ಕೊಡಗು (ಮೇ.28): ಕಾಡಾನೆ ದಾಳಿಯಿಂದ ವ್ಯಕ್ತಿಯೋರ್ವ  ಮೃತಪಟ್ಟ ಘಟನೆ ಕೊಡಗು ಜಿಲ್ಲೆಯಲ್ಲಿಂದು ನಡೆದಿದೆ. 

ಕೊಡಗು ಜಿಲ್ಲೆ ದೇವಮಚ್ಚಿ ಗ್ರಾಮದಲ್ಲಿ ಇಂದು ಮುಂಜಾನೆ 6-30 ರ ಸುಮಾರಿಗೆ ಮನೆಗೆ ಆಹಾರ ಸಾಮಾಗ್ರಿಗಳನ್ನು ಖರೀದಿಸಲು ತಿತಿಮತಿಗೆ ತೆರಳುತ್ತಿದ್ದ ವೇಳೆ ನಾಣು (60) ಎಂಬಾತ ಆನೆ ದಾಳಿಯಿಂದ ಮೃತಪಟ್ಟಿದ್ದಾರೆ.

ದೇವಮಚ್ಚಿಯಿಂದ ತಿತಿಮತಿಗೆ ಬರುತ್ತಿರುವ ವೇಳೆ ಎದುರಾದ ಕಾಡಾನೆ ಏಕಾಏಕಿ ದಾಳಿ ನಡೆಸಿದ್ದು, ಗಮಭೀರವಾಗಿ ಗಾಯಗೊಂಡ ವ್ಯಕ್ತಿ ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ. 

ಸಿಡಿಲು ಬಡಿದು ಒಂದೇ ಕಡೆ 18 ಆನೆಗಳು ದುರಂತ ಸಾವು ...

ಮುಂಜಾನೆಯ ವೇಳೆ ಮೈಸೂರು ಮುಖ್ಯ ರಸ್ತೆಯಿಂದ ದೇವಮಚ್ಚಿ ರಸ್ತೆ ಕಡೆಗೆ ಕಾಡಾನೆಯೊಂದು ತೆರಳಿದ್ದನ್ನು ಗ್ರಾಮಸ್ಥರು ನೋಡಿದ್ದು, ಮುಖ್ಯ ರಸ್ತೆಯ ಅನತಿ ದೂರದಲ್ಲಿಯೇ ಈ ಘಟನೆ ನಡೆದಿದೆ. ಆನೆ ದಾಳಿಯಿಂದ ಸುತ್ತಮುತ್ತಲಿನ ಗ್ರಾಮದ ಜನರು ಭೀತರಾಗಿದ್ದಾರೆ.