Asianet Suvarna News Asianet Suvarna News

Chikkamagaluru: ಬೈಕ್‌ ಸವಾರರಿಗೆ ಕಾಫಿನಾಡ ಪೊಲೀಸರ ಆರೋಗ್ಯ ಪಾಠ: ಹಾಫ್ ಹೆಲ್ಮೆಟ್‌ ಸೀಜ್

ಗುಣಮಟ್ಟದ ಹೆಲ್ಮೆಟ್ ಧರಿಸಿ  ಬಂದ ದ್ವಿಚಕ್ರವಾಹನ ಸವಾರರಿಗೆ ಇಂದು ಸಂಚಾರಿ ಪೋಲಿಸರು ದ್ವಿಚಕ್ರ ವಾಹನ ಸವಾರರಿಗೆ  ಹೂನೀಡಿ ಅಭಿನಂದಿಸಿದರು. 
 

wear the full face ear cover helmet chikkamagaluru polices awareness to bikers gvd
Author
First Published Jun 29, 2023, 11:02 PM IST

ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು  

ಚಿಕ್ಕಮಗಳೂರು (ಜೂ.29): ಗುಣಮಟ್ಟದ ಹೆಲ್ಮೆಟ್ ಧರಿಸಿ  ಬಂದ ದ್ವಿಚಕ್ರವಾಹನ ಸವಾರರಿಗೆ ಇಂದು ಸಂಚಾರಿ ಪೋಲಿಸರು ದ್ವಿಚಕ್ರ ವಾಹನ ಸವಾರರಿಗೆ  ಹೂನೀಡಿ ಅಭಿನಂದಿಸಿದರು. ಚಿಕ್ಕಮಗಳೂರು ನಗರದಾದ್ಯಂತ ಐ.ಎಸ್.ಐ ಮಾರ್ಕ್ ಇಲ್ಲದ ಸುರಕ್ಷತೆಯಿಲ್ಲದ ಅರ್ಧ ಹೆಲ್ಮೆಟ್‌ಗಳನ್ನು ಧರಿಸಿಕೊಂಡು ದ್ವಿಚಕ್ರ ವಾಹನ ಚಲಾಯಿಸುವ ಸವಾರರಿಗೆ ಪೊಲೀಸ್ ಅಧೀಕ್ಷಕರು ಮತ್ತು  ಹೆಚ್ಚುವರಿ ಪೊಲೀಸ್ ಅಧೀಕ್ಷಕರವರ ನಿರ್ದೇಶನದಂತೆ  ಸಂಚಾರಿ ಪೋಲಿಸರು ಇಂದು ಜಾಗೃತಿ ಮೂಡಿಸುವ ಸಲುವಾಗಿ ವಿಶೇಷ ಕಾರ್ಯಚರಣೆ ನಡೆಸಿದರು.

ಆರೋಗ್ಯ ಪಾಠ; ಹಾಫ್ ಹೆಲ್ಮೇಟ್ ಸೀಜ್: ಅಪಘಾತದಿಂದ ತಪ್ಪಿಸಿಕೊಳ್ಳಲು ಹೆಲ್ಮೆಟ್ ಹಾಕೋದಕ್ಕಿಂತಲೂ ಹೆಚ್ಚಾಗಿ, ಪೊಲೀಸರಿಂದ ತಪ್ಪಿಸಿಕೊಳ್ಳಲು ಹೆಲ್ಮೆಟ್ ಧರಿಸುವವರೇ ಹೆಚ್ಚು. ಇಂತಹ ವಾಹನ ಸವಾರರಿಗೆ ಕಾಫಿನಾಡ ಪೊಲೀಸರು ಆರೋಗ್ಯ ಪಾಠ ಹೇಳಿದ್ದಾರೆ. 500 ಫೈನ್ ಹಾಕ್ಬೇಕೋ, ತಿಳುವಳಿಕೆ ಹೇಳಿದ್ರೆ ಸಾಕೋ, ಇವತ್ ಫೈನ್ ಹಾಕಲ್ಲ, ಹಾಗೇ ಬಿಡ್ತೀನಿ ಎಂದು ಬೈಕ್ ಸವಾರರಿಗೆ ಎಚ್ಚರಿಕೆ ನೀಡುತ್ತಾ ಹಾಫ್ ಹೆಲ್ಮೇಟ್ ಸೀಜ್ ಮಾಡಿ ಹೊಸ ಹೆಲ್ಮೆಟ್ ತೆಗೆದುಕೊಳ್ಳಬೇಕು. ತಲೆ, ಕಿವಿ, ಮುಖ ಕವರ್ ಆಗುವಂತಹಾ ಹೆಲ್ಮೇಟ್ ಹಾಕಬೇಕು ಎಂದು ಹಾಫ್ ಹೆಲ್ಮೇಟ್ ಬೈಕ್ ಸವಾರರಿಗೆ ಸೂಚನೆ ನೀಡಿದರು. 

ನಾನು ಗ್ರಾನೈಟ್‌ ವಿದೇಶಕ್ಕೆ ರಫ್ತು ಮಾಡಲಿಲ್ಲ: ಡಿಕೆಶಿ ವಿರುದ್ಧ ಎಚ್‌ಡಿಕೆ ಪರೋಕ್ಷ ವಾಗ್ದಾಳಿ

400ಕ್ಕೂ ಹೆಚ್ಚು ಹೆಲ್ಮೆಟ್ ವಶಕ್ಕೆ: ನಗರದ ವಿವಿಧ ವೃತ್ತಗಳಲ್ಲಿ ವಿಶೇಷ ಕಾರ್ಯಾಚರಣೆ ನಡೆಸಿದ ಪೋಲೀಸರು ಸುಮಾರು 400 ಕ್ಕೂ ಹೆಚ್ಚು ಹೆಲ್ಮೆಟ್ ಗಳನ್ನು ವಶಕ್ಕೆ ಪಡೆದುಕೊಂಡು ಸವಾರರಿಗೆ ಐ.ಎಸ್.ಐ ಮಾರ್ಕ್ ಇರುವಂತಹ ಉತ್ತಮ ಗುಣಮಟ್ಟದ ಹೆಲ್ಮೆಟ್ ಧರಿಸುವಂತೆ ಮನವೊಲಿಸುವಲ್ಲಿ ಯಶಸ್ವಿಯಾಗಿದ್ದಾರೆ. ತಕ್ಷಣ ಸ್ಥಳದಲ್ಲಿಯೇ ಐ.ಎಸ್.ಐ ಮಾರ್ಕ್ ಇರುವಂತಹ ಉತ್ತಮ ಗುಣಮಟ್ಟದ ಹೆಲ್ಮೆಟ್‌ನ್ನು ಖರೀದಿಸಿ ಬಂದಂತಹ ಸವಾರರಿಗೆ ಹೂವನ್ನು ನೀಡಿ ಅಭಿನಂದನೆಯನ್ನು ಸಲ್ಲಿಸಿದರು. 

ಕೇಂದ್ರ ಸರ್ಕಾರದಿಂದ ಪ್ರತಿ ಗ್ರಾಪಂಗಳಿಗೆ ಶೇ.80 ಅನುದಾನ: ಸಂಸದ ಮುನಿಸ್ವಾಮಿ

ಗುಣಮಟ್ಟವಿಲ್ಲದ ಹೆಲ್ಮೆಟ್ ಧರಿಸುವ ಬೈಕ್ ಸವಾರರ ವಿರುದ್ದ ಕ್ರಮ ಇತ್ತೀಚಿನ ದಿನಗಳಲ್ಲಿ ದ್ವಿಚಕ್ರ ವಾಹನ ಸವಾರರು ಹೆಲ್ಮೆಟ್ ಧರಿಸದೆ ಹಾಗೂ ಹಾಲ್ಫ್ ಹೆಲ್ಮೆಟ್ ಮತ್ತು ಐ.ಎಸ್.ಐ ಮಾರ್ಕ್ ಇಲ್ಲದ ಉತ್ತಮ ಗುಣಮಟ್ಟದಲ್ಲದ ಹೆಲ್ಮೆಟ್ ಧರಿಸಿ ಸವಾರಿ ಮಾಡುವ ಸವಾರರು ಅಪಘಾತದಲ್ಲಿ ತಲೆಗೆ ತೀವ್ರತರಹದ ಗಾಯಗಳುಂಟಾಗಿ ಮರಣ ಹೊಂದುತ್ತಿರುವುದರಿಂದ ಸವಾರರಲ್ಲಿ ಜಾಗೃತಿ ಮೂಡಿಸಲು ವಿಶೇಷ ಕಾರ್ಯಚರಣೆ ನಡೆಸಿದ್ದು ಮುಂದಿನ ದಿನಗಳಲ್ಲಿ ಹಾಲ್ಫ್ ಹೆಲ್ಮೆಟ್ ಮತ್ತು ಐ.ಎಸ್.ಐ ಮಾರ್ಕ್ ಇಲ್ಲದ ಉತ್ತಮ ಗುಣಮಟ್ಟದಲ್ಲದ ಹೆಲ್ಮೆಟ್ ಧರಿಸಿ ಸವಾರಿ ಮಾಡುವ ಸವಾರರು ಮೇಲೆ ಭಾರತೀಯ ಮೋಟಾರ್ ವಾಹನಗಳ ಕಾಯ್ದೆಯಡಿ ಕ್ರಮಕೈಗೊಳ್ಳಲಾಗುವುದು ಎಂದು ಪೋಲಿಸ್ ವರಿಷ್ಟಾಧಿಕಾರಿ ಉಮಾಪ್ರಶಾಂತ್ ತಿಳಿಸಿದ್ದಾರೆ.

Latest Videos
Follow Us:
Download App:
  • android
  • ios