ಶಿವಮೊಗ್ಗ (ಜು.21)  ಕೇಂದ್ರದಲ್ಲಿ ಬಿಜೆಪಿ ಸರ್ಕಾರ, ರಾಜ್ಯದಲ್ಲೂ ಯಡಿಯೂರಪ್ಪ ಸರ್ಕಾರ ಎಂಬುದು ನಿರ್ಧಾರವಾಗಿತ್ತು.  ಕೆಲ ಕಾಂಗ್ರೆಸ್, ಜೆಡಿಎಸ್ ಪಕ್ಷದ ಶಾಸಕರು ಬಿಜೆಪಿ ಜೊತೆಗೆ ಸಂಪರ್ಕದಲ್ಲಿ ಇದ್ದರು. ಅದರೆ ಸುಪ್ರೀಂ ಕೋರ್ಟ್ 24 ಗಂಟೆಗಳ ಕಾಲಾವಕಾಶ ನೀಡಿದ್ದರಿಂದ ಸರ್ಕಾರ ರಚಿಸಲಾಗಲಿಲ್ಲ ಎಂದು ಮಾಝಿ ಸಿಎಂ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.

ಸಮ್ಮಿಶ್ರ ಸರ್ಕಾರ  ಇನ್ನೆಷ್ಟು ದಿನಗಳ ಕಾಲ ಇರುತ್ತೆ ಎಂದು ಭವಿಷ್ಯ ಹೇಳಲೂ ಸಾಧ್ಯವಿಲ್ಲ. ಚುನಾವಣೆಯ ಹಿನ್ನೆಲೆಯಲ್ಲಿ ಅಧಿಕಾರಿಗಳು ಕುಂಭಕರ್ಣ ನಿದ್ದೆಯಲ್ಲಿದ್ದರು. ಅಧಿಕಾರಿಗಳು ಲೂಟಿ ಮಾಡಿದರು.  ಈಗಿರುವ ಸಮನ್ವಯ ಸಮಿತಿ ಗೊಂದಲದ ಗೂಡಾಗಿದೆ. ಸಿದ್ದರಾಮಯ್ಯ ಹೇಳಿಕೆ ಗಳು ಗೊಂದಲ ಮೂಡಿಸುತ್ತಿದೆ. ರಾಜ್ಯದ ಅಭಿವೃದ್ಧಿ  ಕುಂಠಿತವಾಗಿದ್ದು ಸಿದ್ದರಾಮಯ್ಯ ಅಧಿಕಾರಾವಧಿಯಲ್ಲಿ 1.18.619 ಕೋಟಿ ಸಾಲ ಆಗಿದೆ . 2,86,479 ಕೋಟಿ ರೂಪಾಯಿ ತಲುಪಿದೆ. 46,886  ರೂ. ಸಾಲ ರಾಜ್ಯದ ಪ್ರತಿ ಪ್ರಜೆಗಳ ಮೇಲೆ ಹೊರಿಸಲಾಯಿತು ಎಂದು ಹೇಳಿದರು.

ರಾಹುಲ್ ವಿರುದ್ಧ ಬಿಜೆಪಿ ಹಕ್ಕುಚ್ಯುತಿ 

ಆದರೆ  ಸಿಎಂ ಕುಮಾರಸ್ವಾಮಿ ಇದನ್ನು 2, 92,220 ಕೋಟಿ ಗೆ ಏರಿಸಿದ್ದಾರೆ. ಈ ಆಯವ್ಯಯದಲ್ಲಿ ಕೇವಲ ರೈತರ 2500 ಕೋಟಿ ರೂಪಾಯಿ ಮಾತ್ರ ಸಾಲಮನ್ನಾ ಮಾಡಲು ಸಾಧ್ಯ.  ಹೀಗಾಗಿ ರಾಜ್ಯದ ಹಣಕಾಸಿನ ಸ್ಥಿತಿ ಗತಿಯ ಬಗ್ಗೆ ಶ್ವೇತ ಪತ್ರ ಹೊರಡಿಸಿ ಎಂದು ಕುಮಾರಸ್ವಾಮಿ ಅವರಿಗೆ ಆಗ್ರಹಿಸಿದ್ದೆ. ನೀರಾವರಿ ಇಲಾಖೆಯ ಅಡಿಯಲ್ಲಿ ನಡೆದ ಕಾಮಗಾರಿ ಬಿಲ್ ಪಾವತಿ ಆಗಿಲ್ಲ. ಸಹಕಾರಿ ಸಂಘಗಳಲ್ಲಿ ಸಾಲಮನ್ನಾ ಆಗದೆ ಹೋದರೆ ದಿವಾಳಿತನ ಆಗುವ ಸ್ಥಿತಿ. ರಾಜ್ಯದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರ ನೇಮಕ ಆಗಿಲ್ಲ. ಇಷ್ಟೆಲ್ಲ ಸಮಸ್ಯೆ ಇದ್ದರೂ ಸರಕಾರ ಸುಮ್ನನೆ ಕುಳಿತುಕೊಂಡಿದೆ ಎಂದು ಆರೋಪಿಸಿದರು.

ಮಳೆ , ಬೆಳೆ ಹಾನಿ , ಪ್ರವಾಹ ಪರಿಸ್ಥಿತಿ ಬಗ್ಗೆ ಹೇಳೋರು ಕೇಳೋರು ಯಾರು ಇಲ್ವಾಗಿದೆ. ರೈತರ ಸಹಕಾರಿ, ರಾಷ್ಟ್ರೀಕೃತ ಬ್ಯಾಂಕುಗಳ ಒಂದು ಲಕ್ಷ ರೂಪಾಯಿ ಸಾಲಮನ್ನಾ ಮಾಡಲು ನಾನು ಸಿಎಂ ಆಗಿದ್ದ ವೇಳೆ ಮಾಡಲು ಮುಂದಾಗಿದ್ದೆ. ಕೇಂದ್ರ ಸರ್ಕಾರದ ವಿವಿಧ ಅಭಿವೃದ್ಧಿ ಯೋಜನೆ ಗಳಿಗೆ ಹಣ ತಂದು ಅಭಿವೃದ್ಧಿ ಜೊತೆಗೆ ರೈತರ ಸಾಲಮನ್ನಾ ಮಾಡಲು ಸಿದ್ದತೆ ನಡೆಸಿದ್ದೆ. ಪ್ರಧಾನಿ ನರೇಂದ್ರ ಮೋದಿಯವರು ಲೋಕಸಭೆ ಚುನಾವಣೆ ಜೊತೆಗೆ ವಿಧಾನ ಸಭಾ ಚುನಾವಣೆ ನಡೆಸಲು ಯೋಜಿಸಿದ್ದರು ಆದರೆ ಅದು ಕಾರ್ಯಗತಗೊಳಿಸಲು ಸಾಧ್ಯವಾಗುವ ಲಕ್ಷಣಗಳಿಲ್ಲ ಎಂದು ಹೇಳಿದರು

ಶಿವಮೊಗ್ಗ ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿ ಗೆ ಶ್ರಮ ಹಾಕಲಿದ್ದೇವೆ. ಬೀರೂರು - ಶಿವಮೊಗ್ಗ ರೈಲ್ವೆ ಮಾರ್ಗ ಡಬ್ಲಿಂಗ್, ತಾಳಗುಪ್ಪ ರೈಲ್ವೆ ಮಾರ್ಗ ಉತ್ತರ ಕನ್ನಡ ಜಿಲ್ಲೆ ಸಿದ್ದಾಪುರದ ವರೆಗೆ ವಿಸ್ತರಣೆ, ಬೈಂದೂರು ರಾಣಿಬೆನ್ನೂರು, ಸಾಗರ - ಮರಕುಟಿಕ, ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಆರಂಭಿಸಗುತ್ತಿದೆ ಎಂದು ತಿಳಿಸಿದರು.