ಕೋವಿಡ್ : ವಾರಾಂತ್ಯ ಪ್ರವಾಸಿ ತಾಣಗಳಿಗೆ ನಿರ್ಬಂಧ
- ಪ್ರವಾಸಿ ತಾಣಗಳಿಗೆ ನಿರ್ಬಂಧಿಸದಿದ್ದರೆ ಅಪಾಯ ಎಂಬ ವರದಿಗೆ ಸ್ಪಂದಿಸಿದ ಜಿಲ್ಲಾಡಳಿತ
- ಜಿಲ್ಲಾಡಳಿತ ಪ್ರವಾಸಿ ತಾನಗಳಿಗೆ ಜಿಲ್ಲೆಯಲ್ಲಿ ವಾರಾಂತ್ಯದ ಕರ್ಫ್ಯೂ ಜಾರಿ ಮಾಡಿದೆ.
ಗುಂಡ್ಲುಪೇಟೆ (ಆ.04): ಪ್ರವಾಸಿ ತಾಣಗಳಿಗೆ ನಿರ್ಬಂಧಿಸದಿದ್ದರೆ ಅಪಾಯ ಎಂಬ ವರದಿಗೆ ಸ್ಪಂದಿಸಿ ಜಿಲ್ಲಾಡಳಿತ ವಾರಾಂತ್ಯದ ಕರ್ಫ್ಯೂ ಜಾರಿ ಮಾಡಿದೆ.
ಬಂಡೀಪುರ ಸಫಾರಿ ಹಾಗು ಗೊಪಾಲಸ್ವಾಮಿ ಬೆಟ್ಟದಲ್ಲಿ ಕೋವಿಡ್ ಮಾರ್ಗಸೂಚಿ ಉಲ್ಲಂಘನೆಯಾಗುತ್ತಿದೆ. ಪ್ರವಾಸಿರಿಗೆ ನಿರ್ಬಂಧ ಹೇರದಿದ್ದರೆ ಅಪಾಯ ಎಂಬ ಕನ್ನಡ ಪ್ರಭ ವರದಿ ಗಮನ ಸೆಳೆದು ಇದೀಗ ಕ್ರಮ ಕೈಗೊಳ್ಳಲಾಗಿದೆ.
ಗಡಿಯಲ್ಲಿ ಕಟ್ಟೆಚ್ಚರ : ದ.ಕ.ದಲ್ಲಿ 13 ಗಡಿ ಬಂದ್, ಮದ್ಯ, ಬಸ್ ಸ್ಥಗಿತ
ಇದರ ಬೆನ್ನಲ್ಲೇ ಬಂಡಿಪುರ ಸಫಾರಿ ಹಾಗೂ ಗೋಪಾಲಸ್ವಾಮಿ ಬೆಟ್ಟಕ್ಕೆ ಶನಿವಾರ ಮತ್ತು ಭಾನುವಾರ ಭಕ್ತರ ಹಾಗೂ ಪ್ರವಾಸಿಗರಿಗೆ ಜಿಲ್ಲಾಧಿಕಾರಿ ಡಾ.ಎಂ.ಅರ್ ರವಿ ಅದೇಶ ಹೊರಡಿಸಿದ್ದಾರೆ.
ಶನಿವಾರ ಮತ್ತು ಭಾನುವಾರ ಹರತುಪಡಿಸಿ ಉಳಿದ ದಿನಗಳಲ್ಲು ಸಹ ಸಫಾರಿ ರೆಸಾರ್ಟ್ ಹೊ< ಸ್ಟೆಗಳಲ್ಲಿ ಪ್ರವಾಸಿಗರು 72 ಗಂಟೆ ಒಳಗಿನ ಆರ್‌ಟಿ ಪಿಸಿಅರ್ ಕೋವಿಡ್ ನೆಎಟಿವ್ ರಿಪೋರ್ಟ್ ಕಡ್ಡಾಯಗೊಳಿಸಿದ್ದಾರೆ.
15ರ ತನಕ ಸಾರ್ವಜನಿಕ ಸುರಕ್ಷತೆ ಹಾಗೂ ಅರೊಗ್ಯದ ಹಿತದೃಷ್ಟಿಯಿಂದ 3ನೇ ಅಲೆ ಹರಡದಮತೆ ಮುನ್ನೆಚ್ಚರಿಕೆಮಾರ್ಗಸೂಚಿ ಪಾಲಿಸಬೇಕು ಎಂದು ಸೂಚನೆ ನೀಡಲಾಗಿದೆ.
ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್ ನ್ಯೂಸ್ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona