Yellapur: 5,400 ಕೋಟಿ ವೆಚ್ಚದಲ್ಲಿ ಜಮೀನಿಗೆ ನೀರು: ಸಚಿವ ಶಿವರಾಮ ಹೆಬ್ಬಾರ

*  ಸಂಚಿವ ಸಂಪುಟದಲ್ಲಿ ಅನುಮೋದನೆ
*  ಜಮೀನುಗಳಿಗೆ ನೀರೊದಗಿಸುವ ಮಹತ್ವಾಕಾಂಕ್ಷಿ ಯೋಜನೆ 
*  18.13 ಕೋಟಿ ವೆಚ್ಚದ ಕಾಮಗಾರಿ ಲೋಕಾರ್ಪಣೆ

Water to the Land at Cost of Rs 5400 Crore at Yeppapur Says Shivaram Hebbar grg

ಯಲ್ಲಾಪುರ(ಮಾ.03): ರೈತರ(Farmers) ಜಮೀನುಗಳಿಗೆ ನಿರೋದಗಿಸುವ ಉದ್ದೇಶದಿಂದ ರಾಜ್ಯದ ವಿವಿಧ ಭಾಗಗಳಿಗೆ . 5400 ಕೋಟಿ ಅನುದಾನ ನೀಡಲು ಸಚಿವ ಸಂಪುಟ(Cabinet) ಅನುಮೋದನೆ ನೀಡಿದೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯಿಂದ ಪಶ್ಚಿಮಕ್ಕೆ ಹರಿಯುವ ನದಿಗಳಿಗೆ ಆಣೆಕಟ್ಟು ನಿರ್ಮಿಸಿ 74000 ಎಕರೆ ಪ್ರದೇಶದ ಜಮೀನುಗಳಿಗೆ(Land) ನೀರೊದಗಿಸುವ ಮಹತ್ವಾಕಾಂಕ್ಷಿ ಯೋಜನೆ ರೂಪಿಸಲಾಗಿದೆ ಎಂದು ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ(Shivaram Hebbar) ಹೇಳಿದರು.

ತಾಲೂಕಿನ ಆನಗೋಡ, ಕಣ್ಣಿಗೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಿವಿಧ ಕಾಮಗಾರಿಗಳನ್ನು ಬುಧವಾರ ಲೋಕಾರ್ಪಣೆಗೊಳಿಸಿ ಮಾತನಾಡಿದರು. ಬಹುವರ್ಷಗಳ ಬೇಡಿಕೆಯಾಗಿದ್ದ 25 ಕಿಮೀ ಸಾತೊಡ್ಡಿಗೆ ಕಾಂಕ್ರೀಟ್‌ ರಸ್ತೆ ನಿರ್ಮಿಸಲು ಅಗತ್ಯ ಅನುದಾನ ನೀಡಿ, ಜನರ ಬೇಡಿಕೆಗೆ ಸ್ಪಂದಿಸಿದ್ದೇನೆ. ದೇಹಳ್ಳಿ, ಆನಗೋಡ, ಕಣ್ಣಿಗೇರಿ ಗ್ರಾಪಂಗಳ ಪ್ರಮುಖ ರಸ್ತೆ, ವಿವಿಧ ಕಾಮಗಾರಿಗಳು ಸೇರಿದಂತೆ 18.13 ಕೋಟಿ ವೆಚ್ಚದ ಕಾಮಗಾರಿಗಳನ್ನು ಲೋಕಾರ್ಪಣೆಗೊಳಿಸಲಾಗಿದೆ ಎಂದರು.

Belagavi Chalo: ಅರಣ್ಯ ವಾಸಿಗಳ ಸಮಸ್ಯೆ ಬಗೆಹರಿಸಲು ಸರ್ಕಾರ ಬದ್ಧ: ಸಚಿವ ಹೆಬ್ಬಾರ್‌

ಇಲ್ಲಿಯ ಸಾರ್ವಜನಿಕರು ರಸ್ತೆ ಬೇಡಿಕೆ ಹೊರತುಪಡಿಸಿ, ಮತ್ತಾವ್ಯ ಬೇಡಿಕೆ ಸಲ್ಲಿಸಿರಲಿಲ್ಲ. ಕಳೆದೆರಡು ವರ್ಷಗಳು ಕೋವಿಡ್‌ನಿಂದಾಗಿ ಸರ್ಕಾರದ ಅಭಿವೃದ್ಧಿ ಕಾರ್ಯಗಳಿಗೆ ಹಿನ್ನಡೆಯಾಗಿತ್ತು. ಬರುವ ಬಜೆಟ್‌ನಲ್ಲಿ(Budget) ಅನೇಕ ವಿಶೇಷ ಯೋಜನೆಗಳಿಗೆ ಮಹತ್ವ ನೀಡಲು ಸರ್ಕಾರ ಸಂಕಲ್ಪಿಸಿದೆ. ಕರಾವಳಿ ಭಾಗದಲ್ಲಿ . 1591 ಕೋಟಿ ವೆಚ್ಚದಲ್ಲಿ ಖಾರ್‌ಲ್ಯಾಂಡ್‌ (ಸಮುದ್ರ ಕೊರೆತ) ತಡೆಯಲು ಸಂಪುಟ ಅನುಮೋದನೆ ನೀಡಿದೆ. ಜಿಲ್ಲೆಯಲ್ಲಿ ಜಲಜೀವನ ಮಿಷನ್‌ ಯೋಜನೆಯಡಿ . 490 ಕೋಟಿ ವೆಚ್ಚದಲ್ಲಿ ಪ್ರತಿಯೊಬ್ಬರಿಗೂ ನೀರು(Water) ನೀಡುವ ಕಾರ್ಯ ಮಾಡಲಾಗುತ್ತಿದೆ. ಈಗಾಗಲೇ ಮುಂಡಗೋಡಿನಲ್ಲಿ . 650 ಕೋಟಿ ವೆಚ್ಚದ ಯೋಜನೆಗೆ 3 ಹಂತದ ಕಾಮಗಾರಿ ಪೂರ್ಣಗೊಳಿಸಲಾಗುತ್ತಿದೆ ಎಂದು ಸಚಿವರು ತಿಳಿಸಿದರು.

ಜಿಪಿಎಸ್‌(GPS) ಮಾಡಿದ ಅರಣ್ಯ ಅತಿಕ್ರಮಣದಾರರಿಗೆ ರೈತರಿಗೆ ಸಿಗಬಹುದಾದ ಎಲ್ಲ ಸೌಲಭ್ಯಗಳನ್ನು ದೊರಕಿಸಲು ಪ್ರಯತ್ನಿಸಲಾಗುತ್ತಿದೆ. ಕೃಷಿಕರು-ಕೂಲಿ ಕಾರ್ಮಿಕರಿಗೆ . 41 ಕೋಟಿ ಮೊತ್ತದ ವಿಶೇಷ ಯೋಜನೆ ರೂಪಿಸಲಾಗಿದೆ. ಜಿಲ್ಲೆಯಲ್ಲಿ ಹೈನೋದ್ಯಮಕ್ಕೆ ಉತ್ತೇಜನ ನೀಡುವ ದಿಸೆಯಲ್ಲಿ ಜಿಲ್ಲೆಗೆ ಪ್ರತ್ಯೇಕ ಹಾಲು ಘಟಕ ಸ್ಥಾಪಿಸುವ ಉದ್ದೇಶದಿಂದ ನಮ್ಮ ಕಂಪನಿಯಿಂದ ಹೈನುಗಾರರಿಕೆಗೆ(Dairy Farming) ಆಕಳು ಖರೀದಿಗೆ ಯೋಜನೆ ರೂಪಿಸಲಾಗುತ್ತಿದೆ ಎಂದರು.

ಗೋಕರ್ಣ: 1.26 ಲಕ್ಷ ಮನೆಗಳಿಗೆ ನೀರು ಪೂರೈಕೆ, ಸಚಿವ ಹೆಬ್ಬಾರ

ಆನಗೋಡ ಗ್ರಾಪಂ ಅಧ್ಯಕ್ಷ ಪರಮೇಶ್ವರ ಗಾಂವ್ಕರ, ಬಿಜೆಪಿ ತಾಲೂಕಾಧ್ಯಕ್ಷ ಗೋಪಾಲಕೃಷ್ಣ ಗಾಂವ್ಕರ್‌ ಮಾತನಾಡಿದರು. ಪ್ರಮುಖರಾದ ವಿವೇಕ ಹೆಬ್ಬಾರ, ಗಣಪತಿ ಮುದ್ದೇಪಾಲ, ಗ್ರಾಪಂ ಉಪಾಧ್ಯಕ್ಷೆ ಭಾರತಿ ನಾಯ್ಕ, ಶಕ್ತಿ ಕೇಂದ್ರದ ಅಧ್ಯಕ್ಷ ರಾಮಚಂದ್ರ ಚಿಕ್ಯಾನಮನೆ, ರವಿ ಭಟ್ಟಬರಗದ್ದೆ, ಸತ್ಯನಾರಾಯಣ ಹೆಗಡೆ ಇದ್ದರು.

ಕೆರೆ ಮೀನುಗಾರಿಕೆ: ಹೊರ ಜಿಲ್ಲೆಯವರಿಗೆ ಅವಕಾಶವಿಲ್ಲ: ಸಚಿವ ಹೆಬ್ಬಾರ

ಉತ್ತರ ಕನ್ನಡ ಜಿಲ್ಲೆಯ ಕೆರೆಗಳಲ್ಲಿ(Lake) ಮೀನು ಸಂಗ್ರಹಣೆಗೆ ಯಾವುದೇ ಕಾರಣಕ್ಕೂ ಹೊರ ಜಿಲ್ಲೆಯ ಮೀನುಗಾರರಿಗೆ ಗುತ್ತಿಗೆ ಪಡೆಯಲು ಅವಕಾಶ ನೀಡುವುದಿಲ್ಲ ಎಂದು ಕಾರ್ಮಿಕ ಇಲಾಖೆ ಸಚಿವ ಶಿವರಾಮ ಹೆಬ್ಬಾರ(Shivaram Hebbar) ಹೇಳಿದ್ದರು. 

ಫೆ.05 ರಂದು ನಗರದ ಮೀನುಗಾರಿಕಾ ಇಲಾಖೆ(Department of Fisheries) ಕಚೇರಿಯಲ್ಲಿ ಶನಿವಾರ ಮೀನುಗಾರರಿಗೆ(Fishing) 2.5 ಲಕ್ಷ ಬೆಲೆಯ 8 ದೋಣಿ ಮತ್ತು 12 ಸೆಟ್‌ ಬಲೆ ವಿತರಣೆ ಮಾಡಿ ಬಳಿಕ ಮಾಧ್ಯಮದೊಂದಿಗೆ ಅವರು ಮಾತನಾಡಿದರು. ಮೀನುಗಾರರು ಸುರಕ್ಷಿತವಾಗಿ ದಡ ಸೇರಬೇಕು. ಶೋಷಣೆಗೆ ಒಳಗಾಗದೇ ಮೀನುಗಾರಿಕೆ ನಡೆಸಬೇಕು ಎಂಬುದು ನಮ್ಮ ಉದ್ದೇಶ.ಜಿಲ್ಲೆಯಲ್ಲಿ ಅತಿ ಚೆಚ್ಚು ಕೆರೆ ಇರುವ ಪ್ರದೇಶ ಮುಂಡಗೋಡ ತಾಲೂಕು ಹಾಗೂ ಶಿರಸಿ ತಾಲೂಕಿನ ಪೂರ್ವ ಭಾಗ. ಜಿಲ್ಲೆಯ ಮೀನುಗಾರಿಕೆ ವ್ಯವಸಾಯ(Fishing Agriculture) ನಮ್ಮ ಜಿಲ್ಲೆಯವರಿಗೆ ಸಿಗಬೇಕು. ಈ ಹಿನ್ನೆಲೆಯಲ್ಲಿ ಕೆರೆಗಳಲ್ಲಿ ಮೀನು ಬಿಡುವಿಕೆ ಮತ್ತು ಮೀನು ಸಂಗ್ರಹಣೆಗೆ ಆದ್ಯತೆ ನೀಡಿ ಈ ಮೂಲಕ ಸ್ಥಳೀಯರಿಗೆ ಉದ್ಯೋಗ ಒದಗಿಸುವ ಯತ್ನ ಮಾಡುತ್ತಿದ್ದೇವೆ. ಗುಣ ಮಟ್ಟದ ಮೀನು ಉತ್ಪಾದನೆಗೆ ನಮ್ಮಲ್ಲಿಯೇ ಸ್ಪರ್ಧೆ ನಡೆಯಲಿ, ಆದರೆ, ಹೊರ ಜಿಲ್ಲೆಯವರು ಇಲ್ಲಿ ಬಂದು ಗುತ್ತಿಗೆ ಹಿಡಿಯಲು ಅವಕಾಶ ಮಾಡಿಕೊಡುವುದಿಲ್ಲ ಎಂದು ತಿಳಿಸಿದ್ದರು. 
 

Latest Videos
Follow Us:
Download App:
  • android
  • ios