ಹೊಸ​ಪೇ​ಟೆ: ಅಭಿಮಾನಿಗಳಿಂದ ಅಪ್ಪು ದೇವರ ಮಾಲೆಧಾರಣೆ

ಮಾಲಾಧಾರಿಗಳು ಮಾ.18ರಂದು ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿರುವ ಪುನೀತ್‌ ಅವರ ಸಮಾಧಿ ದರ್ಶನ (ಪುಣ್ಯಭೂಮಿ) ಮಾಡಲಿದ್ದಾರೆ. ಅಪ್ಪು ಅವರ ಜನ್ಮದಿನವನ್ನು ಸರ್ಕಾರ ಸ್ಫೂರ್ತಿ ದಿನ ಎಂದು ಆಚರಿಸುತ್ತಿದೆ.

Wear the Garland of Puneeth Rajkumar in Hosapete grg

ಹೊಸಪೇಟೆ(ಮಾ.02):  ಪವರ್‌ ಸ್ಟಾರ್‌ ಪುನೀತ್‌ ರಾಜಕುಮಾರ ಅಭಿಮಾನಿಗಳು ನಗರದಲ್ಲಿ ಬುಧವಾರ ಅಪ್ಪು ದೇವರ ಮಾಲೆ ಧರಿಸಿ ವ್ರತಾಚರಣೆಗೆ ಚಾಲನೆ ನೀಡಿದರು. ಒಂಬತ್ತು ಜನ ಅಭಿಮಾನಿಗಳು ಪುನೀತ್‌ ಪ್ರತಿಮೆ ಬಳಿ ವಿಶೇಷ ಪೂಜೆ ಸಲ್ಲಿಸಿ ಮಾಲೆ ಧರಿಸಿದರು.

ಅಪ್ಪು ದೇವರ ಮಾಲಾಧಾರಿಗಳು ಮಾ. 18ಂದು ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿರುವ ಪುನೀತ್‌ ಅವರ ಸಮಾಧಿ ದರ್ಶನ (ಪುಣ್ಯಭೂಮಿ) ಮಾಡಲಿದ್ದಾರೆ. ಅಪ್ಪು ಅವರ ಜನ್ಮದಿನವನ್ನು ಸರ್ಕಾರ ಸ್ಫೂರ್ತಿ ದಿನ ಎಂದು ಆಚರಿಸುತ್ತಿದೆ. ಈ ಹಿನ್ನೆಲೆ ವಿಜಯನಗರ ಜಿಲ್ಲೆಯ ಅಪ್ಪು ಅಭಿಮಾನಿಗಳು ಅಪ್ಪು ದೇವರ ಮಾಲಾಧಾರಣೆ ಮಾಡಿದರು. ಮಾ. 17ರಂದು ಪುನೀತ್‌ ಪುತ್ಥಳಿ ಬಳಿ ಸಮಾರಂಭ ನಡೆಯಲಿದೆ. ಈ ಕಾರ್ಯಕ್ರಮದಲ್ಲೂ ಭಾಗಿಯಾಗಲಿದ್ದಾರೆ. ಮಾ. 18ರಂದು ಮಾಲಾಧಾರಿಗಳು ಪುನೀತ್‌ ಅವರ ಸಮಾಧಿ ದರ್ಶನ (ಪುಣ್ಯಭೂಮಿ) ಮಾಡಲಿದ್ದಾರೆ.

ಅಪ್ಪು ಹುಟ್ಟುಹಬ್ಬಕ್ಕೆ ಭರ್ಜರಿ ತಯಾರಿ: 'ಕರ್ನಾಟಕ ರತ್ನ'ನ ನೆನಪಿನಲ್ಲಿ ಅಭಿಮಾನಿಗಳು ತಲ್ಲೀನ

ಮಾಲಾವ್ರತ ಹೇಗೆ ಆಚರಣೆ?:

ಅಪ್ಪು ದೇವರ ಡಾಲರ್‌ ಇರುವ ಮಾಲೆ ಧರಿಸುವುದು, ಕೇಸರಿ ಶಾಲು, ಕೇಸರಿ ಪಂಚೆ, ಕೇಸರಿ ಶರ್ಚ್‌ ಧರಿಸಿ, ಅಪ್ಪು ದೇವರ ಫೋಟೊ ಇಟ್ಟು ಪೂಜೆ ಮಾಡುವುದು. ಬೆಳಗ್ಗೆ ಸೂರ್ಯ ಉದಯಿಸುವ ಮುನ್ನ ಹಾಗೂ ಸಂಜೆ ಸೂರ್ಯ ಮುಳುಗಿದ ಬಳಿಕ ಸ್ನಾನ ಮಾಡುವುದು. ಬೆಳಗ್ಗೆ ಉಪಾಹಾರ, ಮಧ್ಯಾಹ್ನ ಊಟ, ರಾತ್ರಿ ಉಪಾಹಾರ ಸೇವಿಸುವುದು.

ದುಶ್ಚಟಗಳಿಂದ ದೂರ ಇರಬೇಕು:

ಅಪ್ಪು ದೇವರ ಮಾಲೆ ಧರಿಸುವವರು ದುಶ್ಚಟಗಳಿಂದ ದೂರವಿರಬೇಕು. ಮಾಲೆ ಹಾಕುವ ಅಭಿಮಾನಿಗಳು ಐದು ದಿವಸ, 11 ದಿವಸ ಮತ್ತು ಒಂದು ದಿವಸ ಮಾಲೆ ಹಾಕಬಹುದು. ಮಾಲೆ ಹಾಕುವ ಎಲ್ಲ ಅಪ್ಪು ಸ್ವಾಮಿಗಳು ಇಲ್ಲಿಂದ ಪುಣ್ಯಭೂಮಿಗೆ ತೆರಳುವಾಗ ಕೈಲಾದ ದಿನಸಿಗಳನ್ನು ಇರುಮುಡಿಯಾಗಿ ತೆಗೆದುಕೊಂಡು ಹೋಗತಕ್ಕದ್ದು. ಅಕ್ಕಿ, ಬೇಳೆ, ಎಣ್ಣೆ ದಿನಸಿಗಳನ್ನು ತೆಗೆದುಕೊಂಡು ಹೋಗಬಹುದು.

ಎಲ್ಲ ಮಾಲೆ ಧರಿಸುವ ಮಾಲಾಧಾರಿಗಳು ಅಪ್ಪು ದೇವರ ಪುಣ್ಯಭೂಮಿ ದರ್ಶನ ಪಡೆದು, ವಾಪಸ್‌ ಬಂದ ನಂತರ ಹಂಪಿಯ ಪುಣ್ಯ ನದಿಯಲ್ಲಿ ಸ್ನಾನ ಮಾಡಿ, ಶ್ರೀವಿರೂಪಾಕ್ಷೇಶ್ವರ ದೇವರ ದರ್ಶನ ಪಡೆದು ಪೂಜೆ ಸಲ್ಲಿಸಿ, ಮಾಲೆಯನ್ನು ವಿಸರ್ಜನೆ ಮಾಡತಕ್ಕದ್ದು ಎಂದು ವಿಜಯನಗರ ಜಿಲ್ಲೆಯ ಡಾ. ಪುನೀತ್‌ ರಾಜಕುಮಾರ ಅಭಿಮಾನಿ ಬಳಗದವರು ತಿಳಿಸಿದ್ದಾರೆ. ಪುನೀತ್‌ ರಾಜಕುಮಾರ ವೃತ್ತದಲ್ಲಿ ನಡೆದ ಮಾಲಾಧಾರಣೆ ಕಾರ್ಯಕ್ರಮದ ನಿಮಿತ್ತ ನಡೆದ ಪೂಜಾ ಕಾರ್ಯಕ್ರಮದಲ್ಲಿ ಯುವ ನಾಯಕ ಸಿದ್ಧಾರ್ಥ ಸಿಂಗ್‌ ಭಾಗಿಯಾಗಿದ್ದರು.

ಅನಾಥಾಲಯಗಳಿಗೆ ದಿನಸಿ:

ಅಪ್ಪು ದೇವರ ಮಾಲಾಧಾರಿಗಳು ಇರುಮುಡಿಯಾಗಿ ತೆಗೆದುಕೊಂಡು ಹೋಗುವ ಅಕ್ಕಿ, ಬೇಳೆ, ಎಣ್ಣೆ ದಿನಸಿಗಳನ್ನು ಅನಾಥಾಲಯಗಳಿಗೆ ಕೊಡಲಾಗುತ್ತದೆ. ನಾವು ಅಪ್ಪು ಅವರ ಅಭಿಮಾನದ ಮೇಲೆ ಮಾಲೆ ಧರಿಸಿದ್ದೇವೆ. ನಾವು ಅಪ್ಪು ಅವರನ್ನು ದೇವರಂತೆ ಪೂಜಿಸುತ್ತೇವೆ ಎಂದರು.

ಅಯ್ಯಪ್ಪ ಸ್ವಾಮಿ ನಂತರ 'ಪುನೀತ್ ರಾಜ್‌ಕುಮಾರ್ ಮಾಲೆ' ಹಾಕುತ್ತಿರುವ ಅಭಿಮಾನಿಗಳು; ವ್ರತ ಮಾಡೋ ವಿಧಾನ ಹೀಗಿದೆ..

ಪುನೀತ್‌ ರಾಜಕುಮಾರ ಅವರ ಮೇಲಿನ ಅಭಿಮಾನಕ್ಕಾಗಿ ಅಪ್ಪು ದೇವರ ಮಾಲೆಧಾರಣೆ ಮಾಡಿದ್ದೇವೆ. ವ್ರತಾಚರಣೆ ಕೈಗೊಂಡು ಮಾ. 18ರಂದು ಕಂಠೀರವ ಸ್ಟುಡಿಯೋಗೆ ತೆರಳಿ ಅಪ್ಪು ಪುಣ್ಯಭೂಮಿ ದರ್ಶನ ಮಾಡುತ್ತೇವೆ. ಇರುಮುಡಿ ದಿನಸಿಯನ್ನು ಅನಾಥಾಲಯಗಳಿಗೆ ನೀಡುತ್ತೇವೆ. ಮಾ. 17ರ ವರೆಗೆ ಅಪ್ಪು ಅಭಿಮಾನಿಗಳು ಮಾಲೆಧಾರಣೆ ಮಾಡಲಿದ್ದಾರೆ ಅಂತ ಹೊಸಪೇಟೆ ಪುನೀತ್‌ ಅಭಿಮಾನಿಗಳು ಕಿಚಿಡಿ ವಿಶ್ವ, ಜೋಗಿ ತಾಯಪ್ಪ ಹೇಳಿದ್ದಾರೆ. 

ಪುನೀತ್‌ ರಾಜಕುಮಾರ ಅವರ ಮೇಲಿನ ಅಭಿಮಾನಕ್ಕಾಗಿ ಅಪ್ಪು ದೇವರ ಮಾಲೆ ಧರಿಸುತ್ತಿದ್ದಾರೆ. ನಮ್ಮ ದೇಶದಲ್ಲಿ ನಂಬಿಕೆ ಮೇಲೆ ನಡೆಯುತ್ತಾರೆ. ಹಾಗಾಗಿ ಅಭಿಮಾನಕ್ಕಾಗಿ ಮಾಲೆ ಧರಿಸಿದ್ದಾರೆ. ನಾನು ಕೂಡ ಅಪ್ಪು ಅವರ ಅಭಿಮಾನಿಯಾಗಿರುವೆ. ಅವರ ಆದರ್ಶಗಳನ್ನು ಪಾಲಿಸುವೆ ಅಂತ ಹೊಸಪೇಟೆ ಯುವ ನಾಯಕ ಸಿದ್ಧಾರ್ಥ ಸಿಂಗ್‌ ತಿಳಿಸಿದ್ದಾರೆ. 

Latest Videos
Follow Us:
Download App:
  • android
  • ios