Hindi Imposition ಭಾಷೆ ಅಂತ ಬಂದಾಗ ಮಾತೃಭಾಷೆಯೇ ಮೊದಲು: ಉದಾಸಿ
ಭಾಷೆ ಅಂತ ಬಂದಾಗ ಮಾತೃಭಾಷೆಯೇ ಮೊದಲು ಕೇಂದ್ರದ ಹಿಂದಿ ಹೇರಿಕೆ ವಿಚಾರಕ್ಕೆ ಸಂಸದ ಶಿವಕುಮಾರ್ ಉದಾಸಿ ಪ್ರತಿಕ್ರಿಯೆ ನೀಡಿದ್ದಾರೆ.
ವರದಿ: ಪವನ್ ಕುಮಾರ್ , ಏಷ್ಯಾನೆಟ್ ಸುವರ್ಣ ನ್ಯೂಸ್
ಹಾವೇರಿ (ಮೇ 2): ಕೇಂದ್ರ ಸರ್ಕಾರದಿಂದ ಹಿಂದಿ ಹೇರಿಕೆ ವಿಚಾರದಲ್ಲಿ ಬಿಜೆಪಿ ಸಂಸದರು, ಶಾಸಕರು ಪ್ರಶಂಸೆ ವ್ಯಕ್ತ ಪಡಿಸುತ್ತಲೇ ಬಂದಿದ್ದಾರೆ. ಆದರೆ ಹಿಂದಿ ಹೇರಿಕೆ (Hindi Imposition) ಬಗ್ಗೆ ಮಾತನಾಡಿರುವ ಸಂಸದ ಶಿವಕುಮಾರ್ ಉದಾಸಿ (Shivakumar Udasi) ಮಾತೃಭಾಷೆ ಕನ್ನಡವೇ (Kannada) ಮೊದಲು ಎಂದಿದ್ದಾರೆ. ಸಂಸದ ಶಿವಕುಮಾರ್ ಉದಾಸಿ ಇಂದು ಹಾವೇರಿ (Haveri) ತಾಲೂಕು ಕರಜಗಿ ರೈಲ್ವೆ ಸ್ಟೇಷನ್ ಬಳಿ ಮೇಲ್ಸೇತುವೆ ಲೋಕಾರ್ಪಣೆ ಮಾಡಿ ಮಾತನಾಡಿದರು.
ಭಾಷೆ ವಿಚಾರ ಬಂದಾಗ ಮಾತೃಭಾಷೆಯೇ ಮೊದಲು.ಯಾರೇ ಆಗಿರಲಿ, ದೇಶದಲ್ಲಿ ಆಗಲಿ ಪ್ರಪಂಚದಾಗಲಿ ಎಲ್ಲರಿಗೂ ಮಾತೃ ಭಾಷೆಯೇ ಮೊದಲು.ಸಣ್ಣ ಮಗುವಿದ್ದಾಗ ಭಾಷೆ ಕಲಿಸಿದರೆ ಬಹುಭಾಷೆ ಕಲಿಯುತ್ತವೆ. ನಮ್ಮ ತಂದೆ ದಿ. ಉದಾಸಿಯವರು ಏಳೆಂಟು ಭಾಷೆ ಮಾತಾಡ್ತಿದ್ರು. ಆಸಕ್ತಿ ಇದ್ದವರು ಬೇರೆ ಭಾಷೆಯನ್ನೂ ಕಲಿಯುತ್ತಾರೆ. ದಿ.ಉದಾಸಿಯವರು 2003 ರಲ್ಲಿ ಎಲೆಕ್ಷನ್ ಸೋತಿದ್ರು. ಆಗ ಒಬ್ಬ ಮೌಲ್ವಿಯನ್ನು ಕರೆಸಿದ್ರು. ಮೌಲ್ವಿಯಿಂದ ಮೂರು ತಿಂಗಳು ತರಬೇತಿ ಪಡೆದು ಉರ್ದು ಬರೆಯೋದು ಓದೋದು ಕಲಿತಿದ್ರು.ಭಾಷಾ ಕಲಿಕೆ ಅನ್ನೋದು ಅವರವರ ಆಸಕ್ತಿ ಮೇಲೆ ಹೋಗುತ್ತೆ.ಆದರೆ ಮಾತೃಭಾಷೆಯೇ ಶ್ರೇಷ್ಠ.ಆದರೆ ಇದು ಯಾಕೆ ಇಷ್ಟು ದೊಡ್ಡ ನ್ಯೂಸ್ ಆಗ್ತಿದೆ ಅಂತ ನನಗೆ ಗೊತ್ತಿಲ್ಲ ಎಂದು ಹೇಳಿದರು.
ಪ್ರಿಯಾಂಕ ಖರ್ಗೆ ಸಿಎಂ ಬದಲಾವಣೆ ಹೇಳಿಕೆಗೆ ಸುಧಾಕರ್ ತಿರುಗೇಟು!
ಬಿಜೆಪಿಗೆ ಬಂದು ತಪ್ಪು ಮಾಡಿದೆ ಎಂಬ ಸಚಿವ ಎಂ.ಟಿ.ಬಿ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಶಿವಕುಮಾರ್ ಉದಾಸಿ, ಎಂಟಿಬಿ ಹೇಳಿಕೆ ಬಗ್ಗೆ ಎಂಟಿಬಿಯವರನ್ನೇ ಕೇಳಿ. ಈ ಬಗ್ಗೆ ಚರ್ಚೆ ಆಗಲಿ ಮಾರಾಯ.ನನ್ನ ಕೇಳಿದರೆ ಹೇಗೆ?ಇದೊಳ್ಳೆ ಕಥೆ ಆಯ್ತಪ್ಪಾ, ನಾನೇದರೂ ಹೇಳಿದರೆ ನನ್ನ ಕೇಳಿ ಎಂದ್ರು.ನನಗೆ ಹಿಡ್ಕೊಂಡು ಮೈ ಮೇಲೆ ಬಿದ್ದರೆ ಹೇಗೆ?ನಾನು ಒಬ್ಬ ಲೋಕಸಭಾ ಸದಸ್ಯ ಅಷ್ಟೆ.ಪಕ್ಷದ ಬಗ್ಗೆ ಮಾತಾಡೋಕೆ ಅದ್ಯಕ್ಷರಿದ್ದಾರೆ. ನಾನೊಬ್ಬ ಎಂಪಿಯಾಗಿ ನನ್ನ ಡೊಮೈನ್ ನಲ್ಲಿ ಕೆಲಸ ಮಾಡುವವನು.ಈ ಬಗ್ಗೆ ಪಕ್ಷದವರು ಪ್ರೆಸ್ ಮೀಟ್ ಮಾಡು ಅಂದರೆ ನಾನು ಮಾಡಬೇಕು. ಮಾತಾಡಬೇಕು ಎಂದು ಹೇಳಿದರು.
Ballari ರೌಡಿ ಶೀಟರ್ ಹತ್ಯೆ, ಶಾಸಕ ಸೋಮಶೇಖರ ರೆಡ್ಡಿ ನೀಡಿದ್ರಾ ಬೆಂಬಲ?
ಪಿ.ಎಸ್.ಐ ನೇಮಕಾತಿ ಅಕ್ರಮ ವಿಚಾರವಾಗಿ ಮಾತನಾಡಿದ ಶಿವಕುಮಾರ್ ಉದಾಸಿ, ಈ ವಿಚಾರದಲ್ಲಿ ಅಪ್ರಮಾಣಿಕ ಅಭ್ಯರ್ಥಿಗಳು ಹೊರಗುಳಿಯಬೇಕಿದೆ ಹೀಗಾಗೇ ಸರ್ಕಾರ ಮರು ಪರೀಕ್ಷೆ ನಿರ್ಧಾರ ತಗೊಂಡಿದೆ. ಸರ್ಕಾರ ಮರು ಪರೀಕ್ಷೆ ಮಾಡುವ ತೀರ್ಮಾನ ಕೈಗೊಂಡಿದೆ.ತನಿಖೆಯೂ ಪ್ಯಾರಲಲ್ ಆಗಿ ನಡೆಯುತ್ತಿದೆ. ಈ ದ್ವಂದ್ವ ಇದ್ದೇ ಇರುತ್ತೆ.ತಪ್ಪು ಮಾಡಿದವರನ್ನು ಬಿಟ್ಟು ಉಳಿದವರಿಗೆ ಪರೀಕ್ಷೆ ಮಾಡಲಾಗ್ತಿದೆ.ತನಿಖೆಯಲ್ಲಿ ಇರೋ ಅಭ್ಯರ್ಥಿಗಳನ್ನು ಬಿಟ್ಟು ಉಳಿದವರಿಗೆ ಮರು ಪರೀಕ್ಷೆ ನಡೆಯುತ್ತದೆ. ಅಪಕೋರ್ಸ್ ನಾನೂ ಪ್ರಾಮಾಣಿಕವಾಗಿ ಪರೀಕ್ಷೆ ಬರೆದಿದ್ದೆ ಅಂದರೆ ನನಗೂ ಹಾಗೆ ಅನಿಸುತ್ತಿತ್ತು ಆದರೆ ಹೊಸ ಅಭ್ಯರ್ಥಿಗಳನ್ನೇನೂ ಸೇರ್ಪಡೆ ಮಾಡಲ್ಲ ಅಂತ ಈಗಾಗಲೇ ಸರ್ಕಾರ ಹೇಳಿದೆ.ಅಪ್ರಮಾಣಿಕರ್ಯಾರು ಅವರು ಹೊರಗಡೆ ಹೋಗಬೇಕಿದೆ ಎಂದರು..