ನಿಮ್ಮ ಬಳಿ ಮತದ ಕೂಲಿ ಕೇಳುತ್ತಿದ್ದೇವೆ : ಅನಿತಾ ಸಾ.ರಾ. ಮಹೇಶ್
ನನ್ನ ಮನೆಯವರು ಕಳೆದ 15 ವರ್ಷದಿಂದ ನಿರಂತರವಾಗಿ ಕೆ.ಆರ್. ನಗರ ವಿಧಾನಸಭಾ ಕ್ಷೇತ್ರದ ಅಭಿವೃದ್ಧಿಗಾಗಿ ಶ್ರಮಿಸಿದ್ದು, ಇದಕ್ಕಾಗಿ ನಿಮ್ಮ ಮತದ ಕೂಲಿ ಕೇಳುತ್ತಿದ್ದೇವೆ ಎಂದು ಶಾಸಕ ಸಾ.ರಾ. ಮಹೇಶ್ ಅವರ ಪತ್ನಿ ಅನಿತಾ ಸಾ.ರಾ. ಮಹೇಶ್ ಹೇಳಿದರು.
ಸಾಲಿಗ್ರಾಮ : ನನ್ನ ಮನೆಯವರು ಕಳೆದ 15 ವರ್ಷದಿಂದ ನಿರಂತರವಾಗಿ ಕೆ.ಆರ್. ನಗರ ವಿಧಾನಸಭಾ ಕ್ಷೇತ್ರದ ಅಭಿವೃದ್ಧಿಗಾಗಿ ಶ್ರಮಿಸಿದ್ದು, ಇದಕ್ಕಾಗಿ ನಿಮ್ಮ ಮತದ ಕೂಲಿ ಕೇಳುತ್ತಿದ್ದೇವೆ ಎಂದು ಶಾಸಕ ಸಾ.ರಾ. ಮಹೇಶ್ ಅವರ ಪತ್ನಿ ಅನಿತಾ ಸಾ.ರಾ. ಮಹೇಶ್ ಹೇಳಿದರು.
ಸಾಲಿಗ್ರಾಮದಲ್ಲಿ ಇತ್ತೀಚೆಗೆ ನಡೆದ ಬಾಗಿನ ಮತ್ತು ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ಯಾವುದೇ ಅಭಿವೃದ್ದಿ ಮಾಡದೇ ಕೇವಲ ಚುನಾವಣೆಯಲ್ಲಿ ಕೈ ಕಾಲು ಹಿಡಿದು ಮತ ಕೇಳುವುದಾದರೇ ಅಭಿವೃದ್ದಿ ಮಾಡದೇ ನಾವು ಕೂಡ ನಿಮ್ಮ ಕಾಲು ಹಿಡಿಬಹುದಿತ್ತು, ಅನುಕಂಪ ತೋರದೆ ಈ ಚುನಾವಣೆಯಲ್ಲಿ ಅಭಿವೃದ್ದಿಗೆ ಮತ ಕೊಡಿ ಎಂದು ಸೆರಗವೊಡ್ಡಿ ಮನವಿ ಮಾಡಿದರು.
ಸಾಲಿಗ್ರಾಮದ ಜನತೆ ತಮ್ಮ ಊರಿನ ಮಗನಾದ ಸಾ.ರಾ. ಮಹೇಶ್ ಅವರಿಗೆ ತೋರುತ್ತಿರುವ ಪ್ರೀತಿಗೆ ನಮ್ಮ ಕುಟುಂಬ ನಿಮಗೆಲ್ಲ ಚಿರಋುಣಿಯಾಗಿರುತ್ತೇವೆ, ರೈತರು ಮಹಿಳೆಯರು ಸಾರ್ವಜನಿಕರು ಕೆಲಸಕ್ಕಾಗಿ ನಿತ್ಯ ಕೆ.ಆರ್. ನಗರ ಪಟ್ಟಣಕ್ಕೆ ಅಲೆಯುವುದನ್ನು ತಪ್ಪಿಸುವ ಸಲುವಾಗಿ ಸರ್ಕಾರಿ ಸೇವೆಗಳನ್ನು ಒದಗಿಸಲು ಸಾಲಿಗ್ರಾಮ ತಾಲೂಕು ಕೇಂದ್ರವನ್ನಾಗಿ ಮಾಡಲು ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಆಗಿದ್ದ ವೇಳೆ ಶಾಸಕ ಸಾ.ರಾ. ಮಹೇಶ್ ಅವರು ಒತ್ತಡ ಹಾಕಿದ ಪರಿಣಾಮ ಇಂದು ತಾಲೂಕು ಆಗಲು ಸಾಧ್ಯವಾಗಿದೆ, ಪ್ರತಿದಿನ ಮಹಿಳೆಯರು ತಮ್ಮ ಜೀವನ ಸಾಗಿಸಲು ಮೈಸೂರಿಗೆ ಗಾರ್ಮೆಂಟ್ಸ್ ಕೆಲಸಕ್ಕೆ ಹೋಗುತ್ತಿದ್ದು, ಅವರಿಗೆ ಅನುಕೂಲ ಮಾಡಿಕೊಡಲು ಕೆ.ಆರ್. ನಗರ ತಾಲೂಕಿನ ಕಗ್ಗೆರೆ ಗ್ರಾಮದಲ್ಲಿ ಗಾರ್ಮೆಂಟ್ಸ… ತೆರೆಯಲಾಗಿದೆ, ಆದ್ದರಿಂದ ಬರುವ ಆದಾಯವು ಪ್ರತಿಯೊಂದು ಕುಟುಂಬದ ಮಹಿಳೆಯರ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುವುದು ಇದರಿಂದ ಮಹಿಳೆಯರು ಸ್ವಾವಲಂಬನೆ ಜೀವನ ಸಾಗಿಸಲು ಅನುಕೂಲ ಆಗಲಿದೆ ಎಂದರು.
ಸಂಪದ, ರತ್ನಮ್ಮ, ಮಮತಾ, ಸುಗುಣ, ಗ್ರಾಪಂ ಉಪಾಧ್ಯಕ್ಷೆ ನೀಲಮ್ಮ, ಗೋವಿಂದೇಗೌಡ, ಸದಸ್ಯರಾದ ಎಸ್.ಆರ್. ಪ್ರಕಾಶ್, ದೊಡ್ಮನೆ ಮಂಜು, ರತ್ನಮ್ಮ, ರಾಣಿ ಜಯರಾಂ, ವಿಎಸ್‌ಎಸ್‌ಎನ್ ಅಧ್ಯಕ್ಷ ಕರುಣ…, ನಿರ್ದೇಶಕ ನಾಗೇಂದ್ರ, ರಾಜು, ಅಭಿಲಾಷ್, ಮುಖಂಡರಾದ ಲಾಲೂ ಸಾಹೇಬ…, ಸಾ.ರಾ. ಸತೀಶ್, ಅಯಾಜ… ಅಹಮದ್ ಏಜಾಸ್, ಅನಂತರಾಜ್, ಮುಸ್ತಾಫಾ ಇದ್ದರು.
ಬೆನ್ನಿಗೆ ಚೂರಿ ಹಾಕುತ್ತಿರುವುದು ಬೇಸರ
ಸಾಲಿಗ್ರಾಮ:ನಮ್ಮ ಪಕ್ಷದಲ್ಲಿ ಗುರುತಿಸಿಕೊಂಡು, ನಮ್ಮಿಂದಲೇ ಬೆಳೆದು ಅಧಿಕಾರ ಪಡೆದು, ಸಾಕಷ್ಟುಅನುಕೂಲ ಪಡೆದ ಕೆಲವರು ನನ್ನ ಹಾಗೂ ಪಕ್ಷದ ವಿರುದ್ದೇ ನಿಂತು ಬೆನ್ನಿಗೆ ಚೂರಿ ಹಾಕುತ್ತಿರುವುದು ನಿಜಕ್ಕೂ ಬೇಸರದ ಸಂಗತಿ ಎಂದು ಶಾಸಕ ಸಾ.ರಾ. ಮಹೇಶ್ ಭಾವನಾತ್ಮಕವಾಗಿ ನುಡಿದರು.
ಪಟ್ಟಣದಲ್ಲಿ ನಡೆದ ಜೆಡಿಎಸ್ ಕಾರ್ಯಕರ್ತರ ಸಮಾವೇಶದಲ್ಲಿ ಅವರು ಮಾತನಾಡಿದರು.
ಕುಡಿಯುವ ನೀರು, ರಸ್ತೆ, ವಿದ್ಯುತ್, ಶಿಕ್ಷಣ, ಆಸ್ಪತ್ರೆ, ಸಮುದಾಯ ಭವನಗಳು, ರೈತಾಪಿ ವರ್ಗಕ್ಕೆ ಸೇರಿದಂತೆ ಇನ್ನಿತರ ಕ್ಷೇತ್ರಗಳ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ನೀವು ಕೊಟ್ಟಅಧಿಕಾರದಲ್ಲಿ ಜಿಲ್ಲೆಯಲ್ಲೇ ಅತಿ ಹೆಚ್ಚು ಅನುದಾನವನ್ನು ಈ ತಾಲೂಕಿಗೆ ತಂದು. ಎಲ್ಲ ವರ್ಗಗಳ ಮತದಾರರ ಗ್ರಾಮಗಳ ಸರ್ವತೋಮುಖ ಅಭಿವೃದ್ಧಿಯನ್ನ ಒಬ್ಬ ಶಾಸಕನಾಗಿ ಪ್ರಾಮಾಣಿಕವಾಗಿ ನನ್ನ ಶಕ್ತಿ ಮೀರಿ ವೈಯಕ್ತಿಕವಾಗಿಯೂ ಸಹಾಯ ಮಾಡಿರುವ ತೃಪ್ತಿ ನನಗಿದೆ ಎಂದರು.
ಹೆಣ್ಣು ಮಕ್ಕಳು ದೂರದೂರುಗಳಿಗೆ ಕೆಲಸಕ್ಕಾಗಿ ಬೆಳಗ್ಗೆ 6ಕ್ಕೆ ಮನೆ ಬಿಟ್ಟು ರಾತ್ರಿ ಮನೆ ಸೇರುತ್ತಿದ್ದು, ಅವರ ಕುಟುಂಬ ನಿರ್ವಹಣೆಯ ಕಷ್ಟಅರಿವು ನನಗಿರುವ ಕಾರಣ ಜಿಲ್ಲೆಯಲ್ಲಿ ಯಾವ ಕ್ಷೇತ್ರದಲ್ಲಿ ಮಾಡಿರದಂತಹ ಗಾರ್ಮೆಂಟ್ಸ… ಕಾರ್ಖಾನೆ ಆರಂಭಿಸಿ ಇಂದು ಒಂದು ಸಾವಿರ ಹೆಣ್ಣು ಮಕ್ಕಳಿಗೆ ಕೆಲಸ ನೀಡಿ 70 ಸಾವಿರ ಕಟುಂಬದ ಹೆಣ್ಣು ಮಕ್ಕಳನ್ನು ಷೇರುದಾರನನ್ನಾಗಿ ಮಾಡಿ ಬರುವಂತ ಆದಾಯವನ್ನು ಅವರಿಗೆ ನೀಡುತ್ತಿರುವುದು ನನ್ನ ಕ್ಷೇತ್ರದ ಹೆಣ್ಣು ಮಕ್ಕಳು, ತಾಯಂದಿರ ಮೇಲೆ ನನಗಿರುವ ಅಪಾರ ಕಾಳಜಿ ಎಂದು ಅವರು ತಿಳಿಸಿದರು.
ಬೇರೆಯವರು ಮತಕ್ಕಾಗಿ ಕಣ್ಣೀರು ಹಾಕುತ್ತಾರೆ. ನಾನು ಈ ಕ್ಷೇತ್ರದಲ್ಲಿ ಅಭಿವೃದ್ಧಿ ಮಾಡಿದ್ದರೆ, ನಮ್ಮನ್ನ ಕಾಯುತ್ತಾನೆ ಎನ್ನುವ ಭಾವನೆ ಇದ್ದರೆ, ಪ್ರಾಮಾಣಿಕವಾಗಿ ಕೆಲಸ ಮಾಡುತ್ತಾನೆ ಎನ್ನುವ ಭರವಸೆ ಇದ್ದರೆ ನನಗೆ ಮತಕೊಟ್ಟು ಗೆಲ್ಲಿಸಿ ನಾನು ಕೂಡ ಮನುಷ್ಯನೆ ನಾನು ಕೂಡ ಕಣ್ಣೀರು ಹಾಕಿದ್ದೇನೆ ನನ್ನ ಬೆನ್ನಿಗೆ ಚೂರಿ ಹಾಕಿದವರನ್ನು ನೆನೆದು ಎಂದು ಭಾವುಕರಾದರು.