Asianet Suvarna News Asianet Suvarna News

ಕೊಡಚಾದ್ರಿ ಬೆಟ್ಟದಲ್ಲಿ ಯೆಲ್ಲೋ ಬೋರ್ಡ್, ವೈಟ್ ಬೋರ್ಡ್ ಜಟಾಪಟಿ

ಹೊಸನಗರ ತಾಲೂಕಿನ ಕೊಡಚಾದ್ರಿ, ಸಂಪೆಕಟ್ಟೆ, ಸಿಟ್ಟೂರು ಮತ್ತು ಕೊಲ್ಲೂರುಗಳಿಂದ ಕೊಡಚಾದ್ರಿ ಗಿರಿಗೆ ವೈಟ್ ಬೋರ್ಡ್ ವಾಹನಗಳನ್ನು ನಿಷೇಧಿಸಲಾಗಿದೆ.

White board vehicles are prohibited from Kodachadri hills gow
Author
First Published Sep 13, 2022, 2:51 PM IST

ವರದಿ : ರಾಜೇಶ್,  ಏಷ್ಯಾನೆಟ್ ಸುವರ್ಣನ್ಯೂಸ್ 

ಶಿವಮೊಗ್ಗ (ಸೆ.13): ಹೊಸನಗರ ತಾಲೂಕಿನ ಕೊಡಚಾದ್ರಿ, ಸಂಪೆಕಟ್ಟೆ, ಸಿಟ್ಟೂರು ಮತ್ತು ಕೊಲ್ಲೂರುಗಳಿಂದ ಕೊಡಚಾದ್ರಿ ಗಿರಿಗೆ ವೈಟ್ ಬೋರ್ಡ್ ವಾಹನಗಳನ್ನು ನಿಷೇಧಿಸಲಾಗಿದೆ. ಸ್ವಂತ ಬಳಕೆಗೆ ಮಾತ್ರ ವೈಟ್‌ಬೋರ್ಡ್ ವಾಹನ ಬಳಕೆ ಮಾಡಬೇಕು. ಕರೆದೊಯ್ಯುವಂತಿಲ್ಲ. ಮಾಲೀಕರು ಪ್ರವಾಸಿಗರನ್ನು ಯೆಲ್ಲೋ ಬೋರ್ಡ್ ನಿಯಮ ಮೀರಿ ಹೆಚ್ಚುವರಿ ಪ್ರವಾಸಿಗರನ್ನು ಕರೆದೊಯ್ಯುವಂತಿಲ್ಲ. ಈ ಸೋಮವಾರ ಹಮ್ಮಿಕೊಂಡಿದ್ದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ನಿರ್ಣಯ ಕೇವಲ ಕಟ್ಟಿನಹೊಳೆಗೆ ಮಾತ್ರ ಸೀಮಿತವಾಗಬಾರದು, ನಿಟ್ಟೂರು, ಸಂಪೇಕಟ್ಟೆ, ಕೊಲ್ಲೂರಿನಿಂದ ಗಿರಿಗೆ ಆಗಮಿಸುವ ಜೀಪ್ ಗಳಿಗೂ ಅನ್ವಯವಾಗಬೇಕು ಎಂದು ನಿರ್ಧರಿಸಲಾಗಿದೆ. ಶನಿವಾರ ಕೊಡಚಾದ್ರಿ ಗಿರಿಗೆ ಸಾಗುವ ಮಾರ್ಗದಲ್ಲಿರುವ ವನ್ಯಜೀವಿ ಇಲಾಖೆಯ ಗೇಟ್ ಬಳಿ ವೈಟ್ ಬೋರ್ಡ್ ಜೀಪ್ ಅಡ್ಡಗಟ್ಟಿದ ಯೆಲ್ಲೋ ಬೋರ್ಡ್ ಜೀಪ್‌ನ ಚಾಲಕರು ಆಕ್ರೋಶ ವ್ಯಕ್ತಪಡಿಸಿದ್ದರು. ಪ್ರತಿರೋಧ ಪ್ರತಿರೋಧ ಲೆಕ್ಕಿಸದೆ - ಅಡ್ಡಗಟ್ಟಿದವರನ್ನು ದೂಡಿಕೊಂಡೆ. ಜೀಪ್ ಚಲಾಯಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಅಲ್ಲದೆ ಈ ಸಂದರ್ಭದಲ್ಲಿ ಮಾತಿನ ಚಕಮಕಿ ನಡೆದು ವಿವಾದ ಭುಗಿಲೆದ್ದಿತ್ತು. ಈ ಹಿನ್ನೆಲೆಯಲ್ಲಿ ಕಟ್ಟಿನಹೊಳೆ ಟ್ಯಾಕ್ಸಿ ಯೂನಿಯನ್ ಸೋಮವಾರ ಸಭೆ ನಡೆಸಿದ್ದು ಇದರಲ್ಲಿ ಕರ್ನಾಟಕ ಟ್ಯಾಕ್ಸಿ ಚಾಲಕರ ಅಸೋಸಿಯೇಶನ್, ಕೊಡಚಾದ್ರಿ ವ್ಯವಸ್ಥಾಪನ ಸಮಿತಿ, ಇಡಿಸಿ ಸಮಿತಿ, ಗ್ರಾಪಂ, ಪೊಲೀಸ್ ಇಲಾಖೆಯ ಸಿಬ್ಬಂದಿ, 50 ಕ್ಕೂ ಹೆಚ್ಚು ಚಾಲಕರು, ಮಾಲೀಕರು ಪಾಲ್ಗೊಂಡಿದ್ದರು.

ವಿಮೆ , ತೆರಿಗೆ ಪಾವತಿ ಮಾಡಿ ಜೀಪ್‌ಗಳನ್ನು ಯೆಲ್ಲೊ ಬೋರ್ಡ್ ಕಷ್ಟಪಟ್ಟು ನಿರ್ವಹಣೆ ಮಾಡುತ್ತಿದ್ದೇವೆ . ಆದರೆ ಈ ಸಮಸ್ಯೆಗಳಿಲ್ಲದ ವೈಟ್ ಜೀಪ್ ಮಾಲೀಕರು ಬಾಡಿಗೆ ಮಾಡುತ್ತಿದ್ದಾರೆ . ಹೀಗಾದರೇ ಯೆಲ್ಲೋ ಬೋರ್ಡ್‌ಗೆ ಮಾನ್ಯತೆ ಎಲ್ಲಿದೆ ಎಂದು ಪ್ರಶ್ನಿಸಿದರು . ಯಾವುದೇ ವಾಹನವನ್ನು ನಿಯಮ ಉಲ್ಲಂಘಿಸಿ ಚಲಾಯಿಸುವುದು ತಪ್ಪು , ಅದೇ ರೀತಿ ವಾಹನವನ್ನು ಏಕಾಏಕಿ ಅಡ್ಡಗಟ್ಟುವುದು ತಪ್ಪು . ಈ ಬಗ್ಗೆ ಪೊಲೀಸರಿಗೆ ದೂರು ನೀಡಿ ದಫೇದಾರ್‌ ವೆಂಕಟೇಶ್ ಹೇಳಿದರು . ಕೊಡಚಾದ್ರಿಗೆ ಅಪಾರ ಭಕ್ತರು ಬರುತ್ತಾರೆ. 

ಅವರನ್ನು ಗಿರಿಗೆ ಕರೆತಂದು ಸುರಕ್ಷಿತವಾಗಿ ವಾಪಾಸು ಬಿಡುವ ಜವಾಬ್ದಾರಿ ಜೀಪಿನ ಚಾಲಕ ಮತ್ತು ಮಾಲೀಕರದ್ದು . ಅನಗತ್ಯ ವಿವಾದ ಮಾಡಿಕೊಳ್ಳದೇ ಹೊಂದಾಣಿಕೆಯಿಂದ ಕಾರ್ಯನಿರ್ವಹಿಸಿ ಎಂದು ಕೊಡಚಾದ್ರಿ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ನಿಟ್ಟೂರು ಶಿವರಾಮ ಶೆಟ್ಟಿ ಮನವಿ ಮಾಡಿದರು . ಪರ ವಿರೋಧ ಚರ್ಚೆಗಳ ಬಳಿಕ ವೈಟ್ ಬೋರ್ಡ್‌ ವಾಹನ ಸ್ವಂತಕ್ಕೆ ಬಳಸಬಹುದೇ ವಿನಾ ಬಾಡಿಗೆ ಮಾಡುವಂತಿಲ್ಲ.

ಕೊಡಚಾದ್ರಿ - ಕೊಲ್ಲೂರು ನಡುವೆ ಕೇಬಲ್ ಕಾರ್ !

ಇನ್ನು ಯೆಲ್ಲೋ ಬೋರ್ಡ್ ಹೊಂದಿರುವ ಜೀಪ್‌ಗಳಲ್ಲಿ ನಿಗದಿತ ಸಂಖ್ಯೆಗಿಂತ ಹೆಚ್ಚು ಜನರನ್ನು ಹಾಕುವಂತಿಲ್ಲ. ನಿಯಮ ಉಲ್ಲಂಘಿಸಿದರೆ ಪೊಲೀಸ್ ಇಲಾಖೆಗೆ ಮಾಹಿತಿ ನೀಡಬೇಕು ಎಂದು ಸಭೆ ನಿರ್ಧರಿಸಿತು . ಗ್ರಾಪಂ ಸದಸ್ಯ ಸತ್ಯನಾರಾಯಣ ಭಟ್ ಅಧ್ಯಕ್ಷತೆ ವಹಿಸಿದ್ದರು. ಕಟ್ಟಿನಹೊಳೆ ಯೂನಿಯನ್ ಅಧ್ಯಕ್ಷ ಗೋಪಾಲ ಕಟ್ಟಿನಹೊಳೆ, ನಿಟ್ಟೂರು ಗ್ರಾಪಂ ಸದಸ್ಯ ಅಶೋಕ ಕುಂಬಳೆ, ಇಡಿಸಿ ಸಮಿತಿ ಅಧ್ಯಕ್ಷ ಸುಬ್ರಹ್ಮಣ್ಯ ಭಟ್, ಕೆಟಿಡಿಒ ಜಿಲ್ಲಾ ಖಜಾಂಚಿ ಮದುಕುಮಾರ್ ಬಿ.ಎನ್, ಬಿದನೂರು ಟ್ಯಾಕ್ಸಿ ಸಂಘದ ಅಧ್ಯಕ್ಷ ಚಂದ್ರಶೇಖರ ಶೆಟ್ಟಿ, ರಾಜೇಂದ್ರ ಶೆಟ್ಟಿ, ಜಿ.ದೇವೇಂದ್ರ, ಮನುಕುಮಾರ್ , ನಾಗೇಂದ್ರ ಜೋಗಿ, ಚಂದಯ್ಯ ಜೈನ್, ರಾಘವೇಂದ್ರ ರಿಪ್ಪನಪೇಟೆ, ನಾಗರಾಜ, ರಮೇಶ್, ಗಣೇಶ್, ತೀರ್ಥೇಶ್, ಪ್ರವೀಣ, ದೀಪು ಬಟ್ಟೆಮಲ್ಲಪ್ಪ ಇದ್ದರು .

Follow Us:
Download App:
  • android
  • ios