ಹಣ, ಅಧಿಕಾರ ಇದ್ದಾಗ ಸಮಾಜಕ್ಕೆ ಒಳಿತು ಮಾಡಬೇಕು : ಎಂಟಿಬಿ
ಹಣ, ಅಧಿಕಾರ ಇದ್ದಾಗ ಸಮಾಜಕ್ಕೆ ಒಳಿತು ಮಾಡಬೇಕು. ಕೃತಕ ಕಾಲು ಜೋಡಣಾ ಶಿಬಿರ ಉದ್ಘಾಟಿಸಿದ ಜಿಲ್ಲಾ ಉಸ್ತುವಾರಿ ಸಚಿವ ಎಂಟಿಬಿ ನಾಗರಾಜ್ ಹೇಳಿಕೆ
ಚಿಕ್ಕಬಳ್ಳಾಪುರ (ನ.02): ಪ್ರತಿಯೊಬ್ಬ ಮನುಷ್ಯ ಹಣ ಮತ್ತು ಅಧಿಕಾರ ಹೊಂದಿದ್ದಾಗ ದರ್ಪ ತೋರಿಸದೇ ಸಮಾಜಕ್ಕೆ ತನ್ನ ಕೈಲಾದ ಒಳಿತನ್ನು ಮಾಡಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಂ.ಟಿ.ಬಿ.ನಾಗರಾಜ್ ತಿಳಿಸಿದರು.
ನಗರ ಹೊರವಲಯದ ಜೈನ್ ಆಸ್ಪತ್ರೆ (Hospital) ಆವರಣದಲ್ಲಿ ಕನ್ನಡ ರಾಜ್ಯೋತ್ಸವ ಅಂಗವಾಗಿ ಮಂಗಳವಾರ ಶ್ರೀ ಮಂಗಿಶೆಟ್ಟಿನರಸಿಂಹಯ್ಯ ರಂಗಮ್ಮ ಟ್ರಸ್ಟ್ , ಜೈನ್ ಮಿಷನ್ ಆಸ್ಪತ್ರೆ, ಮತ್ತು ಪತ್ರಕರ್ತರ ಸಂಘ, ಕೆ.ಎಂ.ವೈ.ಎಫ್ ಸಹಯೋಗದಲ್ಲಿ ಆಯೋಜಿಸಿದ್ದ ಉಚಿತ ಕೃತಕ ಕಾಲು ಜೊಡಣೆ ಶಿಭಿರ ಉದ್ಘಾಟಿಸಿ ಮಾತನಾಡಿದರು.
35 ಲಕ್ಷ ನೆರವು ಘೋಷಿಸಿದ ಸಚಿವ:
ಅಂಗವೈಕಲ್ಯ ಇರುವವರಿಗೆ ಅವಶ್ಯಕತೆ ಗೆ ಅನುಸಾರವಾಗಿ ಉಚಿತವಾಗಿ ಕಾಲು ಜೋಡಣೆ ಮಾಡುವ ಈ ಶಿಭಿರವು ಅರ್ಥಪೂರ್ಣ ವಾದುದಾಗಿದೆ ಎಂದ ಅವರು ಮಾನವಸೇವೆಯೇ ಮಾಧವ ಸೇವೆ ಎಂಬಂತೆ ಆಯೋಜಕರು ಸಮಾಜಕ್ಜೆ ಹಿತ ಎನಿಸುವ ಕಾರ್ಯವನ್ನು ಸಾರ್ಥಕವಾಗಿ ಹಮ್ಮಿಕೊಂಡಿರುವುದು ಶ್ಲಾಘನೀಯ ಎಂದು ಹೇಳಿ ಮಂಗಿಶೆಟ್ಟಿಟ್ರಸ್ಟ್‌ಗೆ 10 ಲಕ್ಷ ಹಾಗೂ ಜೈನ್ ಮಿಷನ್ ಆಸ್ಪತ್ರೆಗೆ 25 ಲಕ್ಷ ರು, ಆರ್ಥಿಕ ನೆರವುನ್ನು ಸಚಿವ ಎಂಟಿಬಿ ನಾಗರಾಜ್ ಘೋಷಿಸಿದರು.
ಕಾರ್ಯಕ್ರಮ ಉದ್ಘಾಟನೆ ಗೂ ಮುನ್ನ ಇದೇ ಆವರಣದಲ್ಲಿ ರಾಜ್ಯೋತ್ಸವ ಮಾತನಾಡಿ ಲಾಭರಹಿತ ಹಾಗೂ ಸೇವಾ ಮನೋಭಾವನೆಯಿಂದ ರೋಗಿಗಳಿಗೆ ಗುಣಮಟ್ಟದ ಚಿಕಿತ್ಸೆ ನೀಡುತಿದ್ದು ಈ ಮಹತ್ತರ ಕಾರ್ಯಕ್ಕೆ ಎಲ್ಲರ ಸಹಕಾರ ಅತಿ ಮುಖ್ಯ ಎಂದರು.
ಖಾದಿ ಮತ್ತು ಗ್ರಾಮೊದ್ಯೋಗ ಮಂಡಳಿ ಅದ್ಯಕ್ಷ ಕೆ.ವಿ.ನಾಗರಾಜ…, ಜಿಲ್ಲಾಧಿಕಾರಿ ಎನ್.ಎಂ.ನಾಗರಾಜ…, ಉಪವಿಭಾಗಾಧಿಕಾರಿ ಡಾ.ಸಂತೋಷ್ ಕುಮಾರ್, ಎಂ.ಎನ….ಆರ್.ಟ್ರಸ್ಟ… ಅದ್ಯಕ್ಷ ಕೃಷ್ಣಮೂರ್ತಿ ಜೈನ್ ಮಿಷನ್ ಆಸ್ಪತ್ರೆ ಅದ್ಯಕ್ಷ ಡಾ. ನರಪತ್ ಸೋಲಂಕಿ ಪತ್ರಕರ್ತರ ಸಂಘದ ಅಧ್ಯಕ್ಷ ಎಂ.ಜಯರಾಂ, ಎಂಎನ….ಆರ್.ಟ್ರಸ್ಟ… ಹಾಗೂ ಜೈನ್ ಮಿಷನ್ ಟ್ರಸ್ಟ… ಕಾರ್ಯದರ್ಶಿ ಉತ್ತಮ್ ಚಂದ್ ಜೈನ…, ಮತ್ತಿತರರು ಇದ್ದರು.
ಸಿದ್ದರಾಮಯ್ಯ ಹುಲಿನಾ:
ಚಿಕ್ಕಬಳ್ಳಾಪುರ : ಬಿಜೆಪಿ ನಾಯಕರು ಭಯ ಪಡಲಿಕ್ಕೆ ಸಿದ್ದರಾಮಯ್ಯ ಅವರೇನು ಹುಲಿನಾ, ಅವರು ಕೂಡ ನಮ್ಮಂತೆ ಮನುಷ್ಯರಲ್ಲವೇ ಎಂದು ಪೌರಾಡಳಿತ ಸಚಿವ ಎಂಟಿಬಿ ನಾಗರಾಜ್, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಟಾಂಗ್ ನೀಡಿದರು.
ಎಂಟಿಬಿ ಹೇಳಿಕೆ ಮುಂದಿಟ್ಟುಕೊಂಡು ಹೋರಾಟಕ್ಕೆ ಮುಂದಾದ ಕಾಂಗ್ರೆಸ್
ನಗರದಲ್ಲಿ ಮಂಗಳವಾರ ಜಿಲ್ಲಾ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಬಳಿಕ ತಮ್ಮನ್ನು ಭೇಟಿಯಾದ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ನಾಯಕರಿಗೆ ನಾ ಕಂಡರೆ ಭಯ ಎಂಬ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿದ ಸಚಿವ ಎಂಟಿಬಿ ನಾಗರಾಜ್, ಯಾರು, ಯಾರನ್ನ ಕಂಡರೂ ಭಯ ಇಲ್ಲ. ನಾವು ಹುಲಿಗಳಲ್ಲ, ಸಿದ್ದರಾಮಯ್ಯ ಕೂಡ ಹುಲಿ ಅಲ್ಲ. ನಾವೆಲ್ಲಾ ಮನುಷ್ಯರೆಂದರು.
ಹೊರಗುತ್ತಿಗೆ ಕಾರ್ಮಿಕರಿಗೆ ಹೆಚ್ಚುವರಿ ವೇತನ
ಆದೇ ರೀತಿ 14, 15 ವರ್ಷಗಳಿಂದ ಟ್ರಕ್ ಲೋಡರ್ಸ್, ಟ್ರಕ್ ಚಾಲಕರು, ವಾಲ್ವಮೆನ್‌ಗಳು, ಕಂಪ್ಯೂಟರ್ ಅಪರೇಟರ್‌ಗಳು ಸೇರಿ ಸುಮಾರು 4.600 ಪೌರ ಕಾರ್ಮಿಕರು ಹೊರಗುತ್ತಿಗೆ ಮೇಲೆ ಕೆಲಸ ಮಾಡುತ್ತಿದ್ದಾರೆ. ಅವರನ್ನು ಕಾಯಂಗೊಳಿಸುವವರೆಗೆ ಹೆಚ್ಚುವರಿಯಾಗಿ 5,000 ಸಾವಿರ ರು, ವೇತನ ನೀಡಲು ತಿರ್ಮಾನಿಸಲಾಗಿದೆ ಎಂದರು. .