ಪತಿ ಮೃತಪಟ್ಟ ಐದು ನಿಮಿಷದಲ್ಲಿಯೇ ಪತ್ನಿ ಸಾವು

First Published 4, Aug 2018, 11:10 AM IST
wife dies within 5 mins after husband breath his last
Highlights

ದಾಂಪತ್ಯವೆಂದರೆ ಸುಖ-ದುಃಖ ಹಂಚಿಕೊಂಡು ಜೀವನ ನಡೆಸುವುದು ಸಹಜ. ಗಂಡ-ಹೆಂಡತಿ ಎಂಬ ಎರಡು ಚಕ್ರಗಳು ಸರಿಯಾಗಿದ್ದರೆ ಮಾತ್ರ ದಾಂಪತ್ಯದ ಗಾಡಿ ಸುಸೂತ್ರವಾಗಿ ಸಾಗುತ್ತದೆ. ಹಲವು ವರ್ಷಗಳು ಒಟ್ಟಾಗಿ ಜೀವನ ನಡೆಸಿದ ಹಲವು ಜೀವಗಳಿಗೆ ಒಬ್ಬರನ್ನು ಬಿಟ್ಟು, ಮತ್ತೊಬ್ಬರು ಇರಲು ಆಗದಷ್ಟು ಬಾಂಧವ್ಯ ಬೆಳೆದಿರುತ್ತದೆ. ಇಂಥ ಬಾಂಧವ್ಯವೇ ಬಹುಶಃ ಪತಿ ಮೃತಪಟ್ಟ ಐದು ನಿಮಿಷದಲ್ಲಿಯೇ ಪತ್ನಿಯೂ ಕೊನೆಯುಸಿರೆಳೆಯುವಂತೆ ಮಾಡಿದೆ.

ಮಂಡ್ಯ: ಹಲವಾರು ವರ್ಷಗಳಿಂದ ಕಷ್ಟ-ಸುಖಗಳನ್ನು ಹಂಚಿಕೊಂಡು ದಾಂಪತ್ಯ ಜೀವನ ನಡೆಸಿದ ಜೀವಗಳಿವು. ರೈತರಾಗಿ ಹೊಲದಲ್ಲಿ ಕಷ್ಟಪಟ್ಟು ದುಡಿಯುತ್ತಿದ್ದರು. ಆದರೆ, ಪತಿಗೋ ವಯೋ ಸಹಜ ಅನಾರೋಗ್ಯ ಕಾಣಿಸಲು ಆರಂಭವಾಯಿತು. ಹೊಟ್ಟೆನೋವಿನಿಂದ ಬಳಲುತ್ತಿದ್ದ ಅವರನ್ನು ಆಸ್ಪತ್ರೆಗೆ ಸಾಗಿಸುವ ಮಧ್ಯೆಯೇ ಕೊನೆಯುಸಿರೆಳೆದರು. ಪತಿಯನ್ನು ಪತ್ನಿಯೂ ಹಿಂಬಾಲಿಸಿಬಿಟ್ಟರು.

ಹೌದು. ನೀರು ಕೇಳಿದ ಪತಿ ಹೊಂಬೇಗೌಡ (70)ರಿಗೆ ಪತ್ನಿ ಮಂಜಮ್ಮ (65) ನೀರು ಕುಡಿಸಿದರು. ಆಗಲೇ ಯಮ ಧರ್ಮ ಪತಿಯನ್ನು ಕರೆದೋಯ್ದ. ಆದರೆ, ಆರೋಗ್ಯವಾಗಿದ್ದ ಮಂಜಮ್ಮ ಸಹ ಪತಿ ದಾರಿ ಹಿಡಿದಿದ್ದು ಮಾತ್ರ  ವಿಧಿಯಾಟ.

ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಹುಲ್ಲಹಳ್ಳಿಯಲ್ಲಿ ಸಂಭವಿಸಿದ ಈ ಘಟನೆಗೆ ಕುಟುಂಬದ ಸದಸ್ಯರು, ಗ್ರಾಮಸ್ಥರು ಎಲ್ಲರೂ ಕಣ್ಣೀರಿಡುತ್ತಿದ್ದಾರೆ.

loader