Chikkaballapur: ಬಸ್ಸುಗಳ ಕೊರತೆ ಇದ್ದರೆ ಶಕ್ತಿ ಯೋಜನೆ ಏಕೆ ಬೇಕು?: ಮಹಿಳಾ ಪ್ರಯಾಣಿಕರ ಪ್ರಶ್ನೆ
ಕಾಂಗ್ರೆಸ್ ಸರ್ಕಾರ ಶಕ್ತಿ ಯೋಜನೆ ಜಾರಿ ಮಾಡಿ ಮಹಿಳೆಯರಿಗೆ ಉಚಿತ ಪ್ರಯಾಣಕ್ಕೆ ಅವಕಾಶ ಮಾಡಿ ಕೊಟ್ಟಿದ್ದು ಒಂದು ಕಡೆಯಾದರೆ, ಇನ್ನೊಂದಡೆ ಇದರಿಂದ ಆಗುತ್ತಿರುವ ಆವಾಂತರಗಳು ಒಂದಾ ಎರಡಾ.
ಚಿಕ್ಕಬಳ್ಳಾಪುರ (ಜೂ.19): ಕಾಂಗ್ರೆಸ್ ಸರ್ಕಾರ ಶಕ್ತಿ ಯೋಜನೆ ಜಾರಿ ಮಾಡಿ ಮಹಿಳೆಯರಿಗೆ ಉಚಿತ ಪ್ರಯಾಣಕ್ಕೆ ಅವಕಾಶ ಮಾಡಿ ಕೊಟ್ಟಿದ್ದು ಒಂದು ಕಡೆಯಾದರೆ, ಇನ್ನೊಂದಡೆ ಇದರಿಂದ ಆಗುತ್ತಿರುವ ಆವಾಂತರಗಳು ಒಂದಾ ಎರಡಾ. ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರಿನಲ್ಲಿ ಸಂತೆ ಬೇರೆ, ಕೆ ಎಸ್ ಆರ್ ಟಿ ಬಸ್ ನಿಲ್ದಾಣದಲ್ಲಿ ಭಾನುವಾರ ಜನಜಾತ್ರೆಯೇ ಸೇರಿತ್ತು.
ಸರಿಯಾದ ಸಮಯಕ್ಕೆ ಬಸ್ ಇಲ್ಲದೆ ನೂರಾರು ಜನ ತಮ್ಮ ಗ್ರಾಮಗಳಿಗೆ ಹೋಗಲು ಗಂಟೆಗಟ್ಟಲೇ ಕಾದು ಸುಸ್ತಾಗಿದ್ದರು. ಬಸ್ ನಿಲ್ದಾಣಕ್ಕೆ ಒಂದೋ ಎರಡು ಬಸ್ ಬಂದರೆ ಆ ಬಸ್ ಗೆ ಹತ್ತಲು ಮಹಿಳೆಯರ ನಡುವೆ ನೂಕು ನುಗ್ಗಲು ಉಂಟಾಗಿತ್ತು. ಬಸ್ಸಿಗೆ ಹತ್ತಲು ಮಹಿಳೆಯರ ನೂಕು ನುಗ್ಗಲು ಕಂಡು ಪುರುಷರು ಸುಮ್ಮನೆ ನಿಲ್ಲಬೇಕಾಯಿತು. ಶಕ್ತಿ ಯೋಜನೆ ಜಾರಿ ಮಾಡಿದ ಸರ್ಕಾರದ ವಿರುದ್ದ ಮಹಿಳೆಯರು ಆಕ್ರೋಶ ಹೊರಹಾಕಿದ್ದು, ಬಸ್ ಬರುತ್ತಿಲ್ಲ ಅಂದಮೇಲೆ ಶಕ್ತಿ ಯೋಜನೆ ಜಾರಿ ಮಾಡಿ ಪ್ರಯೋಜನವೇನು ಪ್ರಶ್ನಿಸಿದ್ದಾರೆ
ಅನ್ನದಾತರಲ್ಲಿ ರಾಜಕೀಯ ಬೇಡ, ತಿಂಗಳಿಗೊಮ್ಮೆ ರೈತರ ಸಮಾವೇಶ: ಶಾಸಕ ಪ್ರದೀಪ್ ಈಶ್ವರ್
ನಾವು ಟಿಕೆಟ್ ಪಡೆದಿದ್ದೇವೆ: ಈ ಮೊದಲು ಬಸ್‌ನಲ್ಲಿ ಹೋಗಿ ಬರ್ತಿದ್ವಿ. ಸರ್ಕಾರ್ದೋರು ಉಚಿತ ಬಸ್ ಪ್ರಯಾಣದ ಹೆಸರಿನಲ್ಲಿ ಓಟ್ ಪಡೆದು ನಮ್ಮ ನೆಮ್ಮದಿ ಹಾಳ್ ಮಾಡಿಬಿಟ್ಟರು ಅಂತ ಮಹಿಳೆಯರ ಶಾಪ ಒಂದು ಕಡೆ ಆದರೆ , ಮೊತ್ತೊಂದೆಡೆ ಸೀಟಿಗಾಗಿ ಮಹಿಳೆಯರು ಪುರುಷರೊಂದಿಗೆ ವಾಗ್ವಾದಕ್ಕಿಳಿದಿದ್ದರು. ನಿಮಗೆ ಇಷ್ಟದಿನ ಸೀಟ್ ಮೀಸಲಾತಿ ಇತ್ತು ಈಗ ನಮ್ಮ ಸರದಿ ಬಂದಿದೆ. ನಮ್ಮ ಸೀಟ್‌ಅನ್ನು ನಾವು ಯಾಕೆ ನಿಮಗೆ ಕೊಡಬೇಕು. ನಾವು ಹಣ ನೀಡಿ ಟಿಕೆಟ್ ಪಡೆದಿದ್ದೇವೆ ಎಂದು ಪುರಷ ಪ್ರಯಾಣಿಕರೊಬ್ಬರು ಮಹಿಳೆಯರನ್ನು ದಬಾಯಿಸಿದರು.
ಶಕ್ತಿ ಯೋಜನೆ ಜಾರಿಯಾಗಿ ವಾರವಾದರೂ ಮಹಿಳೆಯರ ಪರದಾಟತಪ್ಪಿಲ್ಲ. ಗೌರಿಬಿದನೂರಿನಿಂದ ಚಿಕ್ಕಬಳ್ಳಾಪುರ , ಮದುಗಿರಿ, ಬೆಂಗಳೂರು, ಶಿರಾ, ತುಮಕೂರು, ಕೊರಟಗೆರೆ ಕಡೆಗಳಿಗೆ ಸಮಪರ್ಕ ಬಸ್‌ಗಳಿಲ್ಲದೆ ಮಕ್ಕಳು ಮರಿಗಳನ್ನು ಎತ್ತಿಕೊಂಡು ಮಹಿಳಾ ಪ್ರಯಾಣಿಕರ ಪರದಾಟ ನಡೆಸುವ ಸ್ಥಿತಿ ನಿರ್ಮಾಣವಾಗಿ, ನೂರಾರು ಮಹಿಳೆಯರು ಬಸ್ ನಿಲ್ದಾಣದಲ್ಲಿ ಬಿಡು ಬಿಟ್ಟಿದ್ದಾರೆ.
ಬಸ್ಸುಗಳ ಕೊರತೆ: ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಮಹಿಳೆಯರ ಉಚಿತ ಪ್ರಯಾಣಕ್ಕೆ ಅವಕಾಶ ಮಾಡಿಕೊಡುವ ಶಕ್ತಿ ಯೋಜನೆಗೆ ಚಾಲನೆ ನೀಡಿದೆ. ಆದರೆ ಕೆಲವೊಂದು ಗ್ರಾಮಗಳಲ್ಲಿ ಸರ್ಕಾರಿ ಬಸ್‌ಗಳ ಸಂಪರ್ಕವೇ ಇಲ್ಲ ಎಂಬ ಆರೋಪ ಒಂದೆಡೆಯಾದರೆ, ಇನ್ನೊಂದೆಡೆ ಹೆಚ್ಚುವರಿ ಬಸ್‌ಗಳನ್ನು ಹಾಕದೆ ಅಧಿಕಾರಿಗಳು ನಿರ್ಲಕ್ಷ್ಯ ತೋರಿದ್ದಾರೆ ಎಂದು ಗೌರಿಬಿದನೂರಿನ ಮಹಿಳೆಯೊಬ್ಬರು ಆರೋಪಿಸಿದರು. ಎರಡು ಮೂರು ಗಂಟೆಗಳಿಂದ ಬಸ್ಸಿನಲ್ಲಿ ಪ್ರಯಾಣಿಸಲು ಬರುತ್ತಿರುವ ಜನಸಂಖ್ಯೆ ಹೆಚ್ಚಾಗುತ್ತಿದ್ದರೂ ಹೆಚ್ಚುವರಿ ಬಸ್‌ಗಳನ್ನು ಹಾಕದೆ ಅಧಿಕಾರಿಗಳು ಮೂಕ ಪ್ರೇಕ್ಷಕರಂತೆ ನೋಡುತ್ತಿದ್ದರು.
ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಮೇಲೆ ವೀರಪ್ಪ ಮೊಯ್ಲಿ ಕಣ್ಣು
ಇದರಿಂದ ಆಕ್ರೋಶಗೊಂಡ ಪ್ರಯಾಣಿಕರು ಸಿಬ್ಬಂದಿಯೊಂದಿಗೆ ವಾಗ್ವಾದಕ್ಕಿಳೀದರು. ಗೌರಿಬಿದನೂರು ಮಾತ್ರವಲ್ಲದೆ, ಚಿಕ್ಕಬಳ್ಳಾಪುರ ಜಿಲ್ಲೆಯಾದ್ಯಾಂತ ಬಸ್‌ಗಳ ಕೊರತೆ ಎದ್ದು ಕಾಣುತ್ತಿತು. ಬಸ್‌ಗಳ ಕೊರತೆ ಹಿನ್ನೆಲೆ ಗೌರಿಬಿದನೂರು ಗ್ರಾಮಾಂತರದ ಕಡೆ ತೆರಳಲು ಸರಿಯಾದ ಬಸ್ ಇಲ್ಲದೆ ಸುಮಾರು 100ಕ್ಕೂ ಹೆಚ್ಚು ಮಹಿಳಾ ಪ್ರಯಾಣಿಕರು ಬಸ್‌ಗಾಗಿ ಕಾದುಕುಳಿತ ಪ್ರಸಂಗ ನಡೆಯಿತು.