ಹುಬ್ಬಳ್ಳಿ - ಬೆಂಗಳೂರು ಸೂಪರ್‌ಫಾಸ್ಟ್‌ ಎಕ್ಸಪ್ರೆಸ್‌ LHB ಮೇಲ್ದರ್ಜೆಗೆ ಯಾವಾಗ?

ಹುಬ್ಬಳ್ಳಿ - ಬೆಂಗಳೂರು ಜನಶತಾಬ್ದಿ ಎಕ್ಸಪ್ರೆಸ್‌ ರೈಲು| 18 ವರ್ಷದಿಂದ ಐಸಿಎಫ್‌ ಬೋಗಿಗಳು| ಸಂಕೀರ್ಣ, ಸೂಕ್ತ ಸೌಲಭ್ಯವಿಲ್ಲದೆ ಜನತೆಗೆ ಬೇಸರ| 100 ಕಿಮೀ ದಾಟುತ್ತಿದ್ದಂತೆ ಅಲುಗಾಡುತ್ತಿವೆ ಬೋಗಿಗಳು|

When Hubballi Bengaluru SuperFast Express Train LHB Upgrade

ಮಯೂರ ಹೆಗಡೆ

ಹುಬ್ಬಳ್ಳಿ(ಫೆ.26): ಹುಬ್ಬಳ್ಳಿ - ಬೆಂಗಳೂರು ಜನಶತಾಬ್ದಿ ಎಕ್ಸಪ್ರೆಸ್‌ ರೈಲ್ವೆ ಬೋಗಿಗಳನ್ನು ಎಲ್‌ಎಚ್‌ಬಿಗೆ (ಲಿಂಕ್‌ ಹಾಫ್‌ಮನ್‌ ಬುಷ್‌) ಮೇಲ್ದರ್ಜೆಗೇರಿಸುವ ನಿತ್ಯ ಪ್ರಯಾಣಿಕರ ಬೇಡಿಕೆ ಬೇಡಿಕೆಯಾಗಿಯೇ ಉಳಿದಿದೆ.

ಬಹುಬೇಗ ಹುಬ್ಬಳ್ಳಿ-ಬೆಂಗಳೂರು ಸಂಪರ್ಕಿಸಲು ಸಾಧ್ಯವಾಗಿಸುವ ಈ ಸೂಪರ್‌ಫಾಸ್ಟ್‌ ಎಕ್ಸಪ್ರೆಸ್‌ ರೈಲಿನಲ್ಲಿ ಹುಬ್ಬಳ್ಳಿ ಸೇರಿ ಸುತ್ತಮುತ್ತಲಿನ ನೂರಾರು ಜನತೆ ಸಂಚರಿಸುತ್ತಾರೆ. ಬೆಳಗ್ಗೆ 6ಗಂಟೆಗೆ ಬೆಂಗಳೂರಿನಿಂದ ಆಗಮಿಸುವ ಇದು ಮಧ್ಯಾಹ್ನ 1.45ಕ್ಕೆ ಹುಬ್ಬಳ್ಳಿ ತಲುಪುತ್ತದೆ. ಮಧ್ಯಾಹ್ನ 2ಗಂಟೆಗೆ ಹುಬ್ಬಳ್ಳಿಯಿಂದ ಹೊರಟು ರಾತ್ರಿ 9.30ಕ್ಕೆ ತಲುಪುತ್ತದೆ. ಹೀಗಾಗಿ ಹೆಚ್ಚಿನ ಪ್ರಯಾಣಿಕರು ಇದರಲ್ಲಿ ಸಂಚರಿಸುತ್ತಾರೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

2002ರ ನವೆಂಬರ್‌ನಿಂದ ಆರಂಭವಾದ ಜನಶತಾಬ್ದಿ ಎಕ್ಸಪ್ರೆಸ್‌ ಸರಣಿಯ ಈ ರೈಲು ಐಸಿಎಫ್‌ (ಇಂಟಿಗ್ರಲ್‌ ಕೋಚ್‌ ಫ್ಯಾಕ್ಟರಿ) ಬೋಗಿಗಳನ್ನು ಹೊಂದಿದೆ. ಕಳೆದ 18 ವರ್ಷದಿಂದಲೂ ಇದೇ ಬೋಗಿಗಳು ಸೇವೆಯಲ್ಲಿವೆ. ಈ ಸರಣಿಯಲ್ಲಿ ವಿವಿಧೆಡೆ ಆರಂಭವಾದ ಹಲವು ರೈಲುಗಳು ಪ್ರಸ್ತುತ ಮೇಲ್ದರ್ಜೆಗೇರಿವೆ. ಆದರೆ, ಈ ರೈಲು ಮಾತ್ರ ಹಾಗೆಯೇ ಉಳಿದಿದೆ. ವಾರಕ್ಕೊಮ್ಮೆ ಸಂಚರಿಸುವ ಯಶವಂತಪುರ ಹುಬ್ಬಳ್ಳಿ ಎಕ್ಸಪ್ರೆಸ್‌ ರೈಲು ಎಲ್‌ಎಚ್‌ಬಿ ಬೋಗಿಗಳನ್ನು ಒಳಗೊಂಡಿದೆ.

ಕಳೆದ ವರ್ಷದಿಂದ ಹುಬ್ಬಳ್ಳಿ ಧಾರವಾಡ - ಬೆಂಗಳೂರು ಜನಶತಾಬ್ದಿ ಎಕ್ಸಪ್ರೆಸ್‌ ರೈಲನ್ನು ಕೂಡ ಎಲ್‌ಎಚ್‌ಬಿಗೆ ಮೇಲ್ದರ್ಜೆಗೆ ಏರಿಸುವಂತೆ ಪ್ರಯಾಣಿಕರು ಒತ್ತಾಯಿಸುತ್ತಿದ್ದಾರೆ. 2019ರ ಸೆಪ್ಟೆಂಬರ್‌ ವೇಳೆಗೆ ಈ ರೈಲಿನ ಸೌಲಭ್ಯವನ್ನು ಮೇಲ್ದರ್ಜೆಗೇರಿಸುವ ಭರವಸೆಯನ್ನು ನೈಋುತ್ಯ ರೈಲ್ವೆ ನೀಡಿತ್ತಾದರೂ ಈ ವರೆಗೂ ಸಮಸ್ಯೆ ಹಾಗೆಯೇ ಉಳಿದಿದೆ. ಹೀಗಾಗಿ ಟ್ವಿಟ್ಟರ್‌ನಲ್ಲಿ ಈ ಕುರಿತು ಬೇಡಿಕೆಯನ್ನು ಪ್ರಯಾಣಿಕರು ಪ್ರತಿನಿತ್ಯ ರಾಜ್ಯ ರೈಲ್ವೆ ಸಚಿವ ಸುರೇಶ ಅಂಗಡಿ ಹಾಗೂ ವಿಭಾಗೀಯ ರೈಲ್ವೆ ಮುಖ್ಯಸ್ಥರಿಗೆ ಸಲ್ಲಿಸುತ್ತಿದ್ದಾರೆ.

ಸಮಸ್ಯೆ ಏನು?

ಐಸಿಎಫ್‌ ಮಾದರಿ ಬೋಗಿಗಳು ಎಲ್‌ಎಚ್‌ಬಿಗೆ ಹೋಲಿಸಿದರೆ ಸಾಕಷ್ಟುಸಂಕೀರ್ಣವಾಗಿವೆ. ಹಳೆ ಮಾದರಿಯ ಆಸನಗಳಲ್ಲಿ ಸಂಚರಿಸುವುದು ಕಷ್ಟದಾಯಕವಾಗಿದೆ ಎಂದು ಪ್ರಯಾಣಿಕರು ಬೇಸರ ವ್ಯಕ್ತಪಡಿಸುತ್ತಾರೆ. ಮುಖ್ಯವಾಗಿ ಮಾರ್ಗವನ್ನು 110-120 ವೇಗಕ್ಕೆ ಅನುಗುಣವಾಗುವಂತೆ ಮೇಲ್ದರ್ಜೆಗೇರಿಸಲಾಗಿದೆ. ರೈಲು ನೂರು ಕಿಮೀ ದಾಟುತ್ತಿದ್ದಂತೆ ಬೋಗಿಗಳು ತೀವ್ರ ಸ್ವರೂಪದಲ್ಲಿ ಅಲುಗಾಡುತ್ತಿದ್ದು, ಒಳಗೆ ನಡೆದಾಡುವುದು ಹೋಗಲಿ ಕುಳಿತುಕೊಳ್ಳುವುದು ಕೂಡ ನರಕದ ಅನುಭವ ಉಂಟಾಗುತ್ತಿದೆ ಎಂದು ಪ್ರಯಾಣಿಕ ವಾಗೀಶ ಆತ್ರೇಯ ಟ್ವಿಟ್ಟರ್‌ನಲ್ಲಿ ಬೇಸರ ತೋಡಿಕೊಂಡಿದ್ದಾರೆ.

ಹುಬ್ಬಳ್ಳಿ ಧಾರವಾಡ - ಬೆಂಗಳೂರು ಜನಶತಾಬ್ದಿ ಎಕ್ಸಪ್ರೆಸ್‌ ನೈಋುತ್ಯ ರೈಲ್ವೆಯ ಮುಖ್ಯ ಮಾರ್ಗ. ಇಲಾಖೆ ಇದನ್ನು ಎಲ್‌ಎಚ್‌ಬಿ ಮೇಲ್ದರ್ಜೆಗೇರಿಸಬೇಕು. ಈ ಕುರಿತು ಟ್ವಿಟ್ಟರ್‌ ಟ್ರೆಂಡ್‌ ಮಾಡಲು ಯೋಜಿಸಲಿದ್ದೇವೆ ಎನ್ನುತ್ತಾರೆ ಪ್ರಯಾಣಿಕ ಡಿ.ಆರ್‌.ಶಂಕರ್‌ ಹೇಳುತ್ತಾರೆ.

ಎಲ್‌ಎಚ್‌ಬಿ

ವಿವಿಧ ರೈಲ್ವೆ ವಲಯಗಳು ತಮ್ಮ ಮಾರ್ಗದ ರೈಲುಗಳನ್ನು ಜರ್ಮನ್‌ ವಿನ್ಯಾಸದ ಎಲ್‌ಎಚ್‌ಬಿಗೆ ಅಭಿವೃದ್ಧಿಪಡಿಸುತ್ತಿವೆ. ನೈಋುತ್ಯ ರೈಲ್ವೆ ಕೂಡ 2019ರಲ್ಲಿ 10 ರೈಲುಗಳನ್ನು ಲಿಂಕ್‌ ಹಾಫ್‌ಮನ್‌ ಬುಷ್‌ಗೆ ಮೇಲ್ದರ್ಜೆಗೇರಿಸಿವೆ. ಈಚೆಗೆ ಚೆನ್ನೈ ವಿಜಯವಾಡ ಜನಶತಾಬ್ದಿ ಎಕ್ಸಪ್ರೆಸ್‌ ಕೂಡ ಎಲ್‌ಎಚ್‌ಬಿ ದರ್ಜೆಗೇರಿದೆ. ಹವಾನಿಯಂತ್ರಿತ ವ್ಯವಸ್ಥೆ, ವಿಶಾಲ ಒಳಾಂಗಣ ಸೌಲಭ್ಯ ಕೂಡ ಇದರಲ್ಲಿದ್ದು, ಪ್ರಯಾಣಿಕರ ಸ್ನೇಹಿ ಎನಿಸಿದೆ. ಎಚ್‌ಒಜಿ (ಹೆಡ್‌ ಆನ್‌ ಜನರೇಶನ್‌) ತಂತ್ರಜ್ಞಾನವೂ ಅಡಕವಾಗಿದ್ದು, ಇದರಿಂದ ವಾರ್ಷಿಕ . 84 ಕೋಟಿ ಉಳಿತಾಯವಾಗಿದೆ.

ಹುಬ್ಬಳ್ಳಿ ಧಾರವಾಡ - ಬೆಂಗಳೂರು ಜನಶತಾಬ್ದಿ ಎಕ್ಸಪ್ರೆಸ್‌ ನೈಋುತ್ಯ ರೈಲ್ವೆಯನ್ನು ಮೇಲ್ದರ್ಜೆಗೇರಿಸಲು ಸಾಕಷ್ಟುಒತ್ತಾಯಿಸುತ್ತಿದ್ದೇವೆ. ಆದರೆ, ಇಲಾಖೆ ನಿರ್ಲಕ್ಷ್ಯ ತೋರುತ್ತಿದೆ ಪ್ರಯಾಣಿಕ ವಿಷ್ಣು ಗಾಯಕವಾಡ ಎಂದು ಹೇಳಿದ್ದಾರೆ.
ಈ ಕುರಿತು ರೈಲ್ವೆ ಕೋಚ್‌ ಫ್ಯಾಕ್ಟರಿಗೆ ಹಿಂದೆಯೇ ಇಲಾಖೆಯಿಂದ ತಿಳಿಸಲಾಗಿದೆ. ಎಲ್‌ಎಚ್‌ಬಿ ಬೋಗಿಯಲ್ಲಿ ಕುಳಿತುಕೊಳ್ಳುವ ಆಸನಗಳು ಸದ್ಯ ನಿರ್ಮಾಣ ಆಗುತ್ತಿಲ್ಲ. ಹೊಸ ತೇಜಸ್‌ ರೈಲ್ವೆಗಳು ಈ ಮಾದರಿಯಲ್ಲಿ ನಿರ್ಮಾಣವಾಗುತ್ತಿವೆ ಎಂದು ನೈಋುತ್ಯ ರೈಲ್ವೆ ವಲಯ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಇ. ವಿಜಯಾ ತಿಳಿಸಿದ್ದಾರೆ. 
 

Latest Videos
Follow Us:
Download App:
  • android
  • ios