Asianet Suvarna News Asianet Suvarna News

Chikkamagaluru: ಹೊಸ ಬೋರ್ ಕೊರೆಯುವಾಗ ಹಳೇ ಬೋರಲ್ಲಿ ಮುಗಿಲೆತ್ತರಕ್ಕೆ ಚಿಮ್ಮಿದ ನೀರು

ಹೊಸ ಬೋರ್ ಕೊರೆಯುವಾಗ ಹಳೇ ಬೋರಲ್ಲಿ ಮುಗಿಲೆತ್ತರಕ್ಕೆ ಅಂತರ್ಜಲ ಚಿಮ್ಮಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲ್ಲೂಕಿನ ಚಿಕ್ಕದೇವನೂರು ಗ್ರಾಮದಲ್ಲಿ ನಡೆದಿದೆ. ಸತತ ಬರಗಾಲದಿಂದಾಗಿ ಒಣಗದ್ದ ಕೊಳವೆಬಾವಿಯೊಂದರಲ್ಲಿ ನೀರು ಚಿಮ್ಮುತ್ತಿದ್ದು ರೈತರ ಮೊಗದಲ್ಲಿ ಮಂದಹಾಸ ಮೂಡಿಸಿದೆ. 

While drilling a new Bore water splashed up in the old Bore at Chikkamagaluru gvd
Author
First Published Dec 16, 2022, 11:55 AM IST

ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು 

ಚಿಕ್ಕಮಗಳೂರು (ಡಿ.16): ಹೊಸ ಬೋರ್ ಕೊರೆಯುವಾಗ ಹಳೇ ಬೋರಲ್ಲಿ ಮುಗಿಲೆತ್ತರಕ್ಕೆ ಅಂತರ್ಜಲ ಚಿಮ್ಮಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲ್ಲೂಕಿನ ಚಿಕ್ಕದೇವನೂರು ಗ್ರಾಮದಲ್ಲಿ ನಡೆದಿದೆ. ಸತತ ಬರಗಾಲದಿಂದಾಗಿ ಒಣಗದ್ದ ಕೊಳವೆಬಾವಿಯೊಂದರಲ್ಲಿ ನೀರು ಚಿಮ್ಮುತ್ತಿದ್ದು ರೈತರ ಮೊಗದಲ್ಲಿ ಮಂದಹಾಸ ಮೂಡಿಸಿದೆ. 

ಜಿಲ್ಲೆಯ ಕಡೂರು ತಾಲ್ಲೂಕಿನ ಚಿಕ್ಕದೇವನೂರು ಗ್ರಾಮದ ಶೇಖರಪ್ಪ ಎಂಬುವವರ ಜಮೀನಿನಲ್ಲಿದ್ದ ಹಳೆಯ 150 ಅಡಿ ಆಳದ ಕೊಳವೆ ಬಾವಿಯು ಸುಧೀರ್ಘ ಬರಗಾಲದಿಂದಾಗಿ ಬತ್ತಿ ಹೋಗಿತ್ತು. ಈ ವರ್ಷ ಭಾರೀ ಮಳೆಯಾದ ಹಿನ್ನೆಲೆಯಲ್ಲಿ ತೆಂಗಿನ ತೋಟ ಉಳಿಸಿಕೊಳ್ಳುವ ಅನಿವಾರ್ಯತೆಯಿಂದ ನಿನ್ನೆ ಹಳೆಯ ಕೊಳವೆ ಬಾವಿ ಪಕ್ಕದಲ್ಲಿ ಹೊಸದಾಗಿ ಮತ್ತೊಂದು ಕೊಳವೆಬಾವಿ ಕೊರೆಸಲು ಮುಂದಾದಾಗ ಕೇವಲ 50 ಅಡಿಗೆ ನೀರು ಕಾಣಿಸಿಕೊಂಡಿದ್ದು, ಪಕ್ಕದಲ್ಲಿದ್ದ ಹಳೆಯ ಕೊಳವೆಬಾವಿಯಲ್ಲಿ ನೀರು ಬಾನೆತ್ತರಕ್ಕೆ ಚಿಮ್ಮುತ್ತಿದ್ದು ನಿರಂತರವಾಗಿ ಮುಂದುವರೆದಿತ್ತು.

Chikkamagaluru: ಸಾಗುವಳಿ ಚೀಟಿ ನಂಬರ್ ಬಳಸಿ ಅಕ್ರಮ: ರೆವಿನ್ಯೂ ಇನ್‌ಸ್ಪೆಕ್ಟರ್ ಬಂಧನ

ಕಳೆದ ಎರಡು ವರ್ಷಗಳಿಂದ ಬರದ ತವರು ಕಡೂರಲ್ಲಿ ಸಮೃದ್ಧ ಮಳೆ: ಶಾಶ್ವತ ಬರಗಾಲ ಪೀಡಿತ ಪ್ರದೇಶ ಎನ್ನುವ ಹಣೆಪಟ್ಟಿಯನ್ನು ಹೊಂದಿದ್ದ ಕಡೂರು ತಾಲ್ಲೂಕಿನಲ್ಲಿ ಕಳೆದ ಎರಡು ವರ್ಷಗಳಿಂದ ಸಮೃದ್ಧ ಮಳೆಯಾಗಿದೆ. ಇದರಿಂದ ಅಂರ್ತಜಲ ವೃದ್ದಿಯಾಗಿರುವುದು ಈ ಘಟನೆ ಸಾಕ್ಷಿಯಾಗಿದೆ. ಹೊಸ ಬೋರ್ ಕೊರೆಯುವಾಗ ಹಳೇ ಬೋರಲ್ಲಿ ಮುಗಿಲೆತ್ತರಕ್ಕೆ ಚಿಮ್ಮಿದ ನೀರಿನಿಂದ ಹೊಸ ಬೋರ್ ಕೇವಲ 200 ಅಡಿ ಕೊರೆಯುವಷ್ಟರಲ್ಲಿ ಬೋರ್ವೆಲ್ ಲಾರಿಯವರು ಹರಸಾಹಸಪಟ್ಟಿದ್ದು, ಜಮೀನು ಮಾಲೀಕ ಶೇಖರಪ್ಪ ಕುಟುಂಬಸ್ಥರು ಸೇರಿದಂತೆ ಗ್ರಾಮಸ್ಥರು ಹಾಗೂ ಅಕ್ಕಪಕ್ಕದ ಗ್ರಾಮಸ್ಥರುಗಳ ಮುಖದಲ್ಲಿ ಮಂದಹಾಸ ಮೂಡಿದೆ. ಇನ್ನೂ ಹಳೆಯ ಬೋರ್ವೆಲ್ ಕೇಸಿಂಗ್ ಪೈಪ್ ಅನ್ನು ಬಂದ್ ಮಾಡಿ ನಂತರ ಕೊರೆಯಲು ಆರಂಭಿಸಲಾಯಿತು ಎಂದು ಸ್ಥಳೀಯರು ತಿಳಿಸಿದ್ದಾರೆ.

ನನ್ನ ಅಭಿವೃದ್ಧಿ ಕಾರ್ಯ ಕಣ್ಣಿದ್ದವರು ನೋಡುತ್ತಾರೆ: ಸಿ.ಟಿ.ರವಿ

ಸತತ ಬರಗಾಲದಿಂದಾಗಿ ನಮ್ಮ ತೋಟದಲ್ಲಿದ್ದ ಬೋರ್ಗಳು ನೀರಿಲ್ಲದೆ ಒಣಗಿ ಹೋಗಿದ್ದವು, 3 ವರ್ಷಗಳ ಹಿಂದೆ ಸಾವಿರ ಅಡಿ ಕೊರೆಯಿಸಿದರೂ ನೀರು ಸಿಗುತ್ತಿರಲಿಲ್ಲ, ಕಳೆದ ವರ್ಷ ಮತ್ತು ಈ ವರ್ಷ ಅರಕೆರೆ ಕೆರೆ, ನಮ್ಮ ದೇವನೂರು ಕೆರೆ ತುಂಬಿರುವುದರಿಂದ ಕೇವಲ 50 ಅಡಿಗೆ ನೀರು ಸಿಗುತ್ತಿರುವುದು ನಮ್ಮ ಪುಣ್ಯ. ಹಳೆಯ ಕೊಳವೆ ಬಾವಿಯಲ್ಲಿ ಲಾರಿಗಿಂತಲೂ ಎತ್ತರಕ್ಕೆ ನೀರು ಚಿಮ್ಮುತ್ತಿದ್ದು ಅದನ್ನು ನೋಡಲು ತಂಡೋಪತಂಡವಾಗಿ ಜನಸಾಗರ ಹರಿದುಬಂದಿತ್ತು. ಒಟ್ಟಾರೆ ಬರಪೀಡಿತ ಪ್ರದೇಶದಲ್ಲಿ ಸಮೃದ್ದಿ ಮಳೆಯಿಂದ ರೈತರಲ್ಲೂ ಹರ್ಷ ಮೂಡಿಸಿದ್ದು ಲಕ್ಷಾಂತರ ರೂಪಾಯಿ ಬೋರ್ ಗಾಗಿ ಖರ್ಚು ಮಾಡುತ್ತಿದ್ದ ರೈತರು ಇದೀಗ ಕಡಿಮೆ ವೆಚ್ಚದಲ್ಲಿ ನೀರಾವರಿ ಸೌಲಭ್ಯ ಪಡೆಯುವ ಮೂಲಕ ಕೃಷಿಯಲ್ಲಿ ಆರ್ಥಿಕವಾಗಿ ಸದೃಡವಾಗಲು ಸಹಕಾರಿಯಾಗುತ್ತಿದೆ.

Follow Us:
Download App:
  • android
  • ios