ವಿಧಾನ ಪರಿಷತ್‌ ಸದಸ್ಯ ಎಚ್‌. ವಿಶ್ವನಾಥ್‌ ಅವರು ಮೈಸೂರಿಗೆ ಹೆಗ್ಗುರುತಾಗುವ ಯಾವ ಕೆಲಸ ಮಾಡಿದ್ದಾರೆ? ಏನು ಕೊಡುಗೆ ನೀಡಿದ್ದಾರೆ ಹೇಳಲಿ ಎಂದು ಬಿಜೆಪಿ ವಕ್ತಾರ ಎಂ.ಎ. ಮೋಹನ್‌ ಪ್ರಶ್ನಿಸಿದರು.

ಮೈಸೂರು : ವಿಧಾನ ಪರಿಷತ್‌ ಸದಸ್ಯ ಎಚ್‌. ವಿಶ್ವನಾಥ್‌ ಅವರು ಮೈಸೂರಿಗೆ ಹೆಗ್ಗುರುತಾಗುವ ಯಾವ ಕೆಲಸ ಮಾಡಿದ್ದಾರೆ? ಏನು ಕೊಡುಗೆ ನೀಡಿದ್ದಾರೆ ಹೇಳಲಿ ಎಂದು ಬಿಜೆಪಿ ವಕ್ತಾರ ಎಂ.ಎ. ಮೋಹನ್‌ ಪ್ರಶ್ನಿಸಿದರು.

ನಗರದ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಶ್ವನಾಥ್‌ ಅವರು ಮೈಸೂರಿಗೆ ಅಗತ್ಯವಿರುವ ಮೂಲಭೂತ ಸೌಲಭ್ಯ ಕಲ್ಪಿಸಲು ಏನು ಮಾಡಿದರು? ಈಗ ಪ್ರಚಾರಕ್ಕಾಗಿ ಹಾದಿ ಬೀದಿಯಲ್ಲಿ ನಿಂತು ಕೆಲಸಕ್ಕೆ ಬಾರದ ವಿಷಯಗಳ ಬಗ್ಗೆ ಮಾತನಾಡುತ್ತಿದ್ದಾರೆ. ಕಾಂಗ್ರೆಸ್‌, ಜೆಡಿಎಸ್‌, ಬಿಜೆಪಿಯನ್ನು ಸುತ್ತು ಹಾಕಿರುವ ವಿಶ್ವನಾಥ್‌ ಮೂರು ಪಕ್ಷದಲ್ಲಿಯೂ ಒಳ್ಳೆಯ ಅಧಿಕಾರಿ ಅನುಭವಿಸಿ, ಎಲ್ಲಾ ರೀತಿಯ ಸವಲತುನ್ನು ತಮಗೆ ಮತ್ತು ತಮ್ಮ ಕುಟುಂಬಕ್ಕೆ ಮಾಡಿಕೊಂಡು, ಈಗ ನೆರೆ ಮನೆಯನ್ನು ಉದ್ಧಾರ ಮಾಡಲು, ತಾವಿರುವ ಮನೆಯನ್ನೇ ಹಾಳು ಮಾಡುವ ಬುದ್ಧಿ ಪ್ರದರ್ಶಿಸುತ್ತಿದ್ದಾರೆ ಎಂದು ಟೀಕಿಸಿದರು.

ವಿಜಯಶಂಕರ್‌ ಸಂಸದರಾದಾಗ ಮೈಸೂರಿಗೆ ವಿಮಾನ ನಿಲ್ದಾಣ ತಂದರು. ಪ್ರತಾಪ್‌ ಸಿಂಹ ಸಂಸದರಾಗಿ ಇಲ್ಲಿ ವಿಮಾನಗಳ ಹಾರಾಟ ಹೆಚ್ಚಿಸಿದರು. ಈಗ ವಿಸ್ತರಣೆಗೆ ಮುಂದಾಗಿದ್ದಾರೆ. ನೀವೇನು ಮಾಡಿದ್ದೀರಾ?. ನರೇಂದ್ರ ಮೋದಿ ಪ್ರಧಾನಿಯಾದ ನಂತರ 16 ಸೂಪರ್‌ ಎಕ್ಸೆ$್ೊ್ರಸ್‌ ಹೈವೇ ಆಗಿವೆ. . 10 ಸಾವಿರ ಕೋಟಿ ವೆಚ್ಚದಲ್ಲಿ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ ವೇ ಆಗಿದೆ. ಜೋಡಿ ರೈಲು ಮಾರ್ಗ ಪೂರ್ಣಗೊಳಿಸಲು, ಶ್ರೀರಂಗಪಟ್ಟಣದ ಟಿಪ್ಪು ಶಸ್ತ್ರಗಾರವನ್ನು ಸ್ಥಳಾಂತರಿಸಲು ಸಂಸದ ಪ್ರತಾಪ್‌ ಸಿಂಹ ಬರಬೇಕಾಯಿತು. ಈಗ ಅವರನ್ನು ಎಷ್ಟು ಮನೆ ಕಟ್ಟುತ್ತಿದ್ದೀಯಾಪ್ಪ ಪ್ರತಾಪ್‌ ಸಿಂಹ ಎಂದು ಕೇಳುತ್ತಾರೆ. ವಿಶ್ವನಾಥ್‌ ವಾರ್ಡ್‌ಗೆ ಒಂದು ಮನೆ ಕಟ್ಟಿಸಿದ್ದಾರೆ ಎಂಉ ವಾಗ್ಧಾಳಿ ನಡೆಸಿದರು.

ಟೋಲ್‌ ಸಂಗ್ರಹ ಎಂಬುದು ಹೊಸದೇನು ಅಲ್ಲ. ರಸ್ತೆಯ ನಿರ್ವಹಣೆಗೆ ಕಾನೂನಿನ ಅಡಿಯಲ್ಲಿಯೇ ಇರುವ ಪದ್ಧತಿ. ಇದನ್ನು ವಿರೋಧಿಸಿ ಏಕಾಂಗಿಯಾಗಿ ಪ್ರತಿಭಟನೆ ಮಾಡ್ತಾರೆ. ಇದೇನು ಸಾಧನೆಯಲ್ಲ. ಅವರು ಏಕಾಂಗಿಯೇ ಇರುವ ಪರಿಸ್ಥಿತಿ ಬಂದಿದೆ. ಅವರೊಂದಿಗೆ ಯಾರೂ ಹೋಗುವುದಿಲ್ಲ. ಮೋದಿ ಅವರು ಹೆಸರು ಹೇಳಲು ಯೋಗ್ಯ ಇಲ್ಲದ ವಿಶ್ವನಾಥ್‌. ಐದಾರು ವರ್ಷಗಳಲ್ಲಿ ನರೇಂದ್ರ ಮೋದಿ ಸಾಕಷ್ಟುಯೋಜನೆಗಳನ್ನು, ಜನಪರ ಕೆಲಸಗಳನ್ನು ಮಾಡಿದ್ದಾರೆ. ನೀನೇನು ಮಾಡಿದ್ದೀಯಾ? ಹೇಳಯ್ಯ ಎಂದು ಕಟುವಾಗಿ ಪ್ರಶ್ನಿಸಿದರು.

ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಮುಖಂಡರಾದ ಜಯಪ್ರಕಾಶ್‌ (ಜೆಪಿ), ವಾಣೀಶ್‌ ಕುಮಾರ್‌, ಪ್ರದೀಪ್‌ ಕುಮಾರ್‌, ಮಹೇಶ್‌ ರಾಜೇ ಅರಸ್‌, ಕೇಬಲ ಮಹೇಶ್‌ ಇದ್ದರು.

ವಿಶ್ವನಾಥ್ ಹಗುರ ಮಾತು ಸಲ್ಲ

ಮೈಸೂರು : ಸಾಂವಿಧಾನಿಕ ಹುದ್ದೆಯಲ್ಲಿರುವ ದೇಶದ ಹೆಮ್ಮೆಯ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಬಗ್ಗೆ ಹಗುರವಾಗಿ ಮಾತನಾಡಿರುವ ವಿಧಾನ ಪರಿಷತ್‌ ಸದಸ್ಯ ಎಚ್‌. ವಿಶ್ವನಾಥ್‌ ಹೇಳಿಕೆಯನ್ನು ನಗರ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಬಿ.ಎಂ. ಸಂತೋಷ್‌ಕುಮಾರ್‌ ಖಂಡಿಸಿದ್ದಾರೆ.

ಮೈಸೂರು-ಬೆಂಗಳೂರು ರಸ್ತೆ ವಿಚಾರವಾಗಿ ಮಾತನಾಡುವಾಗ ಬಹಳ ತಿಳಿದವರಂತೆ ಮೇಧಾವಿಯಂತೆ ಹರುಕು ಬಾಯಿಯಿಂದ ಮಾತನಾಡುತ್ತಾ, ಮೈಸೂರು-ಬೆಂಗಳೂರು ರಸ್ತೆಗೆ ನರೇಂದ್ರ ಮೋದಿಯವರ ಅಪ್ಪನ ದುಡ್ಡ, ಪ್ರತಾಪ್‌ ಅವರ ಅಪ್ಪನ ದುಡ್ಡಲ್ಲಿ ಮಾಡಿರೋದ ಅಂತ ಹೇಳುತ್ತಾ ಸಾಂವಿಧಾನಿಕ ಹುದ್ದೆಯಲ್ಲಿರುವ ನರೇಂದ್ರ ಮೋದಿ ಅವರಿಗೆ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ. ಈ ಹೇಳಿಕೆಯಿಂದ ನರೇಂದ್ರ ಮೋದಿ ಅವರನ್ನು ಪ್ರೀತಿಸುವ ಅಪಾರ ಅಭಿಮಾನಿಗಳಿಗೆ ನೋವನ್ನುಂಟು ಮಾಡಿದ್ದಾರೆ. ನರೇಂದ್ರ ಮೋದಿಯವರ ವ್ಯಕ್ತಿತ್ವವನ್ನು ಭಾರತ ದೇಶವಲ್ಲ, ಇಡೀ ವಿಶ್ವೇ ಕೊಂಡಾಡುತ್ತಿರುವಾಗ ದೇಶದ ಒಳಗಿರುವ ಇಂತಹ ಕುತಂತ್ರಿಗಳು ಅವರ ನಾಲಿಕೆಯನ್ನು ಹರಿಯಬಡುತ್ತಾರೆ, ಇಂತಹ ಬಾಳಿಶ ಹೇಳಿಕೆಗಲಿಂದ ಮೋದಿ ಅವರ ವ್ಯಕ್ತಿತ್ವಕ್ಕೆ ಯಾವುದೇ ಧಕ್ಕೆ ಆಗುವುದಿಲ್ಲ ಎಂದು ಅವರು ತಿಳಿಸಿದ್ದಾರೆ.

ಯಾರ ಬಗ್ಗೆ ಮಾತನಾಡುತ್ತಿದ್ದೇನೆ ಎಂಬ ಅರಿವಿಲ್ಲದಂತೆ ಮಾನಸಿಕ ಸ್ಥಿತಿ ಕಳೆದುಕೊಂಡವರಂತೆ ಮಾತನಾಡುವುದು ಎಚ್‌. ವಿಶ್ವನಾಥ್‌ ಅವರಿಗೆ ಒಂದು ಚಾಳಿಯಾಗಿಬಿಟ್ಟಿದೆ. ಸಂಸದ ಪ್ರತಾಪ್‌ ಸಿಂಹ ಅವರನ್ನು ನಿಂದಿಸುವ ಇವರು, ತಾವೇ ಸತ್ಯಹರಿಶ್ಚಂದ್ರರಂತೆ ಮಾತನಾಡುತ್ತಾರೆ. ಆದರೆ ಇವರು ಯಾವುದೇ ಪಕ್ಷಕ್ಕೂ ಲಾಯಲಿಟಿ ಇಲ್ಲದ ವ್ಯಕ್ತಿ ಇತ್ತೀಚಿನ ದಿನಗಳಲ್ಲಿ ಸಮಾಜಕ್ಕೆ ಗೊತ್ತಾಗುತ್ತಿದೆ ಎಂದು ಅವರು ಟೀಕಿಸಿದ್ದಾರೆ.

ವಿಶ್ವನಾಥ್‌ ಅವರು ತಮ್ಮ ನಾಲಿಗೆ ಅರಿಯ ಬಿಡುವುದನ್ನು ನಿಲ್ಲಿಸಬೇಕು, ಇಲ್ಲವಾದಲ್ಲಿ ವಿಧಾನ ಪರಿಷತ್‌ ಸದಸ್ಯ ಎಚ್‌. ವಿಶ್ವನಾಥ್‌ ಅವರಿಗೆ ತಕ್ಕಪಾಠವನ್ನು ಕಲಿಸಬೇಕಾಗುತ್ತದೆ ಎಂದು ಅವರು ತಿಳಿಸಿದ್ದಾರೆ.