ಹಾಸನ [ಡಿ.15] : ಹಾಸನದಲ್ಲಿ ಇತ್ತೀಚೆಗೆ ಕಾಡಾನೆಗಳ ಹಾವಳಿ ಹೆಚ್ಚಾಗಿದೆ. ರಾಜಾರೋಷವಾಗಿ ಆನೆಗಳು ಊರಿಗೆ ನುಗ್ಗುತ್ತಿವೆ. ಗುಂಪು ಗುಂಪಾಗಿ ಆನೆಗಳು ನುಗ್ಗುತ್ತಿರುವುದು ಇಲ್ಲಿನ ಜನರಲ್ಲಿ ತೀವ್ರ ಆತಂಕಕ್ಕೆ ಕಾರಣವಾಗಿದೆ. 

ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಕಬ್ಬಿನ ಗದ್ದೆಗೆ ಏಕಾ ಏಕಿ 20ಕ್ಕೂ ಹೆಚ್ಚು ಕಾಡಾನೆಗಳು ನುಗ್ಗಿದ್ದು, ಜನರಲ್ಲಿ ತೀವ್ರ ಆತಂಕ ಮೂಡಿಸಿವೆ. 

ಪ್ರತಿನಿತ್ಯವೂ ಆನೆಗಳು ಊರೊಳಗೆ ಬರುತ್ತಿದ್ದು, ಜನ ಸಂಚಾರ ಇರುವ ರಸ್ತೆಗಳಲ್ಲಿಯೇ ಸಂಚಾರ ಮಾಡುತ್ತಿವೆ. ಕಾಡಾನೆಗಳ ಕಾಟದಿಂದ ಜನರು ಮನೆಯಿಂದ ಹೊರ ಬರಲು ಭಯಪಡುವಂತಾಗಿದೆ. 

'ಮೈಸೂರು: ಆನೆ ಶಿಬಿರಗಳಲ್ಲಿ ಮೂಲ ಸೌಕರ‍್ಯಗಳೇ ಇಲ್ಲ!’...

ಅಲ್ಲದೇ ಹೊಲಗಳಿಗೂ ಕಾಡಾನೆಗಳು ನುಗ್ಗುತ್ತಿದ್ದು, ಅಪಾರ ಪ್ರಮಾಣದಲ್ಲಿ ಕಾಫಿ, ಮೆಣಸು ಬಾಳೆ ತೋಟಗಳನ್ನು ನಾಶ ಮಾಡುತ್ತಿವೆ. ಬೆಳೆ ಹಾಳು ಮಾಡುತ್ತಿರುವುದರಿಂದ ಜನರಿಗೆ ಕೈಯಿಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ.