Asianet Suvarna News Asianet Suvarna News

mandya : ನಿಖಿಲ್‌ ಬಂದಾಗ ಸೇರುವ ಜನ ಮತಗಳಾಗಿ ಪರಿವರ್ತನೆಯಾಗಲ್ಲ : ಶಿವರಾಮೇಗೌಡ

ತಾಲೂಕಿಗೆ ನಿಖಿಲ್ ಕುಮಾರಸ್ವಾಮಿ ಬಂದಾಗ ಸೇರುವ ಜನರಿಂದ ಮತಗಳಾಗಿ ಪರಿವರ್ತನೆಯಾಗಲ್ಲ. ಕ್ಷೇತ್ರದ ಶಾಸಕರು ತಮ್ಮ ಸ್ವಂತ ವರ್ಚಸ್ಸಿನಲ್ಲಿ ಜನಶಕ್ತಿ ತೋರಿಸಲಿ ಎಂದು ಶಾಸಕ ಸುರೇಶ್‌ಗೌಡರಿಗೆ ಮಾಜಿ ಸಂಸದ ಎಲ….ಆರ್‌.ಶಿವರಾಮೇಗೌಡ ಸವಾಲು ಹಾಕಿದರು.

When Nikhil comes to Mandya the people who Came are not converted into votes snr
Author
First Published Nov 9, 2022, 5:39 AM IST

  ನಾಗಮಂಗಲ (ನ.09): ತಾಲೂಕಿಗೆ ನಿಖಿಲ್ ಕುಮಾರಸ್ವಾಮಿ ಬಂದಾಗ ಸೇರುವ ಜನರಿಂದ ಮತಗಳಾಗಿ ಪರಿವರ್ತನೆಯಾಗಲ್ಲ. ಕ್ಷೇತ್ರದ ಶಾಸಕರು ತಮ್ಮ ಸ್ವಂತ ವರ್ಚಸ್ಸಿನಲ್ಲಿ ಜನಶಕ್ತಿ ತೋರಿಸಲಿ ಎಂದು ಶಾಸಕ ಸುರೇಶ್‌ಗೌಡರಿಗೆ ಮಾಜಿ ಸಂಸದ ಎಲ್.ಆರ್‌.ಶಿವರಾಮೇಗೌಡ ಸವಾಲು ಹಾಕಿದರು.

ತಾಲೂಕಿನ ಚಿಣ್ಯ ಮತ್ತು ಹೊಣಕೆರೆ ಗ್ರಾ.ಪಂ.ವ್ಯಾಪ್ತಿಯ ವಿವಿಧ ಗ್ರಾಮಗಳಲ್ಲಿ (Village)  ಮಂಗಳವಾರ ಪ್ರವಾಸ ಕೈಗೊಂಡು ಮೂಲ ಸೌಕರ್ಯಗಳ ಸಮಸ್ಯೆ ಕುರಿತು ಸ್ಥಳೀಯ ಜನರಿಂದ ಮಾಹಿತಿ ಸಂಗ್ರಹಿಸಿದ ಬಳಿಕ ಅಲ್ಪಹಳ್ಳಿಯಲ್ಲಿ ಮಾತನಾಡಿ, ನಿಖಿಲ್‌ (Nikhil Kumaraswamy)  ಬರುತ್ತಾರೆ ಎಂದರೆ ಅವರನ್ನು ನೋಡಲು ಅಪಾರ ಸಂಖ್ಯೆಯ ಜನ ಸೇರುತ್ತಾರೆ. ಬರುವವರೆಲ್ಲರಿಂದ ಮತಗಳು ಬರುವುದಿಲ್ಲ ಎಂದು ಟೀಕಿಸಿದರು.

ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರು ಮತ್ತು ಮಾಜಿ ಸಿಎಂ ಕುಮಾರಸ್ವಾಮಿ ರಾಜ್ಯದ ಮತ್ತು ನಮ್ಮೆಲ್ಲರ ನಾಯಕರು, ನಿಖಿಲ್‌ ಕುಮಾರಸ್ವಾಮಿ ಬಗ್ಗೆ ಅಪಾರ ಗೌರವವಿದೆ. ಒಂದು ಪಕ್ಷದ ರಾಜ್ಯ ನಾಯಕರು ತಾಲೂಕಿಗೆ ಬರುತ್ತಾರೆಂದರೆ ಇದ್ದಕ್ಕಿದ್ದಂತೆ ಅಪಾರ ಸಂಖ್ಯೆಯ ಜನ ಬಂದೇ ಬರುತ್ತಾರೆ ಎಂದರು.

ತಾಲೂಕಿನಲ್ಲಿ ನಡೆಯುವ ದೇವಸ್ಥಾನ ಉದ್ಘಾಟನೆ, ಮದುವೆ, ಗೃಹಪ್ರವೇಶ ಸೇರಿದಂತೆ ಹೋಬಳಿ ಕೇಂದ್ರದಲ್ಲಿ ಪಕ್ಷದ ಕಚೇರಿ ತೆರೆಯುವಂತಹ ಸಣ್ಣ ಪುಟ್ಟಕಾರ್ಯಕ್ರಮಗಳಿಗೂ ನಿಖಿಲ್‌ ಕುಮಾರಸ್ವಾಮಿ ಅವರನ್ನು ಕರೆತರುವುದಾದರೆ ನಿಮ್ಮ ಸ್ವಂತ ಬಂಡವಾಳ ಏನಾಗಿದೆ. ನಿಮಗೆ ಜನ ಸೇರುವುದಿಲ್ಲ ಎಂಬುದು ಸಾಬೀತಾಯಿತಲ್ಲವೇ ಎಂದು ಶಾಸಕ ಸುರೇಶ್‌ಗೌಡರ ಕಾಲೆಳೆದರು.

ರಾಜ್ಯದಲ್ಲಿ ಸಂಘಟನೆ ಮಾಡಲಿ: ಮಾಜಿ ಸಿಎಂ ಎಚ….ಡಿ.ಕುಮಾರಸ್ವಾಮಿ ಅವರು ರಾಜ್ಯನಾಯಕರು. ತಾಲೂಕಿನಲ್ಲಿ ನಡೆಯುವ ಗಣಪತಿ ವಿಸರ್ಜನೆ ಕಾರ್ಯಕ್ರಮಕ್ಕೂ ಅವರನ್ನು ಕರೆತರುವ ಮೂಲಕ ತಾಲೂಕಿಗೆ ಮಾತ್ರ ಸೀಮಿತಗೊಳಿಸಿದರೆ ರಾಜ್ಯದಲ್ಲಿ ಅವರು ಪಕ್ಷ ಸಂಘಟನೆ ಮಾಡುವುದಾದರೂ ಹೇಗೆ. ಎಲ್ಲ ಕಾರ್ಯಕ್ರಮಗಳಿಗೂ ಅವರನ್ನೇ ಕರೆತರುವುದಾದರೆ ನೀವು ಹಾಲಿ ಶಾಸಕರು ನಿಮ್ಮ ಸ್ವಂತಶಕ್ತಿ ಮೇಲೆ ಜನ ಸೇರಿಸಿ ಎಂದು ಆಗ್ರಹಿಸಿದರು.

ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ ಅವರು 2023ರ ಚುನಾವಣೆಯಲ್ಲಿ 123ಸ್ಥಾನಗಳಲ್ಲಿ ಜೆಡಿಎಸ… ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಳ್ಳಬೇಕೆಂದು ಕಂಕಣಬದ್ಧರಾಗಿ ಹಗಲು ರಾತ್ರಿ ಬಹಳ ಹೋರಾಟ ನಡೆಸುತ್ತಿದ್ದಾರೆ. ಈ ವೇಳೆ ಒಂದೇ ವಿಧಾನಸಭಾ ಕ್ಷೇತ್ರಕ್ಕೆ ಸೀಮಿತವಾಗಲು ಆಗುವುದಿಲ್ಲ. ಹಾಗಾಗಿ ನಿಖಿಲ್‌ ಕುಮಾರಸ್ವಾಮಿ ರಾಜ್ಯಪ್ರವಾಸ ಕೈಗೊಂಡು ಪಕ್ಷಕಟ್ಟಲಿ ಎಂದು ಸಲಹೆ ನೀಡಿದರು.

ಜೆಡಿಎಸ್‌ ಭದ್ರಕೋಟೆಯಾಗಿ ಉಳಿದಿಲ್ಲ

ನಾನು ಈ ಹಿಂದೆ ಜೆಡಿಎಸ… ಪಕ್ಷದಿಂದ ಸಂಸದನಾಗಿದ್ದು ನಿಜ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಜಿಲ್ಲೆಯ ಏಳೂ ಕ್ಷೇತ್ರದಲ್ಲಿ ಜೆಡಿಎಸ… ಶಾಸಕರು ಗೆಲುವು ಸಾಧಿಸಿದ್ದ ವೇಳೆ ಜಿಲ್ಲೆ ಜೆಡಿಎಸ… ಭದ್ರಕೋಟೆಯಾಗಿತ್ತು. ನಂತರದಲ್ಲಿ ನಡೆದ ಲೋಕಸಭೆ ಚುನಾವಣೆಯಲ್ಲಿ ನಿಖಿಲ್‌ ಸೋತಾಗಲೇ ಜೆಡಿಎಸ… ಛಿದ್ರವಾಗಿಹೋಯಿತು ಎಂದರು.

ನಂತರ ಪರಿಷತ… ಚುನಾವಣೆಗೆ ಅಪ್ಪಾಜಿಗೌಡ ಸೋಲನುಭವಿಸಿದರು. ಕೆ.ಟಿ.ಶ್ರೀಕಂಠೇಗೌಡ ಎಂಎಲ್ಸಿ ಚುನಾವಣೆಯಿಂದ ದೂರಸರಿದರು. ಎರಡೂ ಎಂಎಲ್ಸಿ ಸ್ಥಾನಗಳಲ್ಲಿ ಗೆದ್ದಿರುವ ದಿನೇಶ್‌ ಗೂಳಿಗೌಡ ಮತ್ತು ಮಧು ಜಿ.ಮಾದೇಗೌಡ ಜೆಡಿಎಸ… ಪಕ್ಷದವರೇ ಎಂದು ಪ್ರಶ್ನಿಸಿದರು. ಜನ ಒಂದೇ ಕಡೆಗೆ ಮತ ಹಾಕುವುದಿಲ್ಲ. ಆದ್ದರಿಂದ ಮಂಡ್ಯ ಜಿಲ್ಲೆ ಜೆಡಿಎಸ… ಭದ್ರಕೋಟೆಯಾಗಿ ಉಳಿದಿಲ್ಲ ಎಂದು ಪುನರುಚ್ಛರಿಸಿದರು.

ಜಿಲ್ಲೆಯನ್ನು ಜೆಡಿಎಸ್ ಭದ್ರಕೋಟೆಯನ್ನಾಗಿಸಲು ಹೊರಟಿರುವವರಿಂದಲೇ ಜೆಡಿಎಸ… ಪಕ್ಷ ಹಾಳಾಗುತ್ತಿದೆ. ಅವರು ಈ ಪಕ್ಷದಲ್ಲಿ ಶಾಶ್ವತವಾಗಿ ಇರುತ್ತಾರೆಂದು ಯಾರೂ ಸಹ ಅಂದುಕೊಳ್ಳುವಂತಿಲ್ಲ ಎಂದು ಪರೋಕ್ಷವಾಗಿ ಮೇಲುಕೋಟೆ ಶಾಸಕ ಸಿ.ಎಸ್.ಪುಟ್ಟರಾಜು ಕಾಲೆಳೆದರು.

ಸಿಆರ್‌ಎಸ್‌ಗೆ ಬಂದ ಸ್ಥಿತಿ ಬರುತ್ತದೆ: ಕ್ಷೇತ್ರದ ಶಾಸಕರೆಂದರೆ ಜನಸಾಮಾನ್ಯರ ಮೂಲ ಸಮಸ್ಯೆಗಳಿಗೆ ಪರಿಹಾರ ಕೊಡಿಸಬೇಕು. ಕ್ಷೇತ್ರವನ್ನು ಸಮಗ್ರವಾಗಿ ಅಭಿವೃದ್ಧಿಪಡಿಸಬೇಕು. ಅದನ್ನು ಬಿಟ್ಟು ತಮ್ಮ ಸುತ್ತಮುತ್ತ ಕೇವಲ ಗುತ್ತಿಗೆದಾರರನ್ನು ಇಟ್ಟುಕೊಂಡ ಮಾತ್ರಕ್ಕೆ ಯಾವುದೇ ಹಳ್ಳಿ ಅಭಿವೃದ್ಧಿ ಕಾಣುವುದಿಲ್ಲ ಎಂದರು.

ಮಾಜಿ ಸಚಿವ ಎನ….ಚಲುವರಾಯಸ್ವಾಮಿ ಸುತ್ತಮುತ್ತ 50ಕ್ಕೂ ಹೆಚ್ಚು ಗುತ್ತಿಗೆದಾರು ಮಾತ್ರ ಇದ್ದರು. ಅವರ ಪರಿಸ್ಥಿತಿ ಏನಾಯಿತು. ತಾಲೂಕಿನ ಗ್ರಾಮೀಣ ಪ್ರದೇಶವನ್ನು ಅಭಿವೃದ್ಧಿ ಪಡಿಸುವ ವಿಚಾರದಲ್ಲಿ ಕ್ಷೇತ್ರದ ಶಾಸಕರು ತಮ್ಮ ಸ್ವಂತ ಒಡೆತನದ ಖಾಸಗಿ ಕಂಪನಿಯಾಗಿ ಪರಿವರ್ತನೆ ಮಾಡಿಕೊಂಡು ಕೆಲ ಗುತ್ತಿಗೆದಾರರನ್ನು ಮಾತ್ರ ಬೆಳೆಸುತ್ತಿದ್ದಾರೆ. ಹಾಗಾಗಿ ಚಲುವರಾಯಸ್ವಾಮಿ ಅವರಿಗೆ ಬಂದ ಪರಿಸ್ಥಿತಿಯೇ ಶಾಸಕ ಸುರೇಶ್‌ಗೌಡಗೂ ಬರುತ್ತದೆ ಎಂದು ಭವಿಷ್ಯ ನುಡಿದರು.

ಈ ವೇಳೆ ಶಿವರಾಮೇಗೌಡರ ಪುತ್ರ  ಚೇತನ್‌ಗೌಡ, ಕೆಪಿಸಿಸಿ ಸದಸ್ಯ ಬಿದರಕೆರೆ ಮಂಜೇಗೌಡ, ಮುಖಂಡರಾದ ಚಿಣ್ಯ ಕರಿಯಣ್ಣ, ತೆಂಗಿನಭಾಗ ನಾಗರಾಜು, ಮಹದೇವ…, ಜಯಸ್ವಾಮಿ, ಬೊಮ್ಮೇಗೌಡ, ನಾರಾಯಣಬಾಬು, ಗಂಗವಾಡಿ ಶಿವರಾಮು, ಮಣ್ಣಹಳ್ಳಿ ನಟರಾಜ… ಸೇರಿದಂತೆ ಹಲವರಿದ್ದರು.

Follow Us:
Download App:
  • android
  • ios