Asianet Suvarna News Asianet Suvarna News

ಪಾವಗಡಕ್ಕೆ ಕರ್ನಾಟಕದ ಪಾಲಿನ ನೀರು..!

ತುಂಗಭದ್ರಾ ಜಲಾಶಯದಿಂದ ತುಮಕೂರು ಜಿಲ್ಲೆ ಪಾವಗಡಕ್ಕೆ ಕುಡಿವ ನೀರು ಪೂರೈಕೆ ಮಾಡುವ ಸಂಬಂಧ ಆಂಧ್ರಪ್ರದೇಶದ ವಿಜಯವಾಡದಲ್ಲಿ ಶನಿವಾರ ಸಂಜೆ ಕರ್ನಾಟಕ, ಆಂಧ್ರಪ್ರದೇಶ ಹಾಗೂ ತೆಲಂಗಾಣ ರಾಜ್ಯಗಳ ಅಧಿಕಾರಿಗಳ ಮಹತ್ವದ ಸಭೆ ನಡೆದಿದ್ದು, ಕರ್ನಾಟಕದ ಪಾಲಿನ ನೀರನ್ನೇ ಪೂರೈಸಲು ನಿರ್ಧರಿಸಲಾಗಿದೆ.

 

water to be given to pavagada from karnatakas share
Author
Bangalore, First Published Feb 16, 2020, 2:33 PM IST

ತುಮಕೂರು(ಫೆ.16): ತುಂಗಭದ್ರಾ ಜಲಾಶಯದಿಂದ ತುಮಕೂರು ಜಿಲ್ಲೆ ಪಾವಗಡಕ್ಕೆ ಕುಡಿವ ನೀರು ಪೂರೈಕೆ ಮಾಡುವ ಸಂಬಂಧ ಆಂಧ್ರಪ್ರದೇಶದ ವಿಜಯವಾಡದಲ್ಲಿ ಶನಿವಾರ ಸಂಜೆ ಕರ್ನಾಟಕ, ಆಂಧ್ರಪ್ರದೇಶ ಹಾಗೂ ತೆಲಂಗಾಣ ರಾಜ್ಯಗಳ ಅಧಿಕಾರಿಗಳ ಮಹತ್ವದ ಸಭೆ ನಡೆದಿದ್ದು, ಕರ್ನಾಟಕದ ಪಾಲಿನ ನೀರನ್ನೇ ಪೂರೈಸಲು ನಿರ್ಧರಿಸಲಾಗಿದೆ.

ಹಿಂದೆ ಬಳ್ಳಾರಿ ಜಿಲ್ಲಾ ಪಂಚಾಯಿತಿ ಸಭೆಯಲ್ಲಿ ತುಂಗಭದ್ರಾ ಜಲಾಶಯದಿಂದ ಪಾವಗಡಕ್ಕೆ ನೀರು ಪೂರೈಕೆ ಕುರಿತು ಜಿಲ್ಲಾ ಉಸ್ತುವಾರಿ ಸಚಿವ ಲಕ್ಷ್ಮಣ ಸವದಿ ಪ್ರಸ್ತಾಪಿಸಿದ್ದಾಗ ಜಿಪಂ ಸದಸ್ಯರು ಹಾಗೂ ಹರಪನಹಳ್ಳಿ ಶಾಸಕ ಕರುಣಾಕರ ರೆಡ್ಡಿ ಸೇರಿದಂತೆ ಅನೇಕರು ವಿರೋಧಿಸಿದ್ದರು. ತುಂಗಭದ್ರಾ ಜಲಾಶಯ ಭರ್ತಿಯಾಗುವುದೇ ಅಪರೂಪವಾಗಿದೆ. ಸತತವಾಗಿ ಬರಗಾಲವಿದೆ. ಇದರಿಂದ ಜನ ಜಾನುವಾರುಗಳಿಗೆ ನೀರು ಸಿಗದಾಗಿದೆ. ಹೀಗಿರುವಾಗ ಜಲಾಶಯದಿಂದ ನೀರು ಕೊಡುವುದು ಎಷ್ಟುಸರಿ? ಎಂದು ಪ್ರಶ್ನಿಸಿದ್ದರು. ಮತ್ತು ಜಿಲ್ಲೆಯ ರೈತರು ಹಾಗೂ ಜನಪ್ರತಿನಿಧಿಗಳಿಂದ ತೀವ್ರ ವಿರೋಧ ವ್ಯಕ್ತವಾಗಿತ್ತು.

ಸ್ವಚ್ಛ ಭಾರತ್: ತುಮಕೂರಲ್ಲಿ 8864 ಶೌಚಾಲಯ ನಿರ್ಮಾಣ

ಈ ವಿರೋಧದ ನಡುವೆಯೇ ಇಂದು ಸಭೆಯಲ್ಲಿ ನಿರ್ಧಾರಕ್ಕೆ ಬರಲಾಗಿದೆ. ತುಂಗಭದ್ರಾ ಜಲಾಶಯದಿಂದ ಪಾವಡಕ್ಕೆ ನೀರು ಪೂರೈಸುವುದು, ಕೊಪ್ಪಳ ಜಿಲ್ಲೆಯ ನವಲಿ ಬಳಿ ನಿರ್ಮಿಸಲು ಉದ್ದೇಶಿಸಿರುವ ಪರ್ಯಾಯ ಜಲಾಶಯ ಕುರಿತು ಸಭೆಯಲ್ಲಿ ಚರ್ಚಿದರು ಎಂದು ಮೂಲಗಳು ಹೇಳಿವೆ.

ಕರ್ನಾಟಕವನ್ನು ಪ್ರತಿನಿಧಿಸಿ ಭಾಗವಹಿಸಿದ್ದ ತುಂಗಭದ್ರಾ ಬೋರ್ಡ್‌ನ ಅಧಿಕಾರಿ ಲಕ್ಷ್ಮಣರಾವ್‌ ಅವರು, ಪಾವಗಡಕ್ಕೆ ತುಂಗಭದ್ರಾ ಜಲಾಶಯದ ಹಿನ್ನೀರನ್ನು ಕುಡಿವ ನೀರಿಗಾಗಿ ಪೂರೈಕೆ ಮಾಡುವ ಕುರಿತು ಪ್ರಸ್ತಾಪಿಸಿದ್ದಾರೆ. ಇದಕ್ಕೆ ಆಂಧ್ರ ಹಾಗೂ ತೆಲಂಗಾಣ ರಾಜ್ಯದ ಅಧಿಕಾರಿಗಳು ಒಪ್ಪಿಗೆ ಸೂಚಿಸಿದ್ದಾರೆ. ಆದರೆ, ಪಾವಗಡಕ್ಕೆ ಕರ್ನಾಟಕದ ಕೋಟಾದ ನೀರನ್ನು ಮಾತ್ರ ಬಳಕೆ ಮಾಡಬೇಕು. ಪಾವಗಡಕ್ಕೆ ಬಿಡುವ ನೀರಲ್ಲಿ ಆಂಧ್ರ ಮತ್ತು ತೆಲಂಗಾಣದ ಪಾಲು ಇರುವುದಿಲ್ಲ ಎಂದು ತಿಳಿಸಿದ್ದಾರೆ.

ತುಂಗಭದ್ರಾ ಬೋರ್ಡ್‌ನ ಅಧ್ಯಕ್ಷ ರಂಗಾರೆಡ್ಡಿ, ಕಾರ್ಯದರ್ಶಿ ನಾಗಮೋಹನ್‌ ಸೇರಿದಂತೆ ಬೋರ್ಡ್‌ನ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.

Follow Us:
Download App:
  • android
  • ios