ಬೆಂಗಳೂರು ನಕಲಿ ಟ್ರಾಫಿಕ್ ಪೊಲೀಸರು; ವಾಟ್ಸಾಪ್‌ಗೆ ಸಂಚಾರಿ ನಿಯಮ ಉಲ್ಲಂಘಿಸಿದ ಫೋಟೋ ಕಳಿಸಿ ದಂಡ ವಸೂಲಿ

ಬೆಂಗಳೂರಿನಲ್ಲಿ ಸಂಚಾರಿ ನಿಯಮ ಉಲ್ಲಂಘಿಸುವ ವಾಹನ ಸವಾರರಿಗೆ ವಾಟ್ಸಾಪ್ ಮೂಲಕ ಫೋಟೋ ಕಳಿಸಿ ದಂಡ ವಸೂಲಿ ಮಾಡುತ್ತಿದ್ದ ಪಶ್ಚಿಮ ಬಂಗಾಳ ಮೂಲದ ನಕಲಿ ಟ್ರಾಫಿಕ್ ಪೊಲೀಸರನ್ನು ಬಂಧಿಸಲಾಗಿದೆ.

West Bengal gang fine collect in name of Bengaluru traffic police for traffic rules violations sat

ಬೆಂಗಳೂರು (ಮೇ 23): ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ 1 ಕೋಟಿಗೂ ಅಧಿಕ ವಾಹನಗಳಿವೆ. ಪ್ರತಿನಿತ್ಯ ಸಾವಿರಾರು ವಾಹನ ಸವಾರರು ಸಂಚಾರ ನಿಯಮ ಉಲ್ಲಂಘನೆ ಮಾಡುತ್ತಲೆ ಇರುತ್ತಾರೆ. ಇದನ್ನು ಬಂಡವಾಳ ಮಾಡಿಕೊಂಡ ಪಶ್ಚಿಮ ಬಂಗಾಳದ ಗ್ಯಾಂಗ್ ಟ್ರಾಫಿಕ್ ನಿಯಮ ಉಲ್ಲಂಘನೆ ಮಾಡಿದ ವಾಹನ ಸವಾರರ ವಾಟ್ಸಾಪ್‌ಗೆ ಸಂಚಾರ ನಿಯಮ ಉಲ್ಲಂಘನೆ ಮಾಡಿದ ಫೋಟೋ ಕಳಿಸಿ ದಂಡ ವಸೂಲಿ ಮಾಡುತ್ತಿದ್ದುದು ಕಂಡುಬಂದಿದೆ.

ಬೆಂಗಳೂರಿನಲ್ಲಿ ರಾಜ್ಯವನ್ನು ಬಿಟ್ಟು ರಾಜ್ಯಕ್ಕೆ ದುಡಿಯಲು ಬಂದ ಗ್ಯಾಂಗ್‌ವೊಂದು ಬರಬರುತ್ತಾ ಸುಲಭ ಮಾರ್ಗದಲ್ಲಿ ವಂಚನೆಯ ಮೂಲಕ ಹಣ ಸಂಪಾದನೆ ಮಾಡುವ ಮಾರ್ಗವನ್ನು ಕಂಡುಕೊಂಡಿದ್ದಾರೆ. ಇದಕ್ಕಾಗಿ ವಂಚಕರು ಆಯ್ಕೆ ಮಾಡಿಕೊಂಡದ್ದು ಮಾತ್ರ ವಾಹನ ಸವಾರರನ್ನು. ಬೆಂಗಳೂರಿನಲ್ಲಿ ಎಷ್ಟು ಜನರು ವಾಸವಾಗಿದ್ದಾರೋ ಅಷ್ಟೇ ಸಂಖ್ಯೆಯ ವಾಹನಗಳು ಕೂಡ ಬೆಂಗಳೂರು ರಸ್ತೆಯಲ್ಲಿ ಸಂಚಾರ ಮಾಡುತ್ತವೆ. 60 ಲಕ್ಷಕ್ಕೂ ಅಧಿಕ ಬೈಕ್‌ಗಳು ಸಂಚಾರ ಮಾಡುತ್ತಿವೆ. ಇನ್ನು ಕಾರುಗಳು, ಬಸ್ಸುಗಳು, ಟೆಂಪೋ ಟ್ರಾವೆಲ್ಲರ್, ಆಟೋಗಳು, ಲಾರಿಗಳು, ಗೂಡ್ಸ್ ವಾಹನಗಳು ಸೇರಿ ಎಲ್ಲ ಸುಮಾರು , 35 ಲಕ್ಷಕ್ಕೂ ಅಧಿಕ ವಾಹನಗಳು ಸಂಚಾರ ಮಾಡುತ್ತಿವೆ.

ಜೈಲಿನಲ್ಲಿದ್ದರೂ ಹಪ್ತಾ ವಸೂಲಿ ಕೈಬಿಡದ ವಿಲ್ಸನ್ ಗಾರ್ಡನ್ ನಾಗ; ಬಿಲ್ಡರ್‌ಗಳಿಗೆ ಜೀವ ಬೆದರಿಕೆ

ಒಟ್ಟಾರೆ ಒಂದು ಲಕ್ಷಕ್ಕೂ ಅಧಿಕ ವಾಹನಗಳನ್ನು ಹೊಂದಿದ ಬೆಂಗಳೂರಿನಲ್ಲಿ ಟ್ರಾಫಿಕ್ ನಿಯಮ ಉಲ್ಲಂಘನೆ ಮಾಡಿದ ವಾಹನ ಸವಾರರಿಂದ ಸಂಚಾರಿ ಪೊಲೀಸ್ ಇಲಾಖೆಗೆ ಕೋಟಿ ಕೋಟಿ ರೂ. ಆದಾಯ ಬರುತ್ತಿದೆ. ಈ ಹಿನ್ನೆಲೆಯಲ್ಲಿ ವಾಹನ ಸವಾರರಿಂದಲೂ ನಾವು ಕೂಡ ವಂಚಿಸಿ ಹಣ ಮಾಡಬಹುದು ಎಂದು ಯೋಜನೆ ರೂಪಿಸಿದ್ದಾರೆ. ಇದಕ್ಕೆ ಬೆಂಗಳೂರು ಪೊಲೀಸರು ವಾಹನ ಸವಾರರ ಅನುಕೂಲಕ್ಕಾಗಿ ಅಭಿವೃದ್ಧಿಪಡಿಸಿದ ಟ್ರಾಫಿಕ್ ಫೈನ್ ಆ್ಯಪ್ ಹಾಗೂ ಕೇಂದ್ರ ಸರ್ಕಾರದ ವಾಹನ ನೋಂದಣಿಯ ಮಾಹಿತಿಗಾಗಿ ಲಭ್ಯವಿರುವ ವೆಬ್‌ಸೈಟ್‌ ಬಳಸಿಕೊಂಡಿದ್ದಾರೆ. 

ಮೊಬೈಲ್‌ಗೆ ಯುಪಿಐ ಐಡಿ ಕಳಿಸಿ ದಂಡ ವಸೂಲಿ: ವಾಹನ ಸವಾರರು ಟ್ರಾಫಿಕ್ ಸಿಗ್ನಲ್‌ಗಳಲ್ಲಿ ಪ್ರಮುಖ ರಸ್ತೆಗಳಲ್ಲಿ ಹಾಗೂ ಇತರೆ ಸಣ್ಣ ಪುಟ್ಟ ರಸ್ತೆಯಲ್ಲಿ ಸಂಚಾರ ನಿಯಮ ಉಲ್ಲಂಘಿಸಿದವರ ಫೋಟೋಗಳನ್ನು ತೆಗೆದುಕೊಳ್ಳುತ್ತಿದ್ದರು. ನಂತರ, ವಾಹನ ಸವಾರರ ಮೊಬೈಲ್ ನಂಬರ್ ಹುಡುಕಿ ಅವರಿಗೆ ವಾಟ್ಸಾಪ್ ಮೂಲಕ ಟ್ರಾಫಿಕ್ ರೂಲ್ಸ್ ಉಲ್ಲಂಘಿಸಿದ ಫೋಟೋಗಳನ್ನು ಕಳಿಸಿ ದಂಡದ ಮೊತ್ತವನ್ನೂ ಕಳಿಸುತ್ತಿದ್ದರು. ಇನ್ನು ಬಹುತೇಕರಿಗೆ ವಾಟ್ಸಾಪ್ ಮೂಲಕ ಯುಪಿಐ ಐಡಿ ಹಾಗೂ ಕ್ಯೂ ಆರ್ ಕೋಡ್ ಸ್ಕ್ಯಾನ್ ಕಳಿಸಿ ಮೊಬೈಲ್ ಮೂಲಕವೇ ಹಣ ಪಾವತಿಸಿಕೊಳ್ಳುತ್ತಿದ್ದರು.

Bengaluru Rave Party: ಡ್ರಗ್ಸ್ ಸೇವಿಸಿ ಸಿಕ್ಕಿಬಿದ್ದ ನಟಿ ಆಶಿ ರಾಯ್‌ಗೆ ಸಿಸಿಬಿ ನೊಟೀಸ್

ಹೀಗೆ ಹಣ ಪಾವತಿ ಮಾಡಿಕೊಳ್ಳುತ್ತಿದ್ದ ವೇಳೆ ಒಬ್ಬ ವಾಹನ ಸವಾರರು ನೀವು ಟ್ರಾಫಿಕ್ ಪೊಲೀಸರು ಎಂಬುದಕ್ಕೆ ನಿಮ್ಮ ಪೊಲೀಸ್ ಐಡಿ ಕಾರ್ಡ್ ಕಳಿಸಿ ಎಂದು ಕೇಳಿದ್ದಾರೆ. ಆಗ ಕರ್ನಾಟಕ ಪೊಲೀಸ್ ಹೆಡ್ ಕಾನ್‌ಸ್ಟೇಬಲ್ ಎಂಬುದಾಗಿ ನಕಲಿ ಐಡಿ ಕಾರ್ಡ್ ತಯಾರಿಸಿಕೊಂಡಿದ್ದನ್ನು ವಾಟ್ಸಾಪ್‌ಗೆ ಕಳಿಸಿದ್ದಾರೆ. ಕೂಡಲೆ ಇದು ನಕಲಿ ಜಾಲ ಎಂಬುದನ್ನು ಅರಿತ ವಾಹನ ಸವಾರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಈ ಕುರಿತು ಪ್ರಕರಣ ದಾಖಲಿಸಿಕೊಂಡ ಪೊಲೀಸರು ಬೆಂಗಳೂರು ಈಶಾನ್ಯ ವಿಭಾಗದ ಸೈಬರ್ ಕ್ರೈಮ್ ಪೊಲೀಸರು ವಂಚನೆ ಮಾಡುತ್ತಿದ್ದ ಪಶ್ಚಿಮ ಬಂಗಾಳದ ಮೂವರನ್ನು ಬಂಧಿಸಿದ್ದಾರೆ.

ಟ್ರಾಫಿಕ್ ಪೊಲೀಸರು ಅಂತಾ ಫೈನ್ ಕಟ್ಟಿಸಿಕೊಳ್ತಿದ್ದ ನಕಲಿ ಅಧಿಕಾರಿಗಳ ಬಂಧನ: ಈಶಾನ್ಯ ವಿಭಾಗದ ಸೈಬರ್ ಕ್ರೈಂ ಪೊಲೀಸರು ಪಶ್ಚಿಮ ಬಂಗಾಳ ಮೂಲದ ರಂಜನ್ ಕುಮಾರ್ ಪೋರ್ಬಿ ಬಿನ್ ಬಹ್ಮದೇವ್ ಪೋರ್ಬಿ, ಇಸ್ಮಾಯಿಲ್ ಅಲಿ ಬಿನ್ ಅನಸರ್ ಅಲಿ ಹಾಗೂ ಸುಭಿರ್ ಮಲ್ಲಿಕ್ ಬಿನ್ ಸುಶೀಲ್ ಮಲ್ಲಿಕ್ ಎಂಬ ವಂಚಕರನ್ನು ಬಂಧಿಸಿದ್ದಾರೆ.

Latest Videos
Follow Us:
Download App:
  • android
  • ios