Asianet Suvarna News Asianet Suvarna News

ಜೈಲಿನಲ್ಲಿದ್ದರೂ ಹಪ್ತಾ ವಸೂಲಿ ಕೈಬಿಡದ ವಿಲ್ಸನ್ ಗಾರ್ಡನ್ ನಾಗ; ಬಿಲ್ಡರ್‌ಗಳಿಗೆ ಜೀವ ಬೆದರಿಕೆ

ಬೆಂಗಳೂರಿನ ಕುಖ್ಯಾತ ರೌಡಿ ವಿಲ್ಸನ್ ಗಾರ್ಡನ್ ನಾಗ ಕೊಲೆ ಕೇಸಿನಲ್ಲಿ ಜೈಲಿನಲ್ಲಿದ್ದುಕೊಂಡೇ ಬಿಲ್ಡರ್‌ಗಳಿಗೆ ಜೀವ ಬೆದರಿಕೆ ಹಾಕಿ ಹಪ್ತಾ ವಸೂಲಿ ಮಾಡುತ್ತಿದ್ದಾನೆ.

Bengaluru rowdy Wilson Garden Naga threaten to builders for monthly hafta sat
Author
First Published May 23, 2024, 11:20 AM IST

ಬೆಂಗಳೂರು (ಮೇ 23): ರಾಜ್ಯ ರಾಜಧಾನಿಯ ಕುಖ್ಯಾತ ರೌಡಿಶೀಟರ್‌ಗಳಲ್ಲಿ ಒಬ್ಬನಾಗಿರುವ ವಿಲ್ಸನ್ ಗಾರ್ಡನ್ ನಾಗನನ್ನು ವಿಧಾನಸಭಾ ಚುನಾವಣಾ ವೇಳೆಯೇ ಕ್ರಿಮಿನಲ್ ಪ್ರಕರಣವೊಂದರಲ್ಲಿ ಜೈಲಿಗಟ್ಟಲಾಗಿದೆ. ಆದರೂ, ಜೈಲಿನಲ್ಲಿದ್ದುಕೊಂಡೇ ರಿಮೋಟ್ ಕಂಟ್ರೋಲ್ ಮೂಲಕ ತಮ್ಮ ಸಹಚರರನ್ನು ಬಿಟ್ಟು ಬೆಂಗಳೂರಿನಾದ್ಯಂತ ಉದ್ಯಮಿಗಳು, ರಿಯಲ್ ಎಸ್ಟೇಟ್ ಉದ್ಯಮಿಗಳು ಹಾಗೂ ಶ್ರೀಮಂತರಿಂದ ಹಪ್ತಾ ವಸೂಲಿ ಮಾಡುತ್ತಿದ್ದಾನೆ.

ಬೆಂಗಳೂರಿನಲ್ಲಿ ಲೋಕಸಭಾ ಚುನಾವಣೆಯ ಕಾವು ಮುಗಿಯುತ್ತಿದ್ದಂತೆಯೇ ಮತ್ತೆ ಶುರುವಾಯ್ತು ವಿಲ್ಸನ್ ಗಾರ್ಡನ್ ನಾಗನ ಹಾವಳಿ ಶುರುವಾಗಿದೆ. ಜೈಲಿನಲ್ಲಿದ್ದರೂ ತನ್ನ ಹುಡುಗರನ್ನ ಬಿಟ್ಟು ಧಮ್ಕಿ ಬಿಲ್ಡರ್ ಗಳಿಗೆ ಧಮ್ಕಿ ಹಾಕಿ ಹಪ್ತಾ ವಸೂಲಿ ಮಾಡುತ್ತಿದ್ದಾನೆ. ನೀವು ಖರೀದಿಸಿದ ಭೂಮಿಯಲ್ಲಿ ಒಂದು ಸೈಟ್ ಹಾಗೂ ಮಂತ್ಲಿ ಹಫ್ತಾ ಕೊಡಬೇಕು ಎಂದುಜೀವ ಬೆದರಿಕೆ ಹಾಕುತ್ತಿದ್ದಾರೆ. ವಿಲ್ಸನ್ ಗಾರ್ಡನ್ ನಾಗನ ಸಹಚರ ಬ್ಲಾಕ್ ಬಾಲನಿಂದ ಬಿಲ್ಡರ್ ರಾಘವಪ್ಪ ಎಂಬುವವರಿಗೆ ಧಮ್ಕಿ ಹಾಕಿದ ಘಟನೆ ನಡೆದಿದೆ.

ರಾಜ್ಯದ 7 ಪೊಲೀಸರನ್ನು ಕೊಂದ ಮೋಸ್ಟ್ ವಾಂಟೆಡ್ ನಕ್ಸಲ್ ಶಂಕರ ಬಿಬಿಎಂಪಿ ನೌಕರ

ವಿಲ್ಸನ್ ಗಾರ್ಡನ್ ನಾಗನ ಶಿಷ್ಯ ಬ್ಲಾಕ್ ಬಾಲ ಎನ್ನುವವನು ಬಂದು ನಿಮ್ಮ ಹೆಸರಲ್ಲಿರುವ ಜಾಗವನ್ನು ನಮ್ಮ ನಾಗಣ್ಣನ ಹೆಸರಿಗೆ ಬರೆದು ಕೊಡಬೇಕು. ಜೊತೆಗೆ, ಪ್ರತಿ ತಿಂಗಳು ಹಪ್ತಾ ಕೊಡಬೇಕು. ಇಲ್ಲವೆಂದರೆ ನಿನ್ನನ್ನೂ ಒಳಗೊಂಡಂತೆ ನಿಮ್ಮ ಮನೆಯವರನ್ನೂ ಸೇರಿಸಿ ಎಲ್ಲರನ್ನು ಕೊಂದು ಹಾಕೋದಾಗಿ ಬೆದರಿಕೆ ಹಾಕಿದ್ದಾನೆ. ನಮ್ಮ ಮೇಲೆ ವಿಲ್ಸನ ಗಾರ್ಡನ್ ನಾಗನಿಂದ ಪ್ರೆಷರ್ ಇದೆ. ಹೊಂಗಸಂದ್ರದ ಸೈಟನ್ನ ಅವರ ಹೆಸರಿಗೆ ಬರೆದುಕೊಡಬೇಕು ಎಂದು ಧಮ್ಕಿ ಹಾಕಿದ್ದಾರೆ ಎಂದು ರಾಘವಪ್ಪ ಹೇಳಿಕೊಂಡಿದ್ದಾರೆ.

ನಾವು ಬಿಲ್ಡರ್ ಕೆಲಸ ಮಾಡುವುದನ್ನು ನೋಡಿದ ಹಲವು ರೌಡಿಗಳು ನಮ್ಮ ಜಾಗದ ಮೇಲೆ ಹಾಗೂ ತಿಂಗಳ ಹಪ್ತಾಕ್ಕಾಗಿ ಬೆದರಿಕೆ ಹಾಕುತ್ತಿದ್ದಾರೆ. ಈ ಹಿಂದೆ ಮುತ್ತು ಎಂಬಾತ ಪದೇ ಪದೇ ಕರೆ ಮಾಡಿ ಧಮ್ಕಿ ಹಾಕುತ್ತಿದ್ದನು. ಪುಡಿ ರೌಡಿಯ ಬೆದರಿಕೆಗೆ ನಾನು ಬಗ್ಗಿರಲಿಲ್ಲ. ಈಗ ನೇರವಾಗಿ ಕುಖ್ಯಾತ ರೌಡಿ ವಿಲ್ಸನ್ ಗಾರ್ಡನ್ ನಾಗನೇ ತನ್ನ ಸಹಚರ ಬ್ಲಾಕ್ ಬಾಲ ಹಾಗೂ ಇತರರಿಂದ ಧಮ್ಕಿ ಹಾಕಿಸುತ್ತಿದ್ದಾನೆ. ಸೈಟ್ ಬರೆದುಕೊಡದಿದ್ದರೆ ನಿಮ್ಮ ಮನೆಯವರನ್ನ ಅಪಹರಿಸಿ ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾನೆ.

ಪ್ರೀತಿಸಿದ ಹುಡುಗಿಯನ್ನು ಮದುವೆಯಾಗುತ್ತಿದ್ದ ವರನಿಗೆ ಚಾಕು ಇರಿದ ಮಾಜಿ ಪ್ರೇಮಿ

ವಿಧಾನಸಭಾ ಚುನಾವಣೆ ವೇಲೆ ರೌಡಿ ಶೀಟರ್‌ಗಳು ರಾಜಕಾರಣಿಗಳೊಂದಿಗೆ ಕಾಣಿಸಿಕೊಳ್ಳುತ್ತಿದ್ದ ಬಗ್ಗೆ ಭಾರಿ ಚರ್ಚೆ  ಶುರುವಾಗಿತ್ತು. ಅದೇ ವೇಳೆ ವಿಲ್ಸನ್ ಗಾರ್ಡನ್ ನಾಗ ಮಾಜಿ ಸಚಿವ ವಿ. ಸೋಮಣ್ಣ ಅವರ ಮನೆಯಲ್ಲಿ ಕಾಣಿಸಿಕೊಂಡಿದ್ದನು. ಇನ್ನು ಚುನಾವಣೆ ಮುಗಿಯುತ್ತಿದ್ದಂತೆ ಮಹೇಶ್ ಎನ್ನುವವರ ಮರ್ಡರ್ ಕೇಸಿನಲ್ಲಿ ಜೈಲು ಸೇರಿದ್ದನು. ಆದರೆ, ನಾಗ ಜೈಲಿನಲ್ಲಿದ್ದುಕೊಂಡೇ ತನ್ನ ಸಹರರನ್ನು ರಿಮೋಟ್ ಕಂಟ್ರೋಲ್‌ನಂತೆ ಆಪರೇಟ್ ಮಾಡುತ್ತಾ ಹಪ್ತಾ ವಸೂಲಿ ಮಾಡುವುದು ಹಾಗೂ ತನ್ನ ಹವಾ ಮೆಂಟೇನ್ ಮಾಡುವುದನ್ನು ಮುಂದುವರೆಸಿದ್ದಾನೆ. ಇದರಿಂದ ನಮ್ಮ ಉದ್ಯಮಕ್ಕೆ ತೀವ್ರ ತೊಂದರೆ ಆಗುತ್ತಿದ್ದು, ಕುಟುಂಬಕ್ಕೂ ಆತಂಕ ಎದುರಾಗಿದೆ ಎಂದು ಬಿಲ್ಡರ್ ರಾಘವಪ್ಪ ಮಡಿವಾಳ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.

Latest Videos
Follow Us:
Download App:
  • android
  • ios