ಶಿಗ್ಗಾಂವಿ(ಆ.28): ಮರಣದಲ್ಲಿಯೂ ಕೂಡ ಗಂಡ ಹೆಂಡತಿ ಒಂದಾದ ಅಪರೂಪದ ಘಟನೆ ಹಾವೇರಿ ಜಿಲ್ಲೆ ಶಿಗ್ಗಾಂವಿ ತಾಲೂಕಿನ  ಕಬನೂರ ಗ್ರಾಮದಲ್ಲಿ ನಡೆದಿದೆ. ಹೌದು, ಚನ್ನಬಸಪ್ಪ (ಮುದುಕಪ್ಪ) ಮಲ್ಲಪ್ಪ ಗುಂಡಣ್ಣವರ (62) ಹಾಗೂ ಅವರ ಪತ್ನಿ ಪಾರ್ವತಿ ಚನ್ನಬಸಪ್ಪ (ಮುದುಕಪ್ಪ) ಗುಂಡಣ್ಣವರ (53) ಬದುಕಿನಲ್ಲಿ ಜೋಡಿಯಾಗಿ ಜೀವನವನ್ನು ಸಾಗಿಸಿದರೆ ಸಾವಿನಲ್ಲೂ ಕೂಡ ಜೋಡಿಯಾಗಿ ಸಾಗಿದ್ದಾರೆ. 

ಇಬ್ಬರೂ ಗುರುವಾರ ನಿಧನರಾಗಿದ್ದಾರೆ. ಮೃತ ದಂಪತಿಗೆ ಇಬ್ಬರು ಪುತ್ರರು, ಮೂವರು ಪುತ್ರಿಯರು ಇದ್ದಾರೆ. 

ಗಂಗಾವತಿ: ಗಂಡನ ನಿಧನದ ಸುದ್ದಿ ಕೇಳಿ ಹೆಂಡತಿ ಸಾವು, ಸಾವಿನಲ್ಲೂ ಒಂದಾದ ವೃದ್ಧ ದಂಪತಿ

ಗುರುವಾರ ಚನ್ನಬಸಪ್ಪ ಅವರ ಆರೋಗ್ಯದಲ್ಲಿ ಏರುಪೇರಾಗಿತ್ತು, ಇದರಿಂದ ಪಾರ್ವತಿ ಸಹ ಅಸ್ವಸ್ಥರಾದರು. ಆಸ್ಪತ್ರೆಗೆ ಕರೆದುಕೊಂಡು ಹೋಗಲು ಮಕ್ಕಳು ಸಿದ್ಧರಾಗಿದ್ದರು. ಇದನ್ನು ನೋಡಿದ ಪತಿ ಹೃದಯಾಘಾತದಿಂದ ಮೃತರಾದರೆ, ಪತ್ನಿ ಆಸ್ಪತ್ರೆಗೆ ತೆರಳುವ ಮಾರ್ಗ ಮಧ್ಯದಲ್ಲಿಯೇ ಕೊನೆಯುಸಿರೆಳೆದ್ದಾರೆ. ಈ ಮೂಲಕ ಸಾವಿನಲ್ಲೂ ದಂಪತಿ ಒಂದಾಗಿದ್ದಾರೆ.