ಬೆಂಗಳೂರು [ಡಿ.14]: ಬೆಂಗಳೂರಿನಲ್ಲಿ ಪತ್ನಿಯ ಕಿರುಕುಳದಿಂದ ಬೇಸತ್ತು ಪತಿಯೋರ್ವ ಆತ್ಮಹತ್ಯೆಗೆ ಶರಣಾದ ಘಟನೆ ನಡೆದಿದೆ. 

"

ಬೆಳ್ಳಂದೂರು ಠಾಣೆಯ ಹಾಲನಾಯಕನಹಳ್ಳಿಯಲ್ಲಿ ಟೆಕ್ಕಿ ಶ್ರೀನಾದ್ [39]  ಪತ್ನಿಯ ಹೈ ಫೈ ಜೀವನ ಹಾಗೂ ಆಕೆಯ ಕಿರುಕುಳದಿಂದ  ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. 

ಆಂಧ್ರ ಪ್ರದೇಶ ಮೂಲದವರಾದ ಶ್ರೀನಾದ್ ಬೆಂಗಳೂರಿನ ಅಸ್ಟ್ರೋ ಮ್ಯಾನ್ ಷನ್ ಅಪಾರ್ಟ್ ಮೆಂಟಿನ ಪ್ಲಾಟ್ ನಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

2009 ರಲ್ಲಿ ರೇಖಾ ಎಂಬಾಕೆಯನ್ನು ಶ್ರೀನಾದ್ ವಿವಾಹವಾಗಿದ್ದು, ಇಬ್ಬರೂ ಖಾಸಗಿ ಕಂಪನಿಯಲ್ಲಿ ಸಾಫ್ಟ್ ವೇರ್ ಉದ್ಯೋಗಿಗಳಾಗಿದ್ದರು. ಬ್ಯಾಂಕಿನಲ್ಲಿ ಲೋನ್ ಪಡೆದು ಅಪಾರ್ಟ್ ಮೆಂಟಲ್ಲಿ ಫ್ಲಾಟ್ ಖರೀದಿ ಮಾಡಿದ್ದರು. 

ಅಧಿಕ ಪ್ರಮಾಣದಲ್ಲಿ ದುಂದು ವೆಚ್ಚ ಮಾಡುತ್ತಿದ್ದ ಪತ್ನಿ ರೇಖಾಗೆ ಹಲವು ಬಾರಿ ಬುದ್ದಿ ಹೇಳಿದ್ದರು. ಆದರೂ ಸರಿಪಡಿಸಿಕೊಳ್ಳದ ಆಕೆಯ ಪತಿಗೆ ಕಿರುಕುಳ ನೀಡುತ್ತಿದ್ದರು. ಇದರಿಂದ ಪತ್ನಿಯಿಂದ ಮಾನಸಿಕವಾಗಿ ಮನನೊಂದಿದ್ದ ಶ್ರೀನಾದ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. 

ಸ್ಥಳಕ್ಕೆ ಬೆಳ್ಳಂದೂರು ಪೊಲೀಸರು ಭೇಟಿ  ನೀಡಿ ಪರಿಶೀಲನೆ ನಡೆಸಿದ್ದು, ಶ್ರೀನಾದ್ ತಂದೆ ನಾಗೇಶ್ವರ ರಾವ್ ದೂರಿನ ಹಿನ್ನಲೆ ಎಫ್ ಐಆರ್ ದಾಖಲು ಮಾಡಲಾಗಿದೆ.