ಮಾತು ತಪ್ಪಿದ ಮುಖ್ಯಮಂತ್ರಿ ; ಹರ ಜಾತ್ರೆಗೆ ಬಂದ್ರೆ ಕಪ್ಪು ಬಾವುಟ ಪ್ರದರ್ಶನ: ಗೋಪನಾಳ್ ಎಚ್ಚರಿಕೆ
ತಾಯಿ ಮೇಲಾಣೆಗೂ ಪಂಚಮಸಾಲಿ ಸಮಾಜಕ್ಕೆ 2 ಎ ಮೀಸಲಾತಿ ನೀಡುವುದಾಗಿ ಆಣೆ ಮಾಡಿ ಮಾತು ತಪ್ಪಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿರುದ್ಧ ಹರಿಹರ ದಲ್ಲಿ ನಡೆಯುವ ಹರಜಾತ್ರೆಯಲ್ಲಿ ಕಪ್ಪು ಬಾವುಟ ಪ್ರದರ್ಶಿಸುವುದಾಗಿ ಪಂಚಮಸಾಲಿ ಸಮಾಜದ ಜಿಲ್ಲಾಧ್ಯಕ್ಷ ಆರ್.ವಿ.ಅಶೋಕ ಗೋಪನಾಳ್ ಎಚ್ಚರಿಸಿದ್ದಾರೆ.
ದಾವಣಗೆರೆ (ಜ.13) : ತಾಯಿ ಮೇಲಾಣೆಗೂ ಪಂಚಮಸಾಲಿ ಸಮಾಜಕ್ಕೆ 2 ಎ ಮೀಸಲಾತಿ ನೀಡುವುದಾಗಿ ಆಣೆ ಮಾಡಿ ಮಾತು ತಪ್ಪಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿರುದ್ಧ ಹರಿಹರ ದಲ್ಲಿ ನಡೆಯುವ ಹರಜಾತ್ರೆಯಲ್ಲಿ ಕಪ್ಪು ಬಾವುಟ ಪ್ರದರ್ಶಿಸುವುದಾಗಿ ಪಂಚಮಸಾಲಿ ಸಮಾಜದ ಜಿಲ್ಲಾಧ್ಯಕ್ಷ ಆರ್.ವಿ.ಅಶೋಕ ಗೋಪನಾಳ್ ಎಚ್ಚರಿಸಿದ್ದಾರೆ.
ಹರಿಹರ ಪೀಠದಿಂದ ಯಾವ ಸಾಧನೆಗಾಗಿ ಹರಜಾತ್ರೆ ಮಾಡಲಾಗುತ್ತಿದೆ? ತಾಯಿ ಮೇಲಾಣೆ ಮಾಡಿ, ಮಾತು ತಪ್ಪಿದ ಮುಖ್ಯಮಂತ್ರಿ ಬೊಮ್ಮಾಯಿಗೆ ಸಮಾರಂಭಕ್ಕೆ ಆಹ್ವಾನಿ ಸುವ ಉದ್ದೇಶವಾದರೂ ಏನಿತ್ತು ಎಂದು ಪ್ರಶ್ನಿಸಿದ್ದಾರೆ.
ನಾಳೆ 2ಎ ಮೀಸಲಿಗಾಗಿ ಬೃಹತ್ ಜಾಗೃತಿ ಸಮಾವೇಶ
ಕೂಡಲ ಸಂಗಮದ ಶ್ರೀ ಜಯ ಮೃತ್ಯುಂಜಯ ಸ್ವಾಮೀಜಿ ಸಮಾಜದ ಉದ್ಧಾರಕ್ಕಾಗಿ ಹೋರಾಟ ನಡೆಸಿದ್ದರೆ, ಹರಿಹರದ ಸ್ವಾಮೀಜಿ ತಮ್ಮ ವೈಯಕ್ತಿಕ ವರ್ಚಸ್ಸು ಹೆಚ್ಚಿಸಿ ಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಸರ್ಕಾರ ಸಮಾಜದ ಬೇಡಿಕೆ ಈಡೇರಿಸಲು ವಿಫಲವಾಗಿದ್ದರೂ ಮುಖ್ಯಮಂತ್ರಿಗೆ ಆಹ್ವಾನಿಸಿ, ಭಾಷಣ ಮಾಡಿಸುವ ಉದ್ದೇಶವಾದರೂ ಏನು? ಬುದ್ಧಿಜೀವಿಗಳು, ಯೋಗಪಟುಗಳು, ಕಾನೂನನ್ನು ಪರಿಪೂರ್ಣವಾಗಿ ಅರಿತಂತಹವರು ಹರಜಾತ್ರೆ ಮೂಲಕ ಸಮಾಜಕ್ಕೆ ಏನು ಸಂದೇಶ ನೀಡಲು ಹೊರಟಿದ್ದಾರೆ ಎಂದು ಬೇಸರ ಹೊರ ಹಾಕಿದ್ದಾರೆ.
ಕಪ್ಪು ಬಾವುಟ ಪ್ರದರ್ಶನ ಮಾಡಿ
2 ಎ ಮೀಸಲಾತಿಯನ್ನು ಪಂಚಮಸಾಲಿ ಸಮಾಜಕ್ಕೆ ಕೊಡಿಸಿದ್ದರೆ ಶ್ರೀಗಳನ್ನು ಸಮಾದ ಬಾಂಧವರು ಹೊತ್ತು ಮೆರೆಸುತ್ತಿದ್ದರು. ಇಡೀ ರಾಜ್ಯ ಪಂಚಮಸಾಲಿ ಸಮಾಜ ಹರ ಜಾತ್ರೆ ಬೇಕಾ ಅಥವಾ 2 ಎ ಮೀಸಲಾತಿ ಬೇಕಾ ಎಂಬುದನ್ನು ನಿರ್ಧರಿಸಬೇಕಿದೆ ಎಂದು ತಿಳಿಸಿದ್ದಾರೆ. ಪಂಚಮಸಾಲಿಗಳು ಹರಿಹರ ಪೀಠದ ಹರ ಜಾತ್ರೆಯಲ್ಲಿ ಭಾಗವಹಿಸುತ್ತಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೆ ಕಪ್ಪು ಬಾವುಟ ಪ್ರದರ್ಶಿಸಿ 2 ಎ ಮೀಸಲಾತಿಗೆ ಒತ್ತಾಯಿಸಬೇಕು. ಅಲ್ಲದೇ, ಸಮಾರಂಭದಲ್ಲಿ ಪಾಲ್ಗೊಳ್ಳುವ ಪಂಚಮಸಾಲಿ ಸಮಾಜ ಬಾಂಧವರು ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಕಪ್ಪು ಬಾವುಟ ಪ್ರದರ್ಶನ ಮಾಡಲು ಸೇರಬೇಕು ಎಂದು ಅಶೋಕ ಗೋಪನಾಳ್ ಮನವಿ ಮಾಡಿದ್ದಾರೆ. Reservation: ಪ್ರವರ್ಗ 2ಸಿ, 2ಡಿ ಮೀಸಲಾತಿಗೆ ಹೈಕೋರ್ಟ್ ತಡೆ: ಪಂಚಮಸಾಲಿ, ಒಕ್ಕಲಿಗರಿಗೆ ಬಿಗ್ ಶಾಕ್