ಚಿತ್ರದುರ್ಗ[ಜ.10]  ಪ್ರೀತಿಸಿ ವಿವಾಹವಾಗಿದ್ದ ಪತ್ನಿಗಾಗಿ ಎಸ್ಪಿ ಪತಿ ಪೋಲೀಸ್ ವರಿಷ್ಠಾಧಿಕಾರಿ ಕಚೇರಿ ಏರಿದ್ದಾರೆ. ಚಿತ್ರದುರ್ಗದ ಈ ಪ್ರಕರಣ ಒಂದು ನೈಜ ಪ್ರೀತಿಯ ಕತೆ ಹೇಳುತ್ತಿದೆ.

ದ್ಯಾಮಣ್ಣ (24) ಮತ್ತು  ಅರ್ಪಿತ(19) ಪ್ರೀತಿಸಿ ವಿವಾಹವಾಗಿದ್ದರು. ಚಿತ್ರದುರ್ಗ ಲಕ್ಷ್ಮಿ ಸಾಗರ ಗ್ರಾಮದ ದ್ಯಾಮಣ್ಣ, ಜಗಳೂರು ತಾಲೂಕಿನ ಮಾಚೀಕೆರೆ ಗ್ರಾಮದ ಅರ್ಪಿತ ಮದುವೆಯಾಗಿದ್ದರು.

ಶಾಸಕ ಗೂಳಿಹಟ್ಟಿ ಶೇಖರ್ ಆತ್ಮಹತ್ಯೆಗೆ ಯತ್ನಿಸಿದ್ದು ಯಾಕೆ?

ಡಿಸೆಂಬರ್ 24 ರಂದು ಕಣಿವೆ ಮಾರಮ್ಮ ದೇವಸ್ಥಾನದ ಬಳಿ ವಿವಾಹವಾಗಿದ್ದರು. ನರ್ಸಿಂಗ್ ವಿಧ್ಯಾರ್ಥಿನಿ ಅರ್ಪಿತರನ್ನ ಒಂದು ವರ್ಷದಿಂದ ಪ್ರೀತಿಸುತಿದ್ದ ದ್ಯಾಮಣ್ಣ ಪ್ರೀತಿಸುತ್ತಿದ್ದರು. ಸಬ್ ರಿಜಿಸ್ಟರ್ ಕಚೇರಿಯಲ್ಲಿ ವಿವಾಹ ನೋಂದಣಿಯನ್ನು ಮಾಡಿಕೊಂಡಿದ್ದರು. ಬೇರೆ ಬೇರೆ ಜಾತಿಯವರಾಗಿದ್ದರೂ ಒಬ್ಬರನ್ನೊಬ್ಬರು ಮೆಚ್ಚಿ ವಿವಾಹ ಆಗಿದ್ದರು.

ವಿವಾಹದ ಒಂದು ವಾರದ ಬಳಿಕ ಹುಡುಗಿಯನ್ನಿ ಅವರ ಮನೆಯವರು  ಕಾಲೇಜಿನಿಂದ ಕರೆದುಕೊಂಡು ಹೋಗಿದ್ದರು.  ಆದರೆ ಕಳೆದ ಹದಿನೈದು ದಿನಗಳಿಂದ ಪತ್ನಿಯನ್ನು ಹಿಂದಕ್ಕೆ ಕಳುಹಿಸಿಕೊಟ್ಟಿಲ್ಲ ಎಂದು ದ್ಯಾಮಣ್ಣ ಆರೋಪಿಸಿದ್ದಾರೆ. 

ದೂರವಾಣಿ ಕರೆ ಮಾಡಿ ಮಗಳನ್ನು ಕಳಿಸುವುದಿಲ್ಲ ಎಂದು ಹೇಳುತ್ತಿದ್ದು ನ್ಯಾಯ ನೀಡಬೇಕು ಎಂದು ದ್ಯಾಮಣ್ಣ ಪೊಲೀಸರ ಬಳಿ ಬಂದಿದ್ದಾರೆ.