸಿಬ್ಬಂದಿ ಪ್ರಾಣಾಪಾಯದಿಂದ ಪಾರಾಗಿದ್ದರು.

ಕಾಡಾನೆ ದಾಳಿಗೆ ಜೀಪ್‌ ಪಲ್ಟಿ ಹೊಡೆದಾಗ ಸದ್ದಿಗೆ ಕಾಡಾನೆ ಓಡಿ ಹೋಗಿದೆ. ಇಲ್ಲದಿದ್ದಲ್ಲಿ ಜೀಪಲ್ಲಿದ್ದ ನಾಲ್ವರು ಸಿಬ್ಬಂದಿ ಮೇಲೆ ದಾಳಿ ಮಾಡುವ ಸಾಧ್ಯತೆ ಮೇಲೆ ಹೆಚ್ಚಿತ್ತು ಎನ್ನಲಾಗುತ್ತಿದೆ.

ಮತ್ತೆ ಬಂದ ಆನೆ: 

ಜೀಪಿನೊಳಗಿದ್ದ(Jeep) ನಾಲ್ವರು ಸವರಿಸಿಕೊಂಡ ಜೀಪಿನಿಂದ ಮೇಲೆ ಬರುವುದನ್ನು ಕಂಡ ಕಾಡಾನೆ ಮತ್ತೆ ದಾಳಿ ನಡೆಸಲು ಪ್ರಯತ್ನ ಕಂಡು ಸಿಬ್ಬಂದಿ ಸನಿಹದಲ್ಲಿದ್ದ ಕಂದಕಕ್ಕೆ ಓಡಿ ಹೋಗಿದ್ದಾರೆ. ಜಮೀನಿನಲ್ಲಿದ್ದ(Land) ಆನೆಯನ್ನು ಕಾಡಿನತ್ತ ಓಡಿಸಲು ಜೀಪಿನಲ್ಲಿದ್ದ ಡಿಆರ್‌ಎಫ್‌ಒ(DRFO) ಹಾಗೂ ಸಿಬ್ಬಂದಿ ಜೀವ ಉಳಿಸಿಕೊಂಡಿದ್ದರು. ರೈತರು(Farmers) ಮಾತ್ರ ಅರಣ್ಯ ಇಲಾಖೆ ವಿರುದ್ಧ ಆಕ್ರೋಶ ಹೊರ ಹಾಕಿದ್ದರು. 

ಓಂಕಾರ ವಲಯ ಅರಣ್ಯಾಧಿಕಾರಿ ನಾಗೇಂದ್ರ ನಾಯಕ್‌ ಓಂಕಾರ ಕಚೇರಿಯಲ್ಲಿ(Office) ಉಳಿಯುತ್ತಿಲ್ಲ ಎಂದು ಕುರುಬರಹುಂಡಿ ಗ್ರಾಮದ ರೈತರು ಆರೋಪ(Allegation) ಮಾಡಿದ್ದು, ಕಚೇರಿಯಲ್ಲಿ ರಾತ್ರಿ ಇರಲಿ ಎಂದು ಅರಣ್ಯ ಇಲಾಖೆಯನ್ನು ಆಗ್ರಹಿಸಿದ್ದರು. 

ಸಫಾರಿ ಹೋದ ಪ್ರವಾಸಿಗರಿಗೆ ಡಬಲ್ ಎಲಿಫೆಂಟ್ ಆಟ್ಯಾಕ್!

ಗುಂಡ್ಲುಪೇಟೆ: ಓಂಕಾರ ವಲಯದಲ್ಲಿ ಕಾಡಾನೆಗಳ(Wild Elephant) ಹಾವಳಿ ಕಳೆದ ಒಂದು ವಾರದಿಂದ ಹೆಚ್ಚಿದ್ದು, ಕುರುಬರಹುಂಡಿ ಗ್ರಾಮದ ಹಲವು ರೈತರ ಫಸಲನ್ನು ನಾಶಪಡಿಸಿದೆ. ಓಂಕಾರ ವಲಯದಂಚಿನಲ್ಲಿರುವ ಕಂದಕಕ್ಕೆ ಮಣ್ಣು ತುಂಬಿಕೊಂಡಿರುವ ಕಾರಣ ಹಾಗೂ ರೇಲ್ವೇ ಕಂಬಿ ಅಡಿ ನುಸುಳಿ ಬರುತ್ತಿವೆ ಎಂದು ರೈತರು ದೂರಿದ್ದರು.

ಶುಕ್ರವಾರ ಕಾಯಲು ಕಾಯುತ್ತಿದ್ದ ಜೀಪಿನ ಮೇಲೆ ಸಲಗ ದಾಳಿ ಮಾಡಿದೆ. ಇದು ಈ ಭಾಗದ ರೈತರಲ್ಲಿ ಆತಂಕ ತಂದಿದ್ದು ರೈತರು ಜಮೀನಿಗೆ ತೆರಳಲು ಹೆದರುತ್ತಿದ್ದಾರೆ ಎಂದು ಜಯ ಹೇಳಿದ್ದಾರೆ. ಕಾಡಾನೆ ಹಾವಳಿ ತಡೆಗಟ್ಟಲು ಅರಣ್ಯ ಇಲಾಖೆ ಸಂಪೂರ್ಣ ವಿಫಲವಾಗಿದ್ದು ಆರ್‌ಎಫ್‌ಒ ಕೇಂದ್ರ ಸ್ಥಾನದಲ್ಲಿದ್ದು ಕಾಡಾನೆ ಹಾವಳಿಗೆ ತಡೆ ಹಾಕಲಿ ಎಂದು ಕೆ.ಜಿ.ಮಹೇಶ್‌ ಒತ್ತಾಯಿಸಿದ್ದರು.